ಬಾಲಿವುಡ್ ಬೆಡಗಿ ಆಲಿಯಾ ಭಟ್ ಇತ್ತೀಚೆಗೆ ಪ್ರತಿಷ್ಠಿತ ಕಾನ್ಸ್ ಫಿಲ್ಮ್ ಚಿತ್ರೋತ್ಸವದಲ್ಲಿ ಹೆಜ್ಜೆ ಹಾಕಿದ್ದರು. ಈ ವೇಳೆ ನಟಿಯ ಹೊಟ್ಟೆ ಕೊಂಚ ಉಬ್ಬಿದಂತೆ ಕಾಣಿಸಿಕೊಂಡ ವಿಡಿಯೋವೊಂದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಈ ಬೆನ್ನಲ್ಲೇ ನಟಿ ಮತ್ತೆ ಗರ್ಭಿಣಿಯಾಗಿದ್ದಾರೆ ಎಂಬ ವದಂತಿ ಜೋರಾಗಿಯೇ ಕೇಳಿ ಬಂದಿದೆ.
ಶುಕ್ರವಾರ ಕಾನ್ ಫಿಲಂ ಫೆಸ್ಟಿವಲ್‌ನಲ್ಲಿ ನಟಿ ಆಲಿಯಾ ಭಟ್ ಕಾಣಿಸಿಕೊಂಡ ರೀತಿ ನಟಿ ಮತ್ತೆ ಗರ್ಭಿಣಿಯಾಗಿದ್ದಾರಾ ಎಂಬ ವದಂತಿಗೆ ಕಾರಣವಾಗಿದೆ.
ಖಾನ್ ಫೆಸ್ಟಿವಲ್‌ಗೆ ನಟಿ ಶಿಯಾಪರೆಲ್ಲಿ ಗೌನ್‌ನಲ್ಲಿ ಎಂಟ್ರಿ ಕೊಟ್ಟಿದ್ದಾಗ ಫ್ಯಾಷನ್ ಪೋಸ್ ಕೊಟ್ಟರು.ಈ ವೇಳೆ ಅವರ ಹೊಟ್ಟೆಯ ಭಾಗ ಸ್ವಲ್ಪ ಉಬ್ಬಿದಂತೆ ಕಂಡುಬಂದಿತ್ತು. ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದ್ದಂತೆ ನೆಟ್ಟಿಗರು ಆಲಿಯಾ ಮತ್ತೆ ಪ್ರೆಗ್ನೆಂಟ್ ಆಗಿದ್ದಾರಾ? ಅಂತ ಪ್ರಶ್ನೆ ಮಾಡ್ತಿದ್ದಾರೆ. ಆದ್ರೆ ಆಲಿಯಾ ಭಟ್- ರಣಬೀರ್ ಕಪೂರ್ ದಂಪತಿಯಿಂದ ಯಾವುದೇ ಅಧಿಕೃತ ಹೇಳಿಕೆಗಳು ಬಂದಿಲ್ಲ.
ಇನ್ನೂ 2022ರಲ್ಲಿ ರಣಬೀರ್ ಕಪೂರ್ ಜೊತೆ ಆಲಿಯಾ ಮದುವೆ ನಡೆಯಿತು. ಮದುವೆಗೂ ಮುನ್ನವೇ ಆಲಿಯಾ ಗರ್ಭಿಣಿಯಾಗಿದ್ದರು ಎಂದು ಹೇಳಲಾಗುತ್ತಿದೆ. ಸದ್ಯ ಈ ದಂಪತಿಗೆ 2 ವರ್ಷದ ಮಗಳು ರಾಹಾ ಇದ್ದಾಳೆ.
“ನಾನು ನಟನೆಯಲ್ಲಿ ಮಾತ್ರವಲ್ಲದೆ ನಿರ್ಮಾಣದಲ್ಲೂ ಕೆಲಸ ಮಾಡಲು ಬಯಸುತ್ತೇನೆ. ನಾನು ಇನ್ನೊಂದು ಮಗುವನ್ನು ಹೊಂದಲು, ಹೆಚ್ಚು ಪ್ರಯಾಣಿಸಲು ಮತ್ತು ಪ್ರಕೃತಿ-ಸಂಬಂಧಿತ ಜೀವನವನ್ನು ನಡೆಸಲು ಬಯಸುತ್ತೇನೆ” ಎಂದು ಆಲಿಯಾ 2024 ರಲ್ಲಿ IMDb ಯ ಐಕಾನ್ಸ್ ಓನ್ಲಿ ಕಾರ್ಯಕ್ರಮದಲ್ಲಿ ಹೇಳಿದ್ದರು.