ಶ್ರೀಲಂಕಾದ ಆಲ್ರೌಂಡರ್ ಏಂಜೆಲೊ ಮ್ಯಾಥ್ಯೂಸ್ ಟೆಸ್ಟ್ ಕ್ರಿಕೆಟ್ಗೆ ವಿದಾಯ ಹೇಳಿದ್ದಾರೆ. ತಮ್ಮ ಅದ್ಭುತ ಬ್ಯಾಟಿಂಗ್ ಜೊತೆಗೆ, ತಂಡವನ್ನು ಮುನ್ನಡೆಸುವಲ್ಲಿ ಪ್ರಮುಖ ಪಾತ್ರ ವಹಿಸಿದರು. ಬಾಂಗ್ಲಾದೇಶ ವಿರುದ್ಧದ ಮುಂಬರುವ ಟೆಸ್ಟ್ ಪಂದ್ಯದ ನಂತರ ಟೆಸ್ಟ್ ಸ್ವರೂಪದಿಂದ ನಿವೃತ್ತಿ ಹೊಂದಲಿರುವ ಮ್ಯಾಥ್ಯೂಸ್, ವೈಟ್-ಬಾಲ್ ಕ್ರಿಕೆಟ್ಗೆ ಲಭ್ಯವಿರುವುದಾಗಿ ಹೇಳಿದ್ದಾರೆ.
ಹೌದು ಗಾಳೆ ಅಂಗಳದಲ್ಲಿ ನಡೆಯುವ ಟೆಸ್ಟ್ ಮ್ಯಾಥ್ಯೂಸ್ ಅವರ 119ನೇ ಟೆಸ್ಟ್ ಪಂದ್ಯವಾಗಿದೆ. 2009ರಲ್ಲಿ ಇದೇ ಗಾಲೆ ಕ್ರೀಡಾಂಗಣದಲ್ಲೇ ಟೆಸ್ಟ್ ಕ್ರಿಕೆಟ್ಗೆ ಪದಾರ್ಪಣೆ ಮಾಡಿದ್ದ ಮ್ಯಾಥ್ಯೂಸ್ ಅದೇ ಅಂಗಳದಲ್ಲಿ ತಮ್ಮ ಕೊನೆಯ ಟೆಸ್ಟ್ ಪಂದ್ಯವನ್ನಾಡಲಿದ್ದಾರೆ.
ಈ ಕುರಿತು ಎಕ್ಸ್ನಲ್ಲಿ ಭಾವು ಸಂದೇಶ ಹಂಚಿಕೊಂಡಿರುವ ಏಂಜಲೊ ಮ್ಯಾಥ್ಯೂಸ್, ನಾನು ಈ ಆಟಕ್ಕೆ ಕೃತಜ್ಞನಾಗಿದ್ದೇನೆ. ಜೊತೆಗೆ ವೃತ್ತಿಜೀವನದುದ್ದಕ್ಕೂ ನನ್ನನ್ನು ಬೆಂಬಲಿಸಿದ ಸಾವಿರಾರು ಶ್ರೀಲಂಕಾ ಕ್ರಿಕೆಟ್ ಅಭಿಮಾನಿಗಳಿಗೆ ಕೃತಜ್ಞನಾಗಿದ್ದೇನೆ.
ಈ ಟೆಸ್ಟ್ ತಂಡವು ಪ್ರತಿಭಾನ್ವಿತರ ತಂಡವಾಗಿದೆ ಎಂದು ನಾನು ನಂಬುತ್ತೇನೆ, ಇದರಲ್ಲಿ ಅನೇಕ ಭವಿಷ್ಯದ ಮತ್ತು ಪ್ರಸ್ತುತ ಶ್ರೇಷ್ಠರು ಆಟವಾಡುತ್ತಿದ್ದಾರೆ. ಮುಂದಿನ ಪೀಳಿಗೆಗೆ ಅವಕಾಶ ಕಲ್ಪಿಸಲು ಇದು ಉತ್ತಮ ಸಮಯವೆಂದು ಭಾವಿಸುತ್ತೇನೆ ಎಂದು ಭಾವುಕರಾಗಿ ಬರೆದುಕೊಂಡಿದ್ದಾರೆ.