ಕನ್ನಡ ಕಿರುತೆರೆ ಲೋಕದ ಖ್ಯಾತ ನಟ ಶ್ರೀಧರ್ ನಾಯಕ್ ಚಿಕಿತ್ಸೆ ಫಲಕಾರಿಯಾಗದೆ ನಿಧನರಾಗಿದ್ದಾರೆ. ಕೇವಲ ೪೬ನೇ ವಯಸ್ಸಿಗೆ ಶ್ರೀಧರ್ ನಿಧನ ಹೊಂದಿದ್ದು ಶ್ರೀಧರ್ ನಿಧನಕ್ಕೆ ಹಲವರು ಕಂಬನಿ ಮಿಡಿದಿದ್ದಾರೆ. ಸ್ಪುರದ್ರೂಪಿಯಾಗಿದ್ದ ಶ್ರೀಧರ್ ಕೊನೆಯ ದಿನಗಳಲ್ಲೀ ಸಾಕಷ್ಟು ನೋವು ಅನುಭವಿಸಿದ್ದರು. ಯಾರು ಗುರುತಿಸಲಾಗದ ಮಟ್ಟಿಗೆ ಬದಲಾಗಿದ್ದರು. ಈ ಹಿಂದೆ ಪತ್ನಿ ಮದುವೆಯಾದ ಎರಡೇ ವರ್ಷಕ್ಕೆ ನನ್ನಿಂದ ದೂರವಾದಳು. ಮನೆಯಲ್ಲಿ ಇದ್ದ ವಸ್ತುವನ್ನೆಲ್ಲಾ ಪಡೆದುಕೊಂಡು ಮಗನೊಂದಿಗೆ ಹೊರಟು ಹೋದಳು ಎಂದು ಶ್ರೀಧರ್ ಆರೋಪಿಸಿದ್ದರು. ಈ ಬಗ್ಗೆ ಶ್ರೀಧರ್ ಪತ್ನಿಯದ್ದು ಎನ್ನಲಾದ ಹಳೆಯ ಆಡಿಯೋ ವೈರಲ್ ಆಗಿದ್ದು, ಈ ಆಡಿಯೋದಲ್ಲಿ ಅವರು ಪತಿಗೆ ಏಡ್ಸ್ ಇತ್ತು ಎಂಬುದನ್ನು ತಿಳಿಸಿದ್ದಾರೆ.
ಜ್ಯೋತಿ ಅವರದ್ದು ಎನ್ನಲಾದ ಆಡಿಯೋದಲ್ಲಿ ಶ್ರೀಧರ್ ಜೊತೆಗಿನ ಪ್ರೀತಿ, ಮದುವೆ, ಮದುವೆಯ ಬಳಿಕದ ಜೀವನದ ಬಗ್ಗೆ ಜ್ಯೋತಿ ಮಾತನಾಡಿದ್ದಾರೆ. ಸದ್ಯ ವೈರಲ್ ಆಗಿರುವ ಆಡಿಯೋದಲ್ಲಿ ‘ನಾನು ಸಿಂಗರ್ ಆಗಬೇಕು ಎಂದು ಬಂದವಳು. ನನಗೆ ಯಾರ ಮೇಲೂ ಅಟ್ರ್ಯಾಕ್ಷನ್ ಇರಲಿಲ್ಲ. ಈ ವೇಳೆ ಶ್ರೀಧರ್ ಪರಿಚಯ ಆಯ್ತು. ಆ ಬಳಿಕ ಗೆಳೆತನ ಮೂಡಿತು. ಆ ಬಳಿಕ ಪ್ರೀತಿ ಬೆಳೆಯಿತು. ಶ್ರೀಧರ್ ಪ್ರಪೋಸ್ ಮಾಡಿದ. ಮನೆಯಲ್ಲಿ ಬಂದು ಮಾತನಾಡಿದ. ಆದರೆ, ಜಾತಕ ಕೂಡಲಿಲ್ಲ. ಹೀಗಾಗಿ ಯಾರೂ ಮದುವೆಗೆ ಒಪ್ಪಲೇ ಇಲ್ಲ. ನಾನು ಇಷ್ಟಪಟ್ಟಿದ್ದೆ. ಹೀಗಾಗಿ ನಾವು ಮದುವೆ ಆದೆವು’ ಎಂದು ಜ್ಯೋತಿ ಹೇಳಿದ್ದಾರೆ.
