ಖ್ಯಾತ ನಟ ಕಮಲ್ ಹಾಸನ್ ವಿವಾದವನ್ನು ಮೈಮೇಲೆ ಎಳೆದುಕೊಂಡಿದ್ದಾರೆ. ಕಮಲ್ ಹಾಸನ್ ನಟನೆಯ ‘ಥಗ್ ಲೈಫ್’ ಚಿತ್ರದ ಪ್ರಚಾರಕ್ಕಾಗಿ ಬೆಂಗಳೂರಿಗೆ ಆಗಮಿಸಿದ ಸಂದರ್ಭದಲ್ಲಿ ಕಮಲ್ ಹೇಳಿದ ಮಾತು ವಿವಾದಕ್ಕೆ ಕಾರಣವಾಗಿದೆ. ಇದೇ ಕಾರಣಕ್ಕೆ ಕನ್ನಡ ನಾಡಿನಲ್ಲಿ ‘ಥಗ್ ಲೈಫ್’ ಸಿನಿಮಾಗೆ ಸಂಕಷ್ಟ ಎದುರಾಗಿದ್ದು ಕಮಲ್ ಕ್ಷಮೆ ಕೇಳಬೇಕು ಎಂದು ಕನ್ನಡ ಪರ ಸಂಘಟನೆಗಳು ಒತ್ತಾಯಿಸಿವೆ.
ಥಗ್ ಲೈಫ್ ಸಿನಿಮಾದ ಪ್ರಚಾರ ಕಾರ್ಯಕ್ರಮದಲ್ಲಿ ಭಾಗಿಯಾದ ನಟ ಕಮಲ್ ಹಾಸನ್ ‘ತಮಿಳಿನಿಂದಲೇ ಕನ್ನಡ ಹುಟ್ಟಿದ್ದು’ ಎನ್ನುವ ಹೇಳಿಕೆ ನೀಡಿದ್ದಾರೆ. ಕಮಲ್ ರ ಈ ಹೇಳಿಕೆ ಸಾಕಷ್ಟು ವಿವಾದಕ್ಕೆ ಕಾರಣವಾಗಿದೆ. ಕಮಲ್ ಹೇಳಿಕೆಗೆ ಕನ್ನಡಪರ ಸಂಘಟನೆಗಳು ರೊಚ್ಚಿಗೆದಿದ್ದು ಕಮಲ್ ಕ್ಷಮೆ ಯಾಚಿಸುವಂತೆ ಫಿಲ್ಮ್ ಚೇಂಬರ್‌ಗೆ ಮನವಿ ಪತ್ರ ಸಲ್ಲಿಸಿದ್ದಾರೆ.
ಕನ್ನಡ ಭಾಷೆಗೆ 4ರಿಂದ 5 ಸಾವಿರ ವರ್ಷಗಳ ಇತಿಹಾಸವಿದೆ. ಅವರು ಆಡಿದ ಮಾತಿನಿಂದ ದ್ರಾವಿಡ ಭಾಷೆಗಳು ಒಗ್ಗಟ್ಟಿಗೆ ದಕ್ಕೆಯಾಗಿದೆ. ಕಮಲ್ ಅತ್ಯುತ್ತಮ ಕಲಾವಿದ, ಅವರು ಕನ್ನಡ ಚಿತ್ರಗಳಲ್ಲೂ ನಟಿಸಿದ್ದಾರೆ. ನಟನ ಮಾತಿನಿಂದ ಕನ್ನಡಿಗರು, ತಮಿಳರ ನಡುವೆ ದ್ವೇಷ ಹುಟ್ಟುವಂತೆ ಮಾಡಿದ್ದಾರೆ. ತಕ್ಷಣ ತಮ್ಮ ತಪ್ಪನ್ನ ಅವರು ತಿದ್ದುಕೊಂಡು ಕನ್ನಡಿಗರಿಗೆ ಕ್ಷಮೆಯಾಚಿಸಬೇಕು ಎಂದು ಆಗ್ರಹಿಸಿದ್ದಾರೆ. ಕ್ಷಮೆಯಾಚಿಸದಿದ್ದರೆ ‘ಥಗ್ ಲೈಫ್’ ಚಿತ್ರದ ರಿಲೀಸ್‌ಗೆ ತಡೆ ನೀಡೋದಾಗಿ ಕರವೇ ಮತ್ತು ಕನ್ನಡಪರ ಸಂಘಟನೆಗಳು ಎಚ್ಚರಿಕೆ ನೀಡಿವೆ.