ವಿಜಯಸಾಕ್ಷಿ ಸುದ್ದಿ, ಗದಗ: ಗದಗ ಜಿಲ್ಲೆಯಲ್ಲಿ ಸವಿತಾ ಸಮಾಜ ಬಾಂಧವರ ಆರ್ಥಿಕ ಸ್ಥಿತಿ ಸುಧಾರಿಸಲು ಹಾಗೂ ಆರ್ಥಿಕವಾಗಿ ಬಲಾಢ್ಯರಾಗಲು ಹಿರಿಯರ ಆಶಯದಂತೆ ಮತ್ತು ಸವಿತಾ ಸಮಾಜ (ಹಿಂದುಳಿದ ವರ್ಗ) ಪತ್ತಿನ ಸಹಕಾರ ಸಂಘ ಸ್ಥಾಪನೆಗೊಂಡಿದ್ದು, ಅದರೊಂದಿಗೆ ಗದಗ ಜಿಲ್ಲಾ ಸವಿತಾ ಸಮಾಜದ ಕಾರ್ಯಾಲಯವೂ ಉದ್ಘಾಟನೆಗೊಂಡಿರುವುದು ಹೆಮ್ಮೆಯ ಸಂಗತಿ ಎಂದು ಗದಗ ಜಿಲ್ಲಾ ಕಾಂಗ್ರೆಸ್ ಯುವ ಘಟಕದ ಅಧ್ಯಕ್ಷ ಕೃಷ್ಣಗೌಡ ಎಚ್.ಪಾಟೀಲ ಹರ್ಷ ವ್ಯಕ್ತಪಡಿಸಿದರು.
ಅವರು ವಿವೇಕಾನಂದ ರಸ್ತೆಯ ಕಮೀತ್ಕರ ಕಾಂಪ್ಲೆಕ್ಸ್ ನಲ್ಲಿ ಗದಗ ಜಿಲ್ಲಾ ಸವಿತಾ ಸಮಾಜದಿಂದ ಸ್ಥಾಪನೆಗೊಂಡ ಸವಿತಾ ಸಮಾಜ (ಹಿಂದುಳಿದ ವರ್ಗ) ಪತ್ತೀನ ಸಹಕಾರ ಸಂಘ ಹಾಗೂ ಗದಗ ಜಿಲ್ಲಾ ಸವಿತಾ ಸಮಾಜದ ನೂತನ ಕಾರ್ಯಾಲಯವನ್ನು ಉದ್ಘಾಟಿಸಿ ಮಾತನಾಡಿದರು.
ಸವಿತಾ ಸಮಾಜವು ರಾಜಕೀಯ, ಆರ್ಥಿಕ ಹಾಗೂ ಶೈಕ್ಷಣಿಕವಾಗಿ ಬೆಳೆಯಬೇಕಾಗಿದೆ. ಈ ನಿಟ್ಟಿನಲ್ಲಿ ಸರ್ವ ಸಮುದಾಯಗಳೊಂದಿಗೆ ಉತ್ತಮ ಬಾಂಧವ್ಯವನ್ನು ಹೊಂದಿರುವ ಗದಗ ಜಿಲ್ಲಾ ಸವಿತಾ ಸಮಾಜದ ಜಿಲ್ಲಾಧ್ಯಕ್ಷರಾದ ಕೃಷ್ಣಾ ಎಚ್.ಹಡಪದ ಮಾಡುತ್ತಿರುವ ಸಮಾಜ ಪರ, ರಚನಾತ್ಮಕ ಸೇವಾ ಕಾರ್ಯಕ್ಕೆ ಸಮಸ್ತ ಸವಿತಾ ಕ್ಷೌರಿಕ ಬಾಂಧವರು ಕೈಜೋಡಿಸುವ ಮೂಲಕ ಅವರ ಶಕ್ತಿ ಹೆಚ್ಚಿಸಲು ಮಾಂದಾಗಬೇಕು ಎಂದರು.
