ಬೆಂಗಳೂರು: ಬಾಣಂತಿಯರು ಹೆಚ್ಚು ಜಾಗ್ರತೆಯಿಂದ ಇರ್ಬೇಕು ಎಲ್ಲರೂ ಮಾಸ್ಕ್ ಧರಿಸಬೇಕು ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಹೇಳಿದ್ದಾರೆ. ನಗರದಲ್ಲಿ ಮಾತನಾಡಿದ ಅವರು, ಕೋವಿಡ್ ಬಂದವರಿಗೆ ಮೈಲ್ಡ್ ಸಿಂಟಮ್ಸ್ ಇದ್ದು, ಗಂಭೀರವಾದ ಸಮಸ್ಯೆಗಳು ಏನೂ ಇಲ್ಲ.
ಪ್ರಕರಣಗಳು ತಮ್ಮಮನೆಯಲ್ಲೇ ಉಳಿಯಬೇಕು. ಬಾಣಂತಿಯರು ಹೆಚ್ಚು ಜಾಗ್ರತೆಯಿಂದ ಇರ್ಬೇಕು ಎಲ್ಲರೂ ಮಾಸ್ಕ್ ಧರಿಸಬೇಕು ಎಂದಿದ್ದಾರೆ. ಯಾರು ಭಯ ಪಡುವುದು ಬೇಡ, ಅನಾವಶ್ಯಕವಾಗಿ ಸದ್ಯಕ್ಕೆ ಭಯ ಬೇಡ. ಮಾಸ್ಕ್ ಧರಿಸಿದರೆ ನಮಗೆ ಒಳ್ಳೆಯದು ಎಂದು ಸಚಿವರು ತಿಳಿಸಿದ್ರು.
ಸ್ವಚ್ಛತೆ ಕಾಪಾಡಿಕೊಳ್ಳಿ, ಸ್ಯಾನಿಟೈಸರ್ ಬಳಸಿ. ಊರುಗಳಿಗೆ ಓಡಾಡುವುದಕ್ಕೆ ತೊಂದರೆಯಿಲ್ಲ. ಜನರಲ್ಲಿ ಬೇಕಾದರೆ ಜಾಗೃತಿ ಮೂಡಿಸಿ. ನಾವು ಟೆಸ್ಟಿಂಗ್ ಕಿಟ್ ತೆಗೆದಿರಿಸಿದ್ದೇವೆ ಮತ್ತು ಟೆಸ್ಟ್ ಮಾಡಲೇಬೇಕಾದ ಟೆಸ್ಟ್ ಮಾಡುತ್ತೇವೆ. ಜ್ವರ ಬಂದವರು ತಮ್ಮಮನೆಯಲ್ಲೇ ಕಡಿಮೆಯಾಗುವವರೆಗೂ ಹೊರಬರಬೇಡಿ. COVID ಪ್ರಕರಣಗಳು ಅಷ್ಟೇನು ಗಂಭೀರ ಅಲ್ಲ, ಯಾರೂ ಆತಂಕ ಪಡುವುದು ಬೇಡ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ತಿಳಿಸಿದ್ದಾರೆ.