HomeGadag Newsಸ್ಲಂ ಜನರಿಗೂ ಸಮಾನ ಅವಕಾಶ ಸಿಗಲಿ

ಸ್ಲಂ ಜನರಿಗೂ ಸಮಾನ ಅವಕಾಶ ಸಿಗಲಿ

For Dai;y Updates Join Our whatsapp Group

Spread the love

ವಿಜಯಸಾಕ್ಷಿ ಸುದ್ದಿ, ಗದಗ: ರಾಜ್ಯದ ಸ್ಲಂ ಜನರ ಮೂಲಭೂತ ಹಕ್ಕುಗಳಿಗೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಮೊದಲು ಆದ್ಯತೆ ನೀಡಬೇಕು. ಕೊಳಗೇರಿ ಪ್ರದೇಶಗಳಲ್ಲಿ ವಾಸಿಸುತ್ತಿರುವ ಜನರು ಕೂಡಾ ಮನುಷ್ಯರೇ. ಸರ್ಕಾರಗಳು ನಾಗರಿಕ ಸಮಾಜದಲ್ಲಿ ಸ್ಲಂ ನಿವಾಸಿಗಳಿಗೆ ಸಂವಿಧಾನಬದ್ಧ ಹಕ್ಕುಗಳನ್ನು ನೀಡುವ ಮೂಲಕ ಸಮಾನವಾದ ಅವಕಾಶಗಳನ್ನು ದೊರಕಿಸಿಕೊಡುವ ವಾತಾವರಣ ನಿರ್ಮಾಣ ಮಾಡಬೇಕು. ಈ ಬಗ್ಗೆ ಸ್ಲಂ ಜನರ ಪರವಾಗಿ ಮುಂಬರುವ ವಿಧಾನ ಪರೀಷತ್ ಅಧಿವೇಶನದಲ್ಲಿ ಹೋರಾಟ ನಡೆಸುತ್ತೇನೆ ಎಂದು ವಿ.ಪ ಸದಸ್ಯ ಪ್ರೊ. ಎಸ್.ವ್ಹಿ. ಸಂಕನೂರು ಹೇಳಿದರು.

ಅವರು ನಗರದ ಡಾ. ಬಿ.ಆರ್. ಅಂಬೇಡ್ಕರ್ ಭವನದಲ್ಲಿ ಸ್ಲಂ ಜನಾಂದೋಲನ ಕರ್ನಾಟಕ ಮತ್ತು ಸಾವಿತ್ರಿಬಾ ಪುಲೆ ಮಹಿಳಾ ಸಮಿತಿ ಸಹಕಾರದಲ್ಲಿ, ಗದಗ ಜಿಲ್ಲಾ ಸ್ಲಂ ಸಮಿತಿ ನೇತೃತ್ವದಲ್ಲಿ ಹಮ್ಮಿಕೊಂಡಿದ್ದ ವಿಭಾಗ ಮಟ್ಟದ ಸ್ಲಂ ಜನರ ಸಮಾವೇಶ ಹಾಗೂ ಸಾಂಸ್ಕೃತಿಕ ಹಬ್ಬ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ಗದಗ ಜಿಲ್ಲಾ ಸ್ಲಂ ಸಮಿತಿ ಅಧ್ಯಕ್ಷ ಇಮ್ತಿಯಾಜ ಆರ್.ಮಾನ್ವಿ ಪ್ರಾಸ್ತಾವಿಕವಾಗಿ ಮಾತನಾಡಿ, ನಮ್ಮ ಕೊಳಗೇರಿಗಳಲ್ಲಿ ವಾಸಿಸುತ್ತಿರುವ ಕಲಾವಿದರನ್ನು ನಮ್ಮ ವೇದಿಕೆಯ ಮುಖಾಂತರ ಹೊರ ಜಗತ್ತಿಗೆ ಪರಿಚಯಸುವ ಕೆಲಸ ಈ ಸ್ಲಂ ಹಬ್ಬದ ಮೂಲಕ ಮಾಡಲಾಗುತ್ತಿದೆ. ಸ್ಲಂ ಜನಾಂದೋಲನ ಕರ್ನಾಟಕ ಸಂಘಟನೆಯ ಸಹಕಾರದಲ್ಲಿ ವಿಭಾಗ ಮಟ್ಟದಲ್ಲಿ ಬರುವ ಎಲ್ಲಾ ಜಿಲ್ಲಾ ಕೇಂದ್ರಗಳಲ್ಲಿ ಕೊಳಗೇರಿಗಳ ಸಾಮಾಜಿಕ ನ್ಯಾಯ ಮತ್ತು ಸಮಾನ ಹಕ್ಕುಗಳಿಗೆ ನಿರಂತರ ಹೋರಾಟಗಳನ್ನು ನಡೆಸುವ ಮುಖಾಂತರ ಕೊಳಗೇರಿ ಪ್ರದೇಶದ ಜನರು ಘನತೆಯಿಂದ ಬದುಕು ನಡೆಸಲು ವಾತಾವರಣ ನಿರ್ಮಾನ ಮಾಡಲಾಗುತ್ತಿದೆ ಎಂದು ಹೇಳಿದರು.

