ನರೇಗಲ್ಲ ಪಟ್ಟಣದ ಐತಿಹಾಸಿಕ ದರ್ಗಾದ ಉರುಸಿನ ಅಂಗವಾಗಿ ಸಮೀಪದ ಕೋಚಲಾಪೂರ ಗ್ರಾಮದ ರಡ್ಡೇರ ಅವರ ಮನೆಯಿಂದ ಶ್ರೀ ಲಕ್ಷ್ಮೀದೇವಿಯನ್ನು ಕರೆತರಲು ಬುಧವಾರ ಪಲ್ಲಕ್ಕಿ ಉತ್ಸವವು ವಿವಿಧ ವಾದ್ಯ ವೃಂದಗಳ ನಡುವೆ ದರ್ಗಾದಿಂದ ಕೋಚಲಾಪೂರ ಗ್ರಾಮದವರೆಗೆ ಸಾಗಿ ಲಕ್ಷ್ಮೀಯೊಂದಿಗೆ ಮರಳಿ ದರ್ಗಾಕ್ಕೆ ತಲುಪಿತು. ಹಜರತ್ ಮಂಜೂರ ಹುಸೇನ ಶ್ಯಾವಲಿ ಶರಣರು ನೇತೃತ್ವ ವಹಿಸಿದ್ದರು.ಪಟ್ಟಣ ಸೇರಿದಂತೆ ಸುತ್ತಲಿನ ಗ್ರಾಮಗಳ ಸಾವಿರಾರು ಭಕ್ತರು ಇದ್ದರು.
Advertisement