ಕೈ ಕೈ ಹಿಡಿದು ಕೋರ್ಟ್‌ ನಿಂದ ಹೊರ ಬಂದ ದರ್ಶನ್‌, ಪವಿತ್ರಾ ಗೌಡ!

0
Spread the love

ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಕೇಸ್‌ ನಲ್ಲಿ ಸುಮಾರು ಏಳು ತಿಂಗಳ ಕಾಲ ಜೈಲಿನಲ್ಲಿದ್ದ ನಟ ದರ್ಶನ್‌ ಹಾಗೂ ನಟಿ ಪವಿತ್ರಾ ಗೌಡ ಜಾಮೀನಿನ ಮೂಲಕ ಹೊರ ಬಂದಿದ್ದಾರೆ. ಇಂದು ಪ್ರಕರಣದ ವಿಚಾರಣೆ ಇದ್ದ ಹಿನ್ನೆಲೆಯಲ್ಲಿ ಇಬ್ಬರು ಕೋರ್ಟ್‌ ಗೆ ಹಾಜರಾಗಿದ್ದರು. ಕೋರ್ಟ್‌ ನಲ್ಲಿ ಅಕ್ಕ ಪಕ್ಕ ಇದ್ದ ದರ್ಶನ್‌ ಹಾಗೂ ಪವಿತ್ರಾ ಗೌಡ ಕೋರ್ಟ್‌ ನಿಂದ ಹೊರ ಬರುವ ವೇಳೆ ಕೈ ಕೈ ಹಿಡಿದು ಬಂದಿದ್ದಾರೆ ಎನ್ನಲಾಗ್ತಿದೆ.

Advertisement

ಜಾಮೀನು ಪಡೆದು ಹೊರಗಿರುವ ನಟ ದರ್ಶನ್ ಹಾಗೂ ಪವಿತ್ರಾ ಗೌಡ ಇಬ್ಬರು ಇಂದು ಕೋರ್ಟ್​ಗೆ ಹಾಜರಾಗಿದ್ರು. ಕೋರ್ಟ್‌ ಹಾಲ್‌ ನಲ್ಲಿಪವಿತ್ರಾಳಿಂದ ದೂರ ನಿಲ್ತಿದ್ದ ದರ್ಶನ್​ಗೆ  ನ್ಯಾಯಾಧೀಶರೇ ಪವಿತ್ರಾ ಪಕ್ಕ ನಿಲ್ಲುವಂತೆ ಸೂಚನೆ ನೀಡಿದ್ದಾರೆ.

ಕೆಲ ಕಾಲ ವಾದದ ಬಳಿಕ ಕೋರ್ಟ್​ ವಿಚಾರಣೆಯನ್ನು ಜುಲೈ 10ಕ್ಕೆ ಮುಂದೂಡಿಕೆ ಮಾಡಿದೆ. ಇಬ್ಬರು ಕೋರ್ಟ್​ನಿಂದ ಹೊರಗೆ ಬರುವಾಗ ಕೈ ಕೈ ಹಿಡಿದುಕೊಂಡು ಬಂದಿದ್ದಾರೆ ಎನ್ನಲಾಗ್ತಿದೆ. ದರ್ಶನ್​​ ಕೈಯನ್ನು ಪವಿತ್ರಾ ಗೌಡ ಹಿಡಿದುಕೊಂಡಿದ್ರು ಎನ್ನಲಾಗ್ತಿದೆ. ಇದನ್ನು ನೋಡಿದ ಅಭಿಮಾನಿಗಳು ಶಾಕ್ ಆಗಿದ್ದು, ಇಬ್ಬರು ಮತ್ತೆ ಒಂದಾದ್ರಾ ಎಂದು ಪ್ರಶ್ನೆ ಮಾಡ್ತಿದ್ದಾರೆ.

ದರ್ಶನ್ ಆ್ಯಂಡ್ ಗ್ಯಾಂಗ್ ವಿರುದ್ಧ ಕೊಲೆ ಕೇಸ್​ಗೆ ಸಂಬಂಧಿಸಿದಂತೆ ಪೊಲೀಸರು ಈಗಾಗಲೇ ಸಾವಿರಾರು ಪುಟಗಳ ಚಾರ್ಜ್​ ಶೀಟ್ ಸಲ್ಲಿಕೆ ಮಾಡಿದ್ದಾರೆ. ಇದೀಗ ತನಿಖಾ ತಂಡ ಕೇಸ್​ಗೆ ಸಂಬಂಧಿಸಿದ್ದಂತೆ ಕೋರ್ಟ್ ಗೆ ಮತ್ತೊಂದು ಹೆಚ್ಚುವರಿ ಚಾರ್ಜ್ ಶೀಟ್ ಸಲ್ಲಿಕೆ ಮಾಡಿದ್ದಾರೆ ಎನ್ನಲಾಗ್ತಿದೆ.


Spread the love

LEAVE A REPLY

Please enter your comment!
Please enter your name here