ವಿಜಯಸಾಕ್ಷಿ ಸುದ್ದಿ, ಬೆಟಗೇರಿ: ಗದಗ-ಬೆಟಗೇರಿ ಅವಳಿ ನಗರದ 4ನೇ ವಾರ್ಡಿನಲ್ಲಿ 23 ಲಕ್ಷ ರೂ ವೆಚ್ಚದ ಗಟಾರ ನಿರ್ಮಾಣ ಕಾಮಗಾರಿಗೆ ಗದಗ ಜಿಲ್ಲಾ ಯುವ ಕಾಂಗ್ರೆಸ್ ಸಮಿತಿಯ ಅಧ್ಯಕ್ಷ ಕೃಷ್ಣಗೌಡ ಪಾಟೀಲ ಸೋಮವಾರ ಭೂಮಿ ಪೂಜೆಯನ್ನು ನೆರವೇರಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಕೃಷ್ಣಗೌಡ ಪಾಟೀಲ, ಪಾಲಾ ಬದಾಮಿ ರಸ್ತೆಯಲ್ಲಿ ಅಸಂಖ್ಯಾತ ವಾಹನಗಳು ಸಂಚರಿಸುತ್ತವೆ. ಜನ ಮತ್ತು ವಾಹನ ಸಂಚಾರಕ್ಕೆ ತೊಂದರೆ ಮಾಡದೇ ಕಾಮಗಾರಿ ತ್ವರಿತಗತಿಯಲ್ಲಿ ಸಾಗಲಿ. ಗುಣಮಟ್ಟದ ಕಾಮಗಾರಿಗೆ ಆದ್ಯತೆ ನೀಡುವಂತಾಗಲಿ ಎಂದರು.
4ನೇ ವಾರ್ಡ್ನ ನಗರಸಭಾ ಸದಸ್ಯೆ ಶಕುಂತಲಾ ಎಚ್.ಅಕ್ಕಿ ಮಾತನಾಡಿ, ಈ ಕಾಮಗಾರಿ ಹಲವು ವರ್ಷಗಳಿಂದ ನೆನೆಗುದಿಗೆ ಬಿದ್ದಿತ್ತು. ಈ ಬೇಡಿಕೆ ಬಗ್ಗೆ ಗದಗ ಜಿಲ್ಲಾ ಉಸ್ತುವಾರಿ ಸಚಿವ ಎಚ್.ಕೆ. ಪಾಟೀಲರೊಂದಿಗೆ ಚರ್ಚಿಸಿದಾಗ ಲೋಕೋಪಯೋಗಿ ಇಲಾಖೆಯಿಂದ 23 ಲಕ್ಷ ರೂ ಅನುದಾನ ಬಿಡುಗಡೆಗೊಳಿಸಿ ಈ ಕಾಮಗಾರಿಗೆ ಚಾಲನೆ ನೀಡಿದ್ದಾರೆ. 4ನೇ ವಾರ್ಡಿನ ಸಮಸ್ತ ಜನತೆಯ ಪರವಾಗಿ ಸಚಿವರಿಗೆ ಅಭಿನಂದನೆಗಳು ಎಂದರು.
ಈ ಸಂದರ್ಭದಲ್ಲಿ ಕಾಂಗ್ರೆಸ್ ಮುಖಂಡರಾದ ಹೊಳೆಬಸಪ್ಪ ಅಕ್ಕಿ, ಲಕ್ಷ್ಮಣ ಭಜಂತ್ರಿ, ನಾಮ ನಿರ್ದೇಶಿತ ಸದಸ್ಯರಾದ ಮಹಮ್ಮದ ಹನೀಫ್ ಶಾಲಗಾರ, ನಗರಸಭಾ ಸದಸ್ಯೆ ಲಕ್ಷ್ಮವ್ವ ಮಾರುತಪ್ಪ ಭಜಂತ್ರಿ, ಹುಲ್ಲೇಶ ಭಜಂತ್ರಿ, ಆರ್.ಎಲ್. ಮೇಳಣ್ಣವರ, ಅಜ್ಜಣ್ಣ ಹುಗ್ಗೆನ್ನವರ, ಅಣ್ಣಪ್ಪ ಗಾರವಾಡ, ರಮೇಶ ಅರಮನಿ, ಪಂಚ ಗ್ಯಾರಂಟಿ ಅನುಷ್ಠಾನ ಸಮಿತಿ ಗದಗ ಅಧ್ಯಕ್ಷ ಅಶೋಕ ಮಂದಾಲಿ, ಯೂಥ್ ಕಾಂಗ್ರೆಸ್ ಉಪಾಧ್ಯಕ್ಷ ಅನ್ವರ ನದಾಫ್, ಮುಸ್ತಾಕ ತಾವರಗೇರಿ, ಬಸವರಾಜ ಕುಂದಗೋಳ, ಎಸ್.ಟಿ. ದೇವರಕೊಂಡಿ, ರವಿ ಬಾವರೆ, ಮಂಜು ನೀಲಿ ಮುಂತಾದವರಿದ್ದರು.