ಬೆಂಗಳೂರು: ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ಇಂದು ಕರ್ನಾಟಕ ಸಾಮಾನ್ಯ ಪ್ರವೇಶ ಪರೀಕ್ಷೆಫಲಿತಾಂಶವನ್ನು ಪ್ರಕಟಿಸಲಿದೆ. KCET 2025 ಫಲಿತಾಂಶವನ್ನು ಬೆಳಿಗ್ಗೆ 11:30ಕ್ಕೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಕಚೇರಿಯಲ್ಲಿ ಉನ್ನತ ಶಿಕ್ಷಣ ಸಚಿವ ಡಾ. ಸುಧಾಕರ್ ಸುದ್ದಿಗೋಷ್ಠಿ ನಡೆಸಿ ಫಲಿತಾಂಶ ಪ್ರಕಟಿಸಲಿದ್ದಾರೆ. ಬಳಿಕ ಮಧ್ಯಾಹ್ನ 2 ಗಂಟೆ ನಂತರ ಇಲಾಖೆಯ ವೆಬ್ ಸೈಟ್ನಲ್ಲಿ ಫಲಿತಾಂಶ ಲಭ್ಯವಾಗಲಿದೆ ಎಂದು ಕೆಇಎ ತಿಳಿಸಿದೆ.
KCET ಫಲಿತಾಂಶ ಪ್ರಕಟವಾಗಲಿರುವ ಅಧಿಕೃತ ವೆಬ್ಸೈಟ್ಗಳು
ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ಏಪ್ರಿಲ್ 15, 16 ಮತ್ತು ಏಪ್ರಿಲ್ 17ರಂದು KCET ಪರೀಕ್ಷೆ ನಡೆಸಲಾಗಿತ್ತು. ವಿದ್ಯಾರ್ಥಿಗಳು cetonline.karnataka.gov.in ಅಥವಾ karresults.nic.in ವೆಬ್ಸೈಟ್ಗಳಲ್ಲಿ ತಮ್ಮ ಫಲಿತಾಂಶವನ್ನು ನೋಡಬಹುದಾಗಿದೆ.
* karresults.nic.in
* kea.kar.nic.in
* cetonline.karnataka.gov.in
ಸ್ಕೋರ್ ಕಾರ್ಡ್ ಡೌನ್ಲೋಡ್ ಮಾಡುವುದು ಹೇಗೆ?
ಪರೀಕ್ಷೆ ಬರೆದ ಅಭ್ಯರ್ಥಿಗಳು ಫಲಿತಾಂಶ ಪ್ರಕಟವಾದ ನಂತರ ತಮ್ಮ ಅಧಿಕೃತ ವೆಬ್ಸೈಟ್ನಲ್ಲಿ ತಮ್ಮ KCET 2025ರ ಸ್ಕೋರ್ ಕಾರ್ಡ್ಗಳನ್ನು ಡೌನ್ಲೋಡ್ ಮಾಡಬಹುದು. ಈ ಕೆಳಗಿನ ಸರಳ ಹಂತಗಳನ್ನು ಅನುಸರಿಸಿದರೆ ಫಲಿತಾಂಶ ಪಡೆಯಬಹುದು.
* ಮೊದಲಿಗೆ KCE ಅಧಿಕೃತ ವೆಬ್ಸೈಟ್ಗೆ ಹೋಗಿ. cetonline.karnataka.gov.in, cetonline.karnataka.gov.in.
* ಮುಖಪುಟದಲ್ಲಿ Admissions ವಿಭಾಗಕ್ಕೆ ಹೋಗಿ UGCET-2025 ಆಯ್ಕೆ ಮಾಡಿ.
* ಇಲ್ಲಿ ‘ಯುಜಿ ಸಾಮಾನ್ಯ ಪ್ರವೇಶ ಪರೀಕ್ಷೆ 2025 ಫಲಿತಾಂಶಗಳು’ ಅಥವಾ ‘ಕೆಸಿಇಟಿ ಫಲಿತಾಂಶಗಳು 2025 ಡೌನ್ಲೋಡ್ ಮಾಡಿ’ ಎಂದು ಹೇಳುವ ಲಿಂಕ್ ಕ್ಲಿಕ್ ಮಾಡಿ.
* ನಿಮ್ಮ ಲಾಗಿನ್ ಕ್ರೆಡೆನ್ಸಿಯಲ್ ನಮೂದಿಸಿದ ಬಳಿಕ Submit ಮೇಲೆ ಕ್ಲಿಕ್ ಮಾಡಿ.
* ನಿಮ್ಮ KCET 2025ರ ಫಲಿತಾಂಶ ಪರದೆಯ ಮೇಲೆ ಕಾಣುತ್ತದೆ.
* ಫಲಿತಾಂಶವನ್ನ ಡೌನ್ಲೋಡ್ ಮಾಡಿಕೊಂಡು ಪ್ರಿಂಟ್ ಔಟ್ ತೆಗೆದುಕೊಳ್ಳಿ.