ಕರ್ನಾಟಕ ರಾಜ್ಯ ಸವಿತಾ ಸಮಾಜದ ಉತ್ತರ ಕರ್ನಾಟಕ ವಿಭಾಗೀಯ ಕಾರ್ಯದರ್ಶಿ ಹನಮಂತಪ್ಪ ರಾಂಪೂರ ಪ್ರಾಸ್ತಾವಿಕವಾಗಿ ಮಾತನಾಡಿದರು. ಈ ಸಂದರ್ಭದಲ್ಲಿ ಪ್ರಮುಖರಾದ ರವಿಕುಮಾರ ರಡ್ಡಿ, ಅಬ್ದುಲಮುನಾಫ್ ಮುಲ್ಲಾ, ಪರಶುರಾಮ (ಬಜ್ಜು) ರಾಂಪೂರ, ವೆಂಕಟೇಶ ರಾಂಪೂರ, ಯಲ್ಲಪ್ಪ ರಾಯಚೂರ, ಅಶೋಕ ಮಾನೆ, ಪಾಂಡು ಕಾಳೆ, ಕಿರಣ ರಾಂಪೂರ, ಜಂಮ್ಮಣ್ಣ ಕಡಮೂರ, ಹೇಮಂತ ವಡ್ಡೆಪಲ್ಲಿ, ಮಂಜುನಾಥ ಮಾನೆ, ಅರುಣ ರಾಂಪೂರ, ರಾಜು ಮಾನೆ, ವಿಕಾಸ್ ಕ್ಷೀರಸಾಗರ, ರಮೇಶ ರಾಂಪೂರ, ಪರಶುರಾಮ ಬಳ್ಳಾರಿ, ಆನಂದ ಮಾನೆ, ಸುರೇಶ ಬುದೂರ, ತುಕಾರಾಮ ಮಾನೆ, ಶ್ರೀನಿವಾಸ ಕೊಟೇಕಲ್ಲ, ಸುನೀಲ್ ರಾಯಚೂರ, ಕೃಷ್ಣಾ ಬುದೂರ, ಬಸವರಾಜ ಗೌಡರ್, ರಾಮು ವಡ್ಡೆಪಲ್ಲಿ, ವೆಂಕಟೇಶ ಕೊಟೇಕಲ್ಲ, ಪರಶುರಾಮ ಕೊಲ್ಪೂರ, ಪರಶುರಾಮ ಮಾರ್ಲಬೇಡ್, ಗಣೇಶ ಕಡಮೂರ, ಪ್ರಕಾಶ ಬುದೂರ, ಸಾಗರ ಹಡಪದ, ಕಾರ್ತಿಕ ಆಗಲಾವೆ, ಶ್ರೀಧರ ಕಡಬೂರ, ವಿನಾಯಕ ರಾಯಚೂರ, ರಾಜು ರಾಮ್ ಮಾನೆ ಮುಂತಾದವರಿದ್ದರು.
ಸಂಘದ ಸಂಸ್ಥಾಪಕ ಕೃಷ್ಣಾ ಎಚ್.ಹಡಪದ ಮಾತನಾಡಿ, ಗಂಗಿಮಡಿಯಲ್ಲಿ ಗದಗ ಸವಿತಾ ಸಮಾಜ ಸುಧಾರಣಾ ಸಂಘದ ಶ್ರೀ ನಾಗದೇವರ ದೇವಸ್ಥಾನಕ್ಕೆ 10 ಲಕ್ಷ ರೂ ಹಾಗೂ ಮರಾಠ ಕ್ಷೌರಿಕ ಸಮಾಜದ ಸಮುದಾಯ ಭವನ ನಿರ್ಮಾಣಕ್ಕೆ 5 ಲಕ್ಷ ರೂ ಅನುದಾನ ಸೇರಿದಂತೆ 52 ಬಡ ಕುಟುಂಬಗಳಿಗೆ ಆಶ್ರಯ ಮನೆಗಳು ಇಗಾಗಲೇ ಮಂಜೂರಾಗಿದ್ದು, ಸವಿತಾ ಸಮಾಜದ ಕ್ಷೌರಿಕ ವೃತ್ತಿ ಕಾರ್ಮಿಕರಿಗೆ ಸಲೂನ್ ಕುರ್ಚಿಗಳು ಹಾಗೂ ಸಲಕರಣೆಗಳನ್ನು ಮತ್ತು ಇನ್ನಿತರ ಅನುದಾನಗಳನ್ನು ಒಗಿಸಲು ಆಡಳಿತಕ್ಕೆ ಮನವಿ ಮಾಡಿದರು.



