ಸಹನಟಿಯ ಮೇಲೆ ಅತ್ಯಾಚಾರ ಮಾಡಿದ ಆರೋಪ ಕಾಮಿಡಿ ಕಿಲಾಡಿಗಳು ಖ್ಯಾತಿಯ ಮಡೆನೂರು ಮನು ಮೇಲೆ ಕೇಳಿ ಬಂದಿದೆ. ಈ ಹಿನ್ನೆಲೆಯಲ್ಲಿ ಮನು ಅವರನನು ಬಂಧಿಸಿದ ಪೊಲೀಸರು ಕೋರ್ಟ್ ಗೆ ಹಾಜರು ಪಡಿಸಿದ್ದು ಪ್ರಕರಣದಲ್ಲಿ ಅವರನ್ನು 2 ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ನೀಡಲಾಗಿದೆ. ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಮಡೆನೂರು ಮನು ಹಾಗೂ ಸಂತ್ರಸ್ತೆ ನಡುವೆ ನಡೆದಿರುವ ವಾಟ್ಸಪ್ ಸಂದೇಶವನ್ನು ಪೊಲೀಸರು ಪಡೆದುಕೊಂಡಿದ್ದಾರೆ. ಬರೋಬ್ಬರಿ 31 ತಿಂಗಳುಗಳ ವಾಟ್ಸಪ್ ಚಾಪ್ ಅನ್ನು ಪೊಲೀಸರು ರಿಕವರಿ ಮಾಡಿಕೊಂಡಿದ್ದು ತನಿಖೆ ಚುರುಕುಕೊಳಿಸಿದ್ದಾರೆ.
2018 ರಿಂದ ಪರಿಚಯವಿದ್ದ ಮಡೆನೂರು ಮನು ಹಾಗೂ ಸಂತ್ರಸ್ಥೆ ಆ ಬಳಿಕ ಕ್ಲೋಸ್ ಆಗಿದ್ದರು. ಬಳಿಕ ಇಬ್ಬರು ನಡುವೆ ಆತ್ಮೀಯತೆ ಬೆಳೆದಿದು 2022ರ ನವೆಂಬರ್ನಿಂದ 2025ರ ಮೇ ತಿಂಗಳವರೆಗಿನ ಇಬ್ಬರು ನಡೆಸಿರುವ ವಾಟ್ಸಪ್ ಚಾಟ್ ಅನ್ನು ಪೊಲೀಸರು ಪಡೆದುಕೊಂಡಿದ್ದಾರೆ. ಮದುವೆ ಆಗುವುದಾಗಿ ಹೇಳಿದ ಮನು ಆ ಬಳಿಕ ಅತ್ಯಾಚಾರವೆಸಗಿ ದೈಹಿಕ ಹಲ್ಲೆ ನಡೆಸಿದ್ದಾನೆ. ಅತ್ಯಾಚಾರ ಮಾಡುವ ವಿಡಿಯೋ ಮಾಡಿ ಜೀವ ಬೆದರಿಕೆ ಹಾಕಿದ್ದಾನೆಂದು ದೂರಿನಲ್ಲಿ ಸಂತ್ರಸ್ತೆ ಉಲ್ಲೇಖಿಸಿದ್ದಾರೆ. ಹಾಗಾಗಿ ಪೊಲೀಸರು ಮನು ಅವರನ್ನು ಕಸ್ಟಡಿಗೆ ಪಡೆದು ಸಾಕಷ್ಟು ವಿಚಾರಣೆ ನಡೆಸುತ್ತಿದ್ದಾರೆ.
ಮನುಗೆ ಸೇರಿದ 2 ಮೊಬೈಲ್ ಫೋನ್ ಹಾಗೂ ಸಂತ್ರಸ್ತೆಯ 2 ಮೊಬೈಲ್ ಫೋನ್ ಜಪ್ತಿ ಮಾಡಲಾಗಿದೆ. ಪೊಲೀಸರು ಒಟ್ಟು 4 ಮೊಬೈಲ್ಗಳನ್ನು ಎಫ್ಎಸ್ಎಲ್ಗೆ ಕಳುಹಿಸಿದ್ದು, ಸಂತ್ರಸ್ತೆ ಮತ್ತು ಮನು ನಡುವಿನ ಆಡಿಯೋ, ವಿಡಿಯೋ ಸಂಭಾಷಣೆಯಲ್ಲಿ ಹಲವು ನಟ-ನಟಿಯರ ಹೆಸರು ಕೇಳಿಬಂದಿದೆ. ಆದ್ದರಿಂದ ತನಿಖೆಯ ಭಾಗವಾಗಿ ಸಿನಿತಾರೆಯರ ಹೇಳಿಕೆ ದಾಖಲಿಸಲು ಪೊಲೀಸರು ಮುಂದಾಗಿದ್ದಾರೆ.
ಮಡೆನೂರು ಮನು ಹಾಗೂ ಸಂತ್ರಸ್ಥೆಯ ಹಲವು ವಿಡಿಯೋ ಮತ್ತು ಆಡಿಯೋ ಈಗಾಗಲೇ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಸಂತ್ರಸ್ತೆ ಜೊತೆ ತಾವು ದೈಹಿಕ ಸಂಪರ್ಕ ಹೊಂದಿರುವುದು ಹಾಗೂ ಆಕೆಗೆ ತಾಳಿ ಕಟ್ಟಿರುವ ಆಡಿಯೋ ಕೂಡ ವೈರಲ್ ಆಗಿದೆ. ಅಲ್ಲದೆ ಕನ್ನಡ ಚಿತ್ರರಂಗದ ಹಲವು ಸ್ಟಾರ್ ನಟರ ಬಗ್ಗೆಯೂ ಮನು ಮಾತನಾಡಿದ್ದು ಇದು ಹಲವರ ಆಕ್ರೋಶಕ್ಕೆ ಕಾರಣವಾಗಿದೆ. ಮುಂದಿನ ದಿನಗಳಲ್ಲಿ ಮನುಗೆ ಇವೆಲ್ಲವು ಮತ್ತಷ್ಟು ಸಮಸ್ಯೆ ತಂದೊಡ್ಡುವ ಸಾಧ್ಯತೆಯೂ ಇದೆ.