ಬೆಂಗಳೂರು:– ರನ್ಯಾರಾವ್ಗೆ ಪರಮೇಶ್ವರ್ ಶಿಕ್ಷಣ ಸಂಸ್ಥೆ ಸಾಲ ಕೊಟ್ಟಿರಬಹುದು ಎಂದು ಸಚಿವ ರಾಮಲಿಂಗಾ ರೆಡ್ಡಿ ಹೇಳಿದ್ದಾರೆ.
Advertisement
ನಗರದಲ್ಲಿ ಮಾತನಾಡಿದ ಅವರು, ರನ್ಯಾರಾವ್, ಪರಮೇಶ್ವರ್ ಶಿಕ್ಷಣ ಸಂಸ್ಥೆಗೆ ಹಣ ಕೊಟ್ಟರೆ ತಪ್ಪಾಗುತ್ತೆ. ಆದ್ರೆ ರನ್ಯಾರಾವ್ ಅವರಿಗೆ ಶಿಕ್ಷಣ ಸಂಸ್ಥೆ ಸಾಲ ಕೊಟ್ಟಿರಬಹುದು. ನೀವು ಹೇಳ್ತಿರೋ 40 ಲಕ್ಷದ ಬಗ್ಗೆ ನನಗೆ ಗೊತ್ತಿಲ್ಲ. ರನ್ಯಾರಾವ್ ಪರಮೇಶ್ವರ್ಗೆ ಪರಿಚಯ ಇರಬಹುದು. ಅವರ ತಂದೆ ರಾಮಚಂದ್ರ ರಾವ್ ಐಪಿಎಸ್ ಅಧಿಕಾರಿ. ರನ್ಯಾರಾವ್ ಮದುವೆಗೆ ಎಲ್ಲರೂ ಹೋಗಿದ್ದಾರೆ. ರಾಮಚಂದ್ರ ರಾವ್ ಮಗನ ಮದುವೆಗೂ ಎಲ್ಲ ಹೋಗಿದ್ದಾರೆ. ವಿಪಕ್ಷದವರು ಹೋಗಿದ್ದಾರೆ. ಅದರಲ್ಲಿ ಏನಿದೆ ಎಂದು ಪ್ರಶ್ನಿಸಿದರು.
ಕೇಂದ್ರ ಸರ್ಕಾರವು ಐಟಿ ಹಾಗೂ ಇಡಿಯ ದುರ್ಬಳಕೆ ಮಾಡಿಕೊಳ್ತಿದೆ. ಪರಮೇಶ್ವರ್ ಶಿಕ್ಷಣ ಸಂಸ್ಥೆ ಮೇಲಿನ ಇಡಿ ದಾಳಿ ರಾಜಕೀಯ ಪ್ರೇರಿತ ಎಂದು ಕಿಡಿಕಾರಿದರು.


