ವಿಜಯಸಾಕ್ಷಿ ಸುದ್ದಿ, ಹುಬ್ಬಳ್ಳಿ
ಕೊರೊನಾ ಹಾವಳಿ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ನಗರದಲ್ಲಿ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗಿದೆ. ಅನಾವಶ್ಯಕವಾಗಿ ಹೊರಗೆ ಬಂದವರ ಮೇಲೆ ಮುಲಾಜಿಲ್ಲದೆ ಕ್ರಮ ಕೈಗೊಳ್ಳಲಾಗುತ್ತಿದೆ. ಯಾರು ಎಷ್ಟೇ ದೊಡ್ಡ ವ್ಯಕ್ತಿಯಾದರೂ ಪೊಲೀಸರು ಮಾತ್ರ ದಂಡ ವಿಧಿಸುತ್ತಿದ್ದಾರೆ. ಇಲ್ಲಿಯ ಹಳೆ ಕೋರ್ಟ್ ಸರ್ಕಲ್ ಬಳಿ ಮಾಸ್ಕ್ ಧರಸದೆ ಕಾರಿನಲ್ಲಿ ಪ್ರಯಾಣಿಸುತಿದ್ದ ವೈದ್ಯೆಗೆ ಉಪನಗರ ಠಾಣೆ ಪೊಲೀಸರು ದಂಡ ಹಾಕಿದ್ದಾರೆ.
ಬೆಳಿಗ್ಗೆಯಿಂದಲೇ ಪೊಲೀಸರು ಸಾಕಷ್ಟು ರೀತಿಯ ಕೋವೀಡ್ ಹಾಗೂ ವಿಪತ್ತು ನಿರ್ವಹಣೆ ನಿಯಮ ಪಾಲಿಸದವರ ಮೇಲೆ ಮುಲಾಜಿಲ್ಲದೆ ದಂಡ ಹಾಕುತ್ತಿದ್ದರು. ಆದರೆ, ಜನರಿಗೆ ಕೊರೊನಾ ಬಗ್ಗೆ ಜಾಗೃತಿ ಮೂಡಿಸಬೇಕಿದ್ದ ವೈದ್ಯರೇ ಮಾಸ್ಕ್ ಧರಿಸಿರಲಿಲ್ಲ ಹೀಗಾಗಿ ಪೊಲೀಸರು ದಂಡ ಹಾಕಿದ್ದಾರೆ.
ಕಾರಿನಲ್ಲಿ ಹೊರಟ್ಟಿದ್ದ ವೈದ್ಯೆ ಮಾಸ್ಕ್ ಧರಿಸಿರಲಿಲ್ಲ. ಆಗ ಉಪನಗರ ಪೊಲೀಸ್ ಸಬ್ ಇನ್ಸ್‌ಪೆಕ್ಟರ್ ರವಿಚಂದ್ರ್ ಬಡಫಕೀರಪ್ಪನವರ ಹಾಗೂ ಪ್ರೋಬಷನೇರಿ ಪಿಎಸ್ ಐ ಉಮೇಶಗೌಡ ಪಾಟೀಲ ದಂಡ ಕಟ್ಟುವಂತೆ ಹೇಳಿದ್ದಾರೆ. ಆ ಸಂದರ್ಭದಲ್ಲಿ ವೈದ್ಯೆ ಹಾಗೂ ಪೊಲೀಸರ ಮಧ್ಯೆ ವಾಗ್ವಾದ ನಡೆದಿದೆ. ಕೊನೆಗೆ ದಂಡದ ರಶೀದಿ ಹರಿದ ಮೇಲೆ ಅನಿವಾರ್ಯವಾಗಿ ದಂಡ ಕಟ್ಟಿ ವೈದ್ಯೆ ತೆರಳಿದ್ದಾರೆ.

ನಗರದ ಹೊಸೂರು ಸರ್ಕಲ್ ಬಳಿಯ ದುರ್ಗಾದೇವಿ ದೇವಸ್ಥಾನದ ಹತ್ತಿರ ಖಾಸಗಿ ಸಂಸ್ಥೆಯ ಮಾರುತಿ ಪಾರ್ಸಲ್ ಸರ್ವಿಸ್ ಲಾರಿಯಲ್ಲಿ ಸಾಮಾಜಿಕ ಅಂತರ ಕಾಯ್ದುಕೊಳ್ಳದ ಹಿನ್ನೆಲೆಯಲ್ಲಿ ಲಾರಿ ಚಾಲಕನಿಗೆ ದಂಡ ವಿಧಿಸಲಾಗಿದೆ.