HomeEntertainmentನಟ ದರ್ಶನ್, ವಿಜಯಲಕ್ಷ್ಮಿಗೆ ಮತ್ತೊಂದು ಶಾಕ್: ಕೋರ್ಟ್’ನಿಂದ ಸಮನ್ಸ್! ಯಾಕೆ ಗೊತ್ತಾ..?

ನಟ ದರ್ಶನ್, ವಿಜಯಲಕ್ಷ್ಮಿಗೆ ಮತ್ತೊಂದು ಶಾಕ್: ಕೋರ್ಟ್’ನಿಂದ ಸಮನ್ಸ್! ಯಾಕೆ ಗೊತ್ತಾ..?

For Dai;y Updates Join Our whatsapp Group

Spread the love

ನಟ ದರ್ಶನ್ ವಿರುದ್ಧ ಮತ್ತೊಂದು ಕೇಸ್ ದಾಖಲಾಗಿದೆ. ದರ್ಶನ್ ಮಾತ್ರವಲ್ಲ ಪತ್ನಿ ವಿಜಯಲಕ್ಷ್ಮೀ ವಿರುದ್ಧವೂ ಕ್ರಿಮಿನಲ್ ಕೇಸ್ ದಾಖಲಾಗಿದ್ದು, ಇಬ್ಬರಿಗೂ ಕೋರ್ಟ್ ಸಮನ್ಸ್ ಜಾರಿ ಮಾಡಿದೆ. ಹೌದು ನಿಷೇಧಿತ ಬಾತುಕೋಳಿಗಳನ್ನ ಕೂಡಿಹಾಕಿದ ಆರೋಪದ ಆಡಿ ಅರಣ್ಯ ಇಲಾಖೆ ಅಧಿಕಾರಿಗಳು ದರ್ಶನ್, ವಿಜಯಲಕ್ಷ್ಮಿ, ನಾಗರಾಜ್ ವಿರುದ್ಧ ವನ್ಯಜೀವಿ ಸಂರಕ್ಷಣಾ ಕಾಯ್ದೆಯ ಅಡಿ ಟಿ.ನರಸೀಪುರದ ಸಿವಿಲ್ ನ್ಯಾಯಾಲಯಕ್ಕೆ ಖಾಸಗಿ ದೂರನ್ನು ನೀಡಿದ್ದರು.

ಟಿ.ನರಸೀಪುರ ತಾಲೂಕಿನ ಕೆಂಪಯ್ಯನ ಹುಂಡಿಯ ವಿಜಯಲಕ್ಷ್ಮೀ ಮಾಲೀಕತ್ವದ ಜಾಗದಲ್ಲಿರುವ ತೂಗುದೀಪ ಫಾರಂ ಹೌಸ್ನಲ್ಲಿ ಅಕ್ರಮವಾಗಿ ವಿದೇಶಿ ಬಾತುಕೋಳಿಗಳನ್ನು ಸಾಕಲಾಗುತ್ತದೆ ಎಂಬ ಆರೋಪ ಕೇಳಿಬಂದಿದೆ. ದರ್ಶನ್ ಅವರು ಯೂಟ್ಯೂಬ್ ವಾಹಿನಿಯೊಂದಕ್ಕೆ ಸಂದರ್ಶನ ನೀಡಿದ್ದರು. ಈ ಸಂದರ್ಶನದಲ್ಲಿ ಫಾರಂ ಹೌಸ್ನಲ್ಲಿರುವ ಪ್ರಾಣಿ, ಪಕ್ಷಿಗಳ ಬಗ್ಗೆ ವಿವರಿಸಿದ್ದರು.

ಮಂಗೋಲಿಯಾ, ರಷ್ಯಾ, ಚೀನಾದಲ್ಲಿ ಕಾಣಿಸಿಕೊಳ್ಳುವ Bar-headed goose ಬಾತುಕೋಳಿಯ ಬಗ್ಗೆ ದರ್ಶನ್ ಮಾತನಾಡಿದ್ದರು. ಸಂದರ್ಶನ ಪ್ರಕಟವಾಗುತ್ತಿದ್ದಂತೆ ಸಾಮಾಜಿಕ ಜಾಲತಾಣದಲ್ಲಿ ಇದು ಚರ್ಚೆಗೆ ಕಾರಣವಾಗಿತ್ತು. ನಂತರ ಅರಣ್ಯ ಇಲಾಖೆ ಅಧಿಕಾರಿಗಳು ಫಾರಂ ಹೌಸ್ ಮೇಲೆ ದಾಳಿ ನಡೆಸಿದ್ದರು.

ಪ್ರಾಥಮಿಕ ತನಿಖೆ ನಡೆಸಿದ ಬಳಿಕ ವರದಿ ಸಮೇತ ಖಾಸಗಿ ದೂರು ನೀಡಿದ್ದರು.   ಅರಣ್ಯ ಇಲಾಖೆ ಅಧಿಕಾರಿಗಳ ತನಿಖೆಯಲ್ಲಿ ಮೇಲ್ನೋಟಕ್ಕೆ ಆರೋಪ ಸಾಬೀತಾಗಿರುವ ಕಾರಣ ಕೋರ್ಟ್ ಸಮನ್ಸ್ ಜಾರಿ ಮಾಡಿ ಜುಲೈ 4 ರಂದು ದರ್ಶನ್, ವಿಜಯಲಕ್ಷ್ಮಿ ಮತ್ತು ನಾಗರಾಜ್ಗೆ ಖದ್ದು ಹಾಜರಾಗುವಂತೆ ಸಮನ್ಸ್ ಜಾರಿ ಮಾಡಿದೆ.


Spread the love
Vijaya Sakshi
Vijaya Sakshi
Vijayasakshi is a Kannada Daily News Paper Publishing From Gadag. Get Latest Gadag District News Live Updates Online In Vijayasakshi.Com Vijayasakshi Kannada Daily Newspaper Provide News On Gadag District Including Karnataka, India News In Kannada. Contact-9448326533/9019256545 E-mail-vijayasakshidaily@gmail.com

LEAVE A REPLY

Please enter your comment!
Please enter your name here

E-Paper

E-paper

Must Read

spot_img
error: Content is protected !!