ಮುಗಿಯಿತು ಬಣ್ಣದ ಬದುಕಿನ ಕನಸು: ಕಿರುತೆರೆ, ಹಿರಿತೆರೆಯಿಂದ ಮಡೆನೂರು ಮನು ಬ್ಯಾನ್

0
Spread the love

ನೂರಾರು ಕನಸು ಕಂಡು ಬಣ್ಣದ ಬದುಕಿಗೆ ಎಂಟ್ರಿಕೊಟ್ಟಿದ್ದ ಮಡೆನೂರು ಇದೀಗ ಸಂಕಷ್ಟದಲ್ಲಿದ್ದಾರೆ. ಸಹನಟಿಗೆ ಕಿರುಕುಳ, ಲೈಂಗಿಕ ದೌರ್ಜನ್ಯ, ವಂಚನೆ ಪ್ರಕರಣದಲ್ಲಿ ನಟ ಮಡೆನೂರು ಅವರನ್ನು ಪೊಲೀಸರು ಜೈಲಿಗೆ ಕಳುಹಿಸಿದ್ದಾರೆ. ಈ ಮಧ್ಯೆ ಕನ್ನಡ ಚಿತ್ರರಂಗದ ನಟರ ಬಗ್ಗೆ ಮಾತನಾಡಿದ ಕಾರಣಕ್ಕೆ ಮನು ಅವರನ್ನು ಕನ್ನಡ ಕಿರುತರೆ ಹಾಗೂ ಹಿರಿತೆರೆಯಿಂದಲೇ ಬ್ಯಾನ್ ಮಾಡಲಾಗಿದೆ.

Advertisement

ಮಡೆನೂರು ಮನು ಅವರು ನಟ ಶಿವರಾಜ್‌ಕುಮಾರ್, ದರ್ಶನ್, ಧ್ರುವ ಸರ್ಜಾ ಅವರ ಬಗ್ಗೆ ಕೆಟ್ಟದಾಗಿ ಮಾತಾಡಿರೋ ಆಡಿಯೋ ವೈರಲ್ ಆಗಿತ್ತು. ಆ ಆಡಿಯೋದಲ್ಲಿ ಶಿವಣ್ಣ ಬಗ್ಗೆ ಅವಹೇಳನಕಾರಿಯಾಗಿ ಮಾತಾಡಿದ್ದಕ್ಕೆ ರಾಜ್‌ ಕುಮಾರ್‌ ಅಭಿಮಾನಿಗಳು ಆಕ್ರೋಶ ವ್ಯಕ್ತಪಡಿಸಿದ್ದರು. ಅಲ್ಲದೇ ಶಿವಣ್ಣನ ಅಭಿಮಾನಿಗಳು ಮಡೆನೂರು ಮನು ವಿರುದ್ಧ ಕ್ರಮ ಕೈಗೊಳ್ಳುವಂತೆ ಫಿಲ್ಮ್‌ ಚೇಂಬರ್‌ ಗೆ ದೂರು ನೀಡಿದ್ದರು. ಇದೀಗ ಫಿಲ್ಮ್ ಚೇಂಬರ್ ಮಹತ್ವದ ತಿರ್ಮಾನ ಕೈಗೊಂಡಿದೆ.

ಮಡೆನೂರು ಮನು ಅವರನ್ನು ಕಿರಿತೆರೆ ಹಾಗೂ ಹಿರಿತೆರೆಯಿಂದ ಬ್ಯಾನ್ ಮಾಡಲಾಗಿದೆ. ಅಲ್ಲದೇ ಮಡೆನೂರು ಮನು ವಿರುದ್ಧ ವಾಣಿಜ್ಯ ಮಂಡಳಿಯೂ ದೂರು ಕೊಡ್ತೀವಿ ಅಂತ ಹೇಳಿದೆ. ಮಡೆನೂರು ಮನು ವೈರಲ್‌ ಆಡಿಯೋ ಬಗ್ಗೆ ಮಾತನಾಡಿರುವ ಫಿಲ್ಮ್ ಚೇಂಬರ್ ಅಧ್ಯಕ್ಷ ನರಸಿಂಹಲು, ಎಲ್ಲಾ ಸಂಸ್ಥೆಗಳನ್ನೂ ಕರೆದು ಸಭೆ ಮಾಡಿದ್ದೇವೆ. ದುರಹಂಕಾರಿ ಮಾತನ್ನ ಆಡಿದ್ದಾರೆ. ನಾವು ಅಸಹಕಾರ ತೋರಿಸಬೇಕು ಎಂದು ತೀರ್ಮಾನಿಸಲಾಗಿದೆ. ಈಗಾಗಲೇ ಜೈಲಲ್ಲಿದ್ದಾರೆ. ಎಲ್ಲಾ ಅಂಗ ಸಂಸ್ಥೆಗಳಿಂದಲೂ ಸಹಾಯ ಮಾಡುವುದಿಲ್ಲ. ಅವರು ಯಾವುದೇ ರೀತಿಯಲ್ಲೂ ಚಟುವಟಿಕೆ ಮಾಡುವಂತಿಲ್ಲ ಎಂದಿದ್ದಾರೆ.


Spread the love

LEAVE A REPLY

Please enter your comment!
Please enter your name here