ಸಮಾವೇಶದಲ್ಲಿ ವಿವಿಧ ಕಲಾ ತಂಡಗಳಾದ ಯಲ್ಲಪ್ಪ ಡೊಕ್ಕನವರ ಅವರಿಂದ ಸುಡಗಾಡ ಸಿದ್ದರ ವೇಷ, ದುರ್ಗಮುರ್ಗಿ ಕಲಾ ತಂಡ, ಮಂಗಳಮುಖಿಯರ ತಂಡ, ಗೋಸಾವಿ ತಂಡ, ಹುಬ್ಬಳ್ಳಿಯ ದರವೇಶ ತಂಡ ಹಾಗೂ ಹೊಸಪೇಟೆಯ ತಮಟೆ ತಂಡಗಳಿAದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು.

ಹಿರಿಯ ಪತ್ರಕರ್ತ ಶಿವಕುಮಾರ ಕುಷ್ಟಗಿ, ದಲಿತ ಸಂಘರ್ಸ ಸಮಿತಿ ಸಂಚಾಲಕ ವೆಂಕಟೇಶಯ್ಯ, ಪ್ರಗತಿಪರ ಚಿಂತಕರಾದ ಪ್ರೊ. ಸತೀಶ ಪಾಸಿ, ಬಸವರಾಜ ಪೂಜಾರ, ಪ್ರಮುಖರಾದ ಶೋಭಾ ಕಮತರ, ವೆಂಕಮ್ಮ, ಸ್ಲಂ ಸಮಿತಿ ಉಪಾಧ್ಯಕ್ಷ ಅಶೋಕ ಕುಡತಿನ್ನಿ, ಕಾರ್ಯದರ್ಶಿ ಅಶೋಕ ಕುಸಬಿ, ಮಹಿಳಾ ಸಂಚಾಲಕಿ ಪರವೀನಬಾನು ಹವಾಲ್ದಾರ, ಉಮರಫಾರಖ ಹುಬ್ಬಳ್ಳಿ, ಅನ್ವರ ಶಿರಹಟ್ಟಿ, ಎಂ.ಪಿ. ಮುಳಗುಂದ ವೇದಿಕೆ ಮೇಲೆ ಉಪಸ್ಥಿತರಿದ್ದರು.