‘ಮದುವೆಯಾದ ಒಂದೇ ತಿಂಗಳಿಗೆ ಶ್ರೀಧರ್ ಬದಲಾದ. ರಿಸ್ಟ್ರಿಕ್ಷನ್ ಹಾಕಲು ಆರಂಭಿಸಿದ. ಇದೆಲ್ಲವೂ ಅಬ್ನಾರ್ಮಲ್ ಆಗಿತ್ತು. 11 ವರ್ಷಗಳ ಹಿಂದಿನ ಮಾತನ್ನು ಈಗ ಹೇಳಲು ಸಾಧ್ಯವಿಲ್ಲ. ಅವನು ನನ್ನನ್ನು ಪ್ರೀತಿಸುತ್ತಾನೆ ಎಂದುಕೊಂಡೆ. ಆದರೆ, ಪ್ರೀತಿಸಿಲ್ಲ. ಇದನ್ನು ಅವನೇ ಒಂದು ದಿನ ಹೇಳಿದ್ದ. ಹೀಗೆಲ್ಲ ಆಯ್ತಾ ಎಂದು ಹೇಳಿದರೆ ಯಾರೂ ನಂಬಲ್ಲ. ಅವನು ಸಾಕಷ್ಟು ಬಾರಿ ಹೊಡೆದಿದ್ದಾನೆ. ಆದರೆ, ನಾನು ಇದನ್ನು ಎಲ್ಲಿಯೂ ಹೇಳಿಕೊಂಡಿಲ್ಲ’ ಎಂದಿದ್ದಾರೆ ಜ್ಯೋತಿ.
‘ನಾನು ಯಾರ ಜೊತೆಯೂ ಓಡಿ ಹೋಗಿಲ್ಲ. ನಾನು ಹಾಗೂ ಮಗ ಇಬ್ಬರೇ ಜೀವನ ಮಾಡುತ್ತಿದ್ದೇವೆ. ಒಬ್ಬರ ಜೀವನದಲ್ಲಿ ಇಷ್ಟು ದೊಡ್ಡ ಟ್ರ್ಯಾಜಿಡಿ ನಡೆಯುತ್ತದೆ ಎಂದು ನಾನು ಊಹಿಸಿರಲಿಲ್ಲ. ಆದರೆ, ನಡೆದಿದೆ. ನಾನು ಅವರ ಕ್ಯಾರೆಕ್ಟರ್ ಮೇಲೆ ಎಂದಿಗೂ ಅನುಮಾನ ಪಟ್ಟಿಲ್ಲ. ಅವನಿಗೆ ಎಚ್ಐವಿ ಬಂದಿದೆ. ಅಲ್ಲದೆ, ಕ್ಯಾನ್ಸರ್ ಕೂಡ ಬಂದಿದೆ’ ಎಂಬ ಜ್ಯೋತಿ ಆಡಿಯೋದಲ್ಲಿ ಹೇಳಿದ್ದಾರೆ.
‘ತುಂಬಾ ವೈದ್ಯರ ಬಳಿ ಕೇಳಿದ್ದೆ. ಅದಕ್ಕೆ ಏನಾದರೂ ಔಷಧ ಇದೆಯೇ? ಕ್ಯೂರ್ ಮಾಡಬಹುದೇ ಎಂದು ಕೇಳಿದ್ದೆ. ಆಗಲ್ಲ ಎಂದರು. ಅವನಿಗೆ ಸಿಕ್ಕಾಪಟ್ಟೆ ಅಹಂಕಾರ ಇತ್ತು. ದೇವರು ಕೊಟ್ಟ ಎಲ್ಲವನ್ನೂ ಕಳೆದುಕೊಂಡ. ಇದಕ್ಕೆ ಅವನೇ ಕಾರಣ. ನನ್ನ ಕಾರಣಕ್ಕೆ ಏಡ್ಸ್ ಬಂದಿಲ್ಲ’ ಎಂದು ಜ್ಯೋತಿ ಆಡಿಯೋದಲ್ಲಿ ಹೇಳಿದ್ದಾರೆ.