ಪ್ರಧಾನಮಂತ್ರಿ ಫಸಲ್ ಭಿಮಾ ಯೋಜನೆಯಲ್ಲಿ ಅವ್ಯವಹಾರ: ಲೋಕಾಯುಕ್ತ ತನಿಖೆಗೆ ಆಗ್ರಹ

0
Spread the love

ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ: ರಾಜ್ಯದಲ್ಲಿ ಪ್ರಧಾನಮಂತ್ರಿ ಫಸಲ್ ಭಿಮಾ ಯೋಜನೆಯಲ್ಲಿ ಏಜೆಂಟರ ಹಾವಳಿ ತಡೆಗಟ್ಟಬೇಕು ಮತ್ತು ಯೋಜನೆಯಲ್ಲಿ ಆಗುತ್ತಿರುವ ಅವ್ಯವಹಾರವನ್ನು ಲೋಕಾಯುಕ್ತ ತನಿಖೆಗೆ ಒಳಪಡಿಸಬೇಕು ಎಂದು ಆಗ್ರಹಿಸಿ ಸೋಮವಾರ ಕರ್ನಾಟಕ ರಕ್ಷಣಾ ವೇದಿಕೆ ಸ್ವಾಭಿಮಾನಿ ಸೇನೆಯ ಜಿಲ್ಲಾದ್ಯಕ್ಷ ಶರಣು ಗೋಡಿ ಹಾಗೂ ತಾಲೂಕಾಧ್ಯಕ್ಷ ನಾಗೇಶ ಅಮರಾಪುರ ನೇತೃತ್ವದಲ್ಲಿ ಲಕ್ಷ್ಮೇಶ್ವರದ ತಹಸೀಲ್ದಾರರ ಮೂಲಕ ಜಿಲ್ಲಾಧಿಕಾರಿಗಳಿಗೆ ಮನವಿ ಅರ್ಪಿಸಿದರು.

Advertisement

ಈ ವೇಳೆ ಮಾತನಾಡಿದ ಶರಣು ಗೋಡಿ ಮತ್ತು ನಾಗೇಶ ಅಮರಾಪೂರ, ಪ್ರಧಾನ ಮಂತ್ರಿ ಫಸಲ್ ಭಿಮಾ ಯೋಜನೆಯಲ್ಲಿ ಏಜೆಂಟರ ಹಾವಳಿ ಹೆಚ್ಚಾಗಿದ್ದು, ಬೆಳೆ ವಿಮೆ ನಿಜವಾದ ರೈತರಿಗೆ ಸಂಪೂರ್ಣವಾಗಿ ತಲುಪುತ್ತಿಲ್ಲ. ರಾಜ್ಯದಲ್ಲಿ ಅತಿವೃಷ್ಟಿ, ನೆರೆಹಾವಳಿಯಿಂದ ವ್ಯಾಪಕ ಬೆಳೆ ನಷ್ಟವಾಗಿದ್ದು, ಇಂತಹ ಸಂಕಷ್ಟದ ಕಾಲದಲ್ಲಿ ಬೆಳೆ ವಿಮೆ ರೈತರಿಗೆ ಆಸರೆಯಾಗಬೇಕಾಗಿತ್ತು. ಆದರೆ ಬಂಜರು ಭೂಮಿಗೆ ಫಸಲ್ ಭಿಮಾ ಯೋಜನೆ ಜಾರಿಯಾಗುತ್ತಿದ್ದು, ಏಜೆಂಟರ ಹಾವಳಿಯಿಂದ ನಿಜವಾದ ರೈತರಿಗೆ ಬೆಳೆ ವಿಮೆ ದೊರೆಯುತ್ತಿಲ್ಲ ಎಂದು ಆರೋಪಿಸಿದರು.

ಬ್ಯಾಂಕಿಗೆ ಹೋಗಿ ಬೆಳೆ ವಿಮೆ ತುಂಬಿದ ರೈತರಿಗೆ ಬೆಳೆ ವಿಮೆ ಪರಿಹಾರ ದೊರೆಯುತ್ತಿಲ್ಲ. ಆದರೆ ಶೇ 50-50 ಮಾತನಾಡಿಕೊಂಡು, ಏಜೆಂಟರ ಮೂಲಕ ತುಂಬಿದ ವಿಮಾ ಪ್ರಿಮಿಯಮ್‌ಗೆ ಪರಿಹಾರ ದೊರಕುತ್ತಿದೆ. ಅದರಲ್ಲೂ ಬಂಜರು ಭೂಮಿ ಇದ್ದವರು ಇದರ ಲಾಭ ಪಡೆದುಕೊಳ್ಳುತ್ತಿದ್ದು ದೊಡ್ಡ ಪ್ರಮಾಣದಲ್ಲಿ ಅವ್ಯವಹಾರ ನಡೆಯುತ್ತಿದೆ. ಇಂತಹ ಅಧಿಕಾರಿಗಳ ವಿರುದ್ಧ ಲೋಕಾಯುಕ್ತ ತನಿಖೆ ನಡೆಸಬೇಕೆಂದು ಅಗ್ರಹಿಸಿದರು.

ತಹಸೀಲ್ದಾರ ವಾಸುದೇವ ಸ್ವಾಮಿ ಮನವಿ ಸ್ವೀಕರಿಸಿ ಜಿಲ್ಲಾಧಿಕಾರಿಗಳಿಗೆ ತಲುಪಿಸುವದಾಗಿ ತಿಳಿಸಿದರು. ಈ ಸಂದರ್ಭದಲ್ಲಿ ಕರವೇ ಸ್ವಾಭಿಮಾನಿ ಸೇನೆ ಜಿಲ್ಲಾ ಕಾರ್ಯಾಧ್ಯಕ್ಷ ಇಸ್ಮಾಯಿಲ್ ಆಡೂರ, ಯಲ್ಲಪ್ಪ ಹಂಜಗಿ, ಕೈಸರ ಅಹ್ಮದಅಲಿ, ಆಸೀಫ್ ಯಳಿವಾರ, ಮುತ್ತಣ್ಣ ಗಡೆಪ್ಪನವರ, ಗೌಸ ಜಮಖಂಡಿ, ಜುಬೇರ್ ಮುಲ್ಲಾ, ಗೌಸ್ ಸವಣೂರ, ಶರಣಪ್ಪ ಬಸಾಪುರ, ಪೀರಸಾಬ್ ರಿತ್ತಿ, ತನ್ವೀರ್ ರಿತ್ತಿ, ಮಾರುತಿ ಭಜಂತ್ರಿ, ಬಸವರಾಜ್ ಅಮರಾಪುರ್, ಅಯ್ಯಪ್ಪ ಪಾಟೀಲ್, ಮುಕ್ತಾರ ಜಮಖಂಡಿ, ನಾಸಿರ್ ಸಿದ್ದಿ, ನದಿಮ್ ಸೇರಿದಂತೆ ಅನೇಕರು ಇದ್ದರು.


Spread the love

LEAVE A REPLY

Please enter your comment!
Please enter your name here