ರೇಣುಕಾ ಸ್ವಾಮಿ ಕೊಲೆ ಪ್ರಕರಣದ ಆರೋಪಿಗಳಾದ ನಟ ದರ್ಶನ್ ಹಾಗೂ ಪವಿತ್ರಾ ಗೌಡ ಸೇರಿದಂತೆ ಇನ್ನೂ ಕೆಲ ಆರೋಪಿಗಳು ವಿಚಾರಣೆಗೆ ನ್ಯಾಯಾಲಯಕ್ಕೆ ಹಾಜರಾಗಿದ್ದರು. ವಿಚಾರಣೆ ಮುಗಿಸಿ ಹೊರಡುವ ವೇಳೆ ದರ್ಶನ್ ಹಾಗೂ ಪವಿತ್ರಾ ಗೌಡ ಒಂದೇ ಲಿಫ್ಟ್ ನಲ್ಲಿ ಬಂದಿದ್ದು ಈ ವೇಳೆ ಪವಿತ್ರಾ ಗೌಡ ಅವರು ಪಟ್ಟು ಹಿಡಿದು ದರ್ಶನ್ ಅವರ ಮೊಬೈಲ್ ನಂಬರ್ ಪಡೆದುಕೊಂಡಿದ್ದಾರೆ ಎನ್ನಲಾಗುತ್ತಿದೆ.
ವಿಚಾರಣೆಗೆ ನ್ಯಾಯಾಲಯಕ್ಕೆ ಹಾಜರಾದ ದರ್ಶನ್ ಹಾಗೂ ಪವಿತ್ರಾ ಗೌಡ ಅವರುಗಳು ಪಕ್ಕ-ಪಕ್ಕದಲ್ಲೇ ನಿಂತಿದ್ದು ಈ ವೇಳೆ ತುಸು ಮಾತುಕತೆ ನಡೆಸಿದ್ದಾರೆ. ವಿಚಾರಣೆ ಮುಗಿಸಿ ಹೊರಬಂದಾಗಲೂ ಸಹ ಇಬ್ಬರೂ ಒಟ್ಟಿಗೆ ಬಂದಿದ್ದಾರೆ. ಹೊರಗೆ ಬಂದಾಗಲೂ ಸಹ ಒಟ್ಟಿಗೆ ಲಿಫ್ಟ್ನಲ್ಲಿ ಬಂದಿದ್ದಾರೆ. ಈ ವೇಳೆ ದರ್ಶನ್ ಹಾಗೂ ಪವಿತ್ರಾ ಗೌಡ ಅವರುಗಳು ಪರಸ್ಪರ ಮಾತನಾಡಿದ್ದಾರೆ. ಈ ವೇಳೆ ಪವಿತ್ರಾ ಗೌಡ ಅವರು ತಮ್ಮ ಕಷ್ಟ ಹೇಳಿಕೊಂಡರಂತೆ. ಆಗ ದರ್ಶನ್, ಪವಿತ್ರಾ ಅವರನ್ನು ಅಪ್ಪಿಕೊಂಡು ಸಮಾಧಾನ ಮಾಡಿದ್ದಾರೆ. ನಾನಿದ್ದೀನಿ ಟೆನ್ಷನ್ ಬೇಡ ಎಂದು ಭರವಸೆ ನೀಡಿದರಂತೆ ಎನ್ನುವ ಮಾತುಕಳು ಕೇಳಿ ಬಂದಿದೆ.
ಈ ವೇಳೆ ಪವಿತ್ರಾ ಗೌಡ ಅವರು ದರ್ಶನ್ ಅವರ ಹೊಸ ಮೊಬೈಲ್ ನಂಬರ್ ಅನ್ನು ಕೇಳಿದರಂತೆ. ಈ ವೇಳೆ ಸ್ವತಃ ದರ್ಶನ್ ಅವರು ಪವಿತ್ರಾ ಗೌಡ ಅವರ ನಂಬರ್ ಕರೆ ಕರೆ ಮಾಡಿ ತಮ್ಮ ಹೊಸ ನಂಬರ್ ನೀಡಿದ್ದಾರೆ. ರೇಣುಕಾ ಸ್ವಾಮಿ ಕೊಲೆ ಪ್ರಕರಣದ ಬಳಿಕ ದರ್ಶನ್ ಹಾಗೂ ಪವಿತ್ರಾ ಗೌಡ ಪರಸ್ಪರ ಸಂಪರ್ಕದಲ್ಲಿ ಇಲ್ಲ. ದರ್ಶನ್, ಜೈಲಿಗೆ ಹೋಗಿ ಬಂದ ಬಳಿಕ ಪತ್ನಿ ವಿಜಯಲಕ್ಷ್ಮಿ ಅವರೊಟ್ಟಿಗೆ ಆತ್ಮೀಯತೆ ಹೆಚ್ಚಾಗಿದೆ. ಇತ್ತ ಪವಿತ್ರಾ ಗೌಡ ಜೊತೆಗೆ ಸಂಬಂಧವನ್ನು ಕಡಿದುಕೊಂಡಿದ್ದ ದರ್ಶನ್ ಇದೀಗ ಮತ್ತೆ ಗೆಳೆತಿಗೆ ಮೊಬೈಲ್ ನಂಬರ್ ಕೊಟ್ಟಿದ್ದಾರೆ.
ಕಳೆದ ಎರಡು ದಿನಗಳ ಹಿಂದಷ್ಟೇ ವಿಜಯಕ್ಷ್ಮಿ ಅವರು ದರ್ಶನ್ ಅವರೊಟ್ಟಿಗೆ ವಿವಾಹ ವಾರ್ಷಿಕೋತ್ಸವ ಆಚರಣೆ ಮಾಡಿಕೊಂಡಿದ್ದಾರೆ. ಅದರ ಬೆನ್ನಲ್ಲೆ ಪವಿತ್ರಾ ಅವರು ದರ್ಶನ್ ಅವರ ಬಳಿ ನಂಬರ್ ಪಡೆದು ಮತ್ತೆ ಸಂಪರ್ಕಕ್ಕೆ ಬರುವ ಪ್ರಯತ್ನ ಮಾಡಿದ್ದಾರೆ. ಇದು ವಿಜಯಲಕ್ಷ್ಮೀ ಅವರಿಗೆ ಟಕ್ಕರ್ ಕೊಡಲು ಪವಿತ್ರಾ ಮಾಡಿದ್ದಾರೆ ಎನ್ನಲಾಗುತ್ತಿದೆ.