ಎಂ.ಬಿ. ನದಾಫ್ ವಕೀಲರು ಕಾರ್ಯಕ್ರಮ ನಿರೂಪಿಸಿ ವಂದಿಸಿದರು. ಸ್ಲಂ ಸಮಿತಿ ಮುಖಂಡರಾದ ಇಬ್ರಾಹಿಂ ಮುಲ್ಲಾ, ಮೌಲಾಸಾಬ ಗಚ್ಚಿ, ಶರಣಪ್ಪ ಸೂಡಿ, ಪುಷ್ಪಾ ಬಿಜಾಪೂರ, ಮೆಹಬೂಬಸಾಬ ಬಳ್ಳಾರಿ, ಮುನ್ನಾ ಅಗಡಿ, ಖಾಜಾಸಾಬ ಇಸ್ಮಾಯಿಲನವರ, ಸಲೀಂ ಹರಿಹರ, ಆಶಾ ಜೂಲಗಡ, ಲಕ್ಷö್ಮಣ ರಾಮನಗರ, ಮೆಹರುನಿಸಾ ಡಂಬಳ, ಮಕ್ತುಮಸಾಬ ಮುಲ್ಲಾನವರ, ಮಹ್ಮದಸಾಬ ಗಡಾದ, ಮಂಜುನಾಥ ಶ್ರೀಗಿರಿ, ಸಾಕ್ರುಬಾಯಿ ಗೋಸಾವಿ ಹಾಗೂ ನೂರಾರು ಸ್ಲಂ ನಿವಾಸಿಗಳು ಸಮಾವೇಶದಲ್ಲಿ ಭಾಗವಹಿಸಿದ್ದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಸ್ಲಂ ಜನಾಂದೋಲನ ಕರ್ನಾಟಕ ಸಂಘಟನೆ ರಾಜ್ಯ ಸಂಚಾಲಕ ಎ.ನರಸಿಹಮೂರ್ತಿ ಮಾತನಾಡಿ, ರಾಜ್ಯ ಸಮಿತಿಯಿಂದ ಸ್ಲಂ ಜನರ ಭೂಮಿ ಹಕ್ಕುಗಾಗಿ ನಿರಂತರ ಹೋರಾಟಗಳನ್ನು ನಡೆಸುತ್ತ ಬಂದಿದ್ದೇವೆ. ನಮ್ಮ ರಾಜ್ಯ ಸಮಿತಿಯ ನಿರಂತರ ಹೋರಾಟದ ಫಲವಾಗಿ ರಾಜ್ಯದ ಲಕ್ಷಾಂತರ ಕೊಳಗೇರಿ ಕುಟುಂಬಗಳಿಗೆ ಹಕ್ಕುಪತ್ರಗಳನ್ನು ವಿತರಣೆ ಮಾಡಲಾಗುತ್ತಿದೆ. ಕಾಂಗ್ರೆಸ್ ಸರ್ಕಾರ ರಾಜ್ಯದ ಜನರಿಗೆ ಭೂಮಿ ಹಕ್ಕು ಎಂಬ 6ನೇ ಗ್ಯಾರಂಟಿಯನ್ನು ಘೋಷಣೆ ಮಾಡಿದೆ. ಈ ಗ್ಯಾರಂಟಿಯ ಮೂಲಕ ನಮ್ಮ ರಾಜ್ಯದ ಸ್ಲಂ ನಿವಾಸಿಗಳಿಗೆ ಭೂಮಿ ಹಕ್ಕುನ್ನು ಖಾತ್ರಿಗೊಳಿಸಬೇಕೆಂದು ಒತ್ತಾಯಿಸಿದರು.


Spread the love
Vijaya Sakshi
Vijaya Sakshi
Vijayasakshi is a Kannada Daily News Paper Publishing From Gadag. Get Latest Gadag District News Live Updates Online In Vijayasakshi.Com Vijayasakshi Kannada Daily Newspaper Provide News On Gadag District Including Karnataka, India News In Kannada. Contact-9448326533/9019256545 E-mail-vijayasakshidaily@gmail.com

LEAVE A REPLY

Please enter your comment!
Please enter your name here

E-Paper

E-paper

Must Read

spot_img
error: Content is protected !!