ಇಂಡಿಯನ್ ಪ್ರೀಮಿಯರ್ ಲೀಗ್ನ ಮೊದಲ ಕ್ವಾಲಿಫೈಯರ್ ಪಂದ್ಯ ಇಂದು ಪಂಜಾಬ್ ಕಿಂಗ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ನಡುವೆ ನಡೆಯಲಿದೆ. ಈ ಹೈ-ವೋಲ್ಟೇಜ್ ಪಂದ್ಯವು ನ್ಯೂ ಚಂಡೀಗಢದ ಮುಲ್ಲನ್ಪುರ ಸ್ಥಳದಲ್ಲಿ ನಡೆಯಲಿದೆ.
ಎರಡೂ ತಂಡಗಳು ಈ ಪಂದ್ಯಕ್ಕೆ ಸಿದ್ಧತೆ ನಡೆಸಿವೆ. ಕ್ವಾಲಿಫೈಯರ್ -1 ಪಂದ್ಯಕ್ಕಾಗಿ ಪಂಜಾಬ್ಗೆ ಎರಡು ದಿನಗಳ ವಿಶ್ರಾಂತಿ ಸಿಕ್ಕಿದೆ. ಬೆಂಗಳೂರು ತಂಡವು ಒಂದು ದಿನದ ವಿಶ್ರಾಂತಿಯ ನಂತರ ನಿರ್ಣಾಯಕ ಪಂದ್ಯವನ್ನು ಆಡಲಿದೆ.
ಕ್ವಾಲಿಫೈಯರ್-1ರಲ್ಲಿ ಗೆದ್ದ ತಂಡ ನೇರವಾಗಿ ಫೈನಲ್ ಪ್ರವೇಶಿಸುತ್ತದೆ. ಲೀಗ್ ಹಂತದ ಅಂತ್ಯದಲ್ಲಿ ಪಂಜಾಬ್ ಕಿಂಗ್ಸ್ ಪಾಯಿಂಟ್ಸ್ ಪಟ್ಟಿಯಲ್ಲಿ ಮೊದಲ ಸ್ಥಾನ ಮತ್ತು ಆರ್ಸಿಬಿ ಎರಡನೇ ಸ್ಥಾನ ಗಳಿಸಿದೆ. ಅರ್ಹತಾ ಪಂದ್ಯದಲ್ಲಿ RCB ಸಾಕಷ್ಟು ಬದಲಾಣೆ ಮಾಡಿಕೊಂಡು ಹೋರಾಡಿದೆ.
ಪ್ಲೇಆಫ್ ಪಂದ್ಯಗಳಿಗೆ ಜಾಕೋಬ್ ಬೆಥಾಲ್ ಬದಲಿಗೆ ನ್ಯೂಜಿಲೆಂಡ್ನ ಟಿಮ್ ಸೀಫರ್ಟ್ ಆರ್ಸಿಬಿ ಸೇರಿಕೊಂಡಿದ್ದಾರೆ. ಜೋಶ್ ಹೇಜಲ್ವುಡ್ ತಂಡಕ್ಕೆ ಎಂಟ್ರಿಯಾಗಿದ್ದಾರೆ. ಹೇಜಲ್ವುಡ್ ಆಡೋದು ಕನ್ಫರ್ಮ್ ಆಗಿದೆ.
ಐಪಿಎಲ್ ಪಂದ್ಯಗಳಿಗೆ ಮಳೆ ಭೀತಿ ಎದುರಾಗಿರುವ ಕಾರಣ ಬಿಸಿಸಿಐ ಹೆಚ್ಚುವರಿ 120 ನಿಮಿಷಗಳ ಕಾಲಾವಕಾಶವನ್ನು ನೀಡಿದೆ. ಅಂದರೆ ಮಳೆಯ ನಡುವೆ ಪಂದ್ಯವನ್ನು ಆಯೋಜಿಸಲು 2 ಗಂಟೆಗಳ ಕಾಲ ಹೆಚ್ಚುವರಿ ಸಮಯ ತೆಗೆದುಕೊಳ್ಳಲಿದ್ದಾರೆ.
ಇದರಿಂದಾಗಿ 9.30 ರವರೆಗೆ ಪಂದ್ಯ ಆರಂಭವಾಗದಿದ್ದರೂ ಯಾವುದೇ ಓವರ್ ಕಡಿತ ಇರುವುದಿಲ್ಲ. ಅಲ್ಲದೆ ಹೆಚ್ಚುವರಿ 120 ನಿಮಿಷಗಳ ಮೂಲಕ ಸಂಪೂರ್ಣ ಪಂದ್ಯವನ್ನು ಆಯೋಜಿಸಲಿದ್ದಾರೆ. ಅಂದರೆ 11.30 ಕ್ಕೆ ಮುಗಿಯುವ ಪಂದ್ಯವು 1.30 ರವರೆಗೆ ಆಯೋಜಿಸಲಿದ್ದಾರೆ.
RCB ಸಂಭಾವ್ಯ ತಂಡ: ಫಿಲ್ ಸಾಲ್ಟ್, ವಿರಾಟ್ ಕೊಹ್ಲಿ , ಟಿಮ್ ಸೀಫರ್ಟ್, ರಜತ್ ಪಾಟಿದಾರ್ (ನಾಯಕ), ಜಿತೇಶ್ ಶರ್ಮಾ (ವಿಕೆಟ್ ಕೀಪರ್), ಮಯಾಂಕ್ ಅಗರ್ವಾಲ್, ಟಿಮ್ ಡೇವಿಡ್, ಕೃನಾಲ್ ಪಾಂಡ್ಯ, ಜೋಶ್ ಹೇಜಲ್ವುಡ್, ಭುವನೇಶ್ವರ್ ಕುಮಾರ್ ಮತ್ತು ಯಶ್ ದಯಾಳ್.