ಫೈನಲ್’ಗೆ ಎಂಟ್ರಿ ಕೊಟ್ಟ RCB: ಸಿಎಂ ಸಿದ್ದರಾಮಯ್ಯಗೆ RCB ಫ್ಯಾನ್ಸ್ ಕಡೆಯಿಂದ ಸ್ಪೆಷಲ್ ಮನವಿ!

0
Spread the love

2025ರ ಐಪಿಎಲ್ ಕ್ವಾಲಿಫೈಯರ್ 1ರಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು, ಪಂಜಾಬ್ ಕಿಂಗ್ಸ್ ವಿರುದ್ಧ ಏಕಪಕ್ಷೀಯ ಗೆಲುವು ಸಾಧಿಸಿ ಈ ಸೀಸನ್​ನ ಮೊದಲ ತಂಡವಾಗಿ ಫೈನಲ್ ಪ್ರವೇಶಿಸಿದೆ. ಮೊದಲು ಬ್ಯಾಟ್ ಮಾಡಿದ ಪಂಜಾಬ್ ಕೇವಲ 101 ರನ್‌ಗಳಿಗೆ ಆಲೌಟ್ ಆಯಿತು.

Advertisement

ಆರ್‌ಸಿಬಿ ಸುಲಭವಾಗಿ ಗುರಿ ಮುಟ್ಟಿತು. ಇದು ಆರ್‌ಸಿಬಿಗೆ ಐಪಿಎಲ್‌ನಲ್ಲಿ ನಾಲ್ಕನೇ ಫೈನಲ್ ಪ್ರವೇಶ. ಇತ್ತ ಸೋತ ಪಂಜಾಬ್ ಎಲಿಮಿನೇಟರ್‌ನಲ್ಲಿ ಗೆದ್ದ ತಂಡವನ್ನು ಕ್ವಾಲಿಫೈಯರ್ 2ರಲ್ಲಿ ಎದುರಿಸಲಿದೆ.

ಇನ್ನೂ ಬೆಳಗಾವಿಯ ಯುವಕನೋರ್ವ ಆರ್‌ಸಿಬಿ ಗೆದ್ದರೆ ಆ ದಿನವನ್ನು RCB ಫ್ಯಾನ್ಸ್​​​ ಹಬ್ಬ ಮತ್ತು ಒಂದು ದಿನ ರಜೆ ಘೋಷಣೆ ಮಾಡುವಂತೆ ಸಿಎಂಗೆ ಪತ್ರ ಬರೆದಿದ್ದಾರೆ. ಹೌದು ಬೆಳಗಾವಿ ಜಿಲ್ಲೆಯ ಗೋಕಾಕ್ ಮೂಲದ ಶಿವಾನಂದ ಮಲ್ಲನ್ನವರ್ ಎಂಬ ಯುವಕ ಆರ್‌ಸಿಬಿ ಅಭಿಮಾನಿಯಾಗಿದ್ದು, ಆರ್‌ಸಿಬಿ ಕಪ್ಪು ಗೆದ್ದ ದಿನ ಪ್ರತಿ ವರ್ಷ ರಜೆ ನೀಡಬೇಕು.

ಎಲ್ಲಾ ಜಿಲ್ಲೆಯಲ್ಲೂ ಆಚರಣೆ ಮಾಡಲು ವ್ಯವಸ್ಥೆ ಮಾಡಿಕೊಡಬೇಕು ಎಂದು ಆರ್‌ಸಿಬಿ ಫೈನಲ್‌ ತಲಪುತ್ತಿದ್ದಂತೆ ಸಿಎಂ ಸಿದ್ದರಾಮಯ್ಯಗೆ ಪತ್ರ ಬರೆಯುವ ಮೂಲಕ ವಿಶೇಷ ಮನವಿ ಮಾಡಿದ್ದಾರೆ. ಸದ್ಯ ಅಭಿಮಾನಿಯ ಮನವಿ ಪತ್ರ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.


Spread the love

LEAVE A REPLY

Please enter your comment!
Please enter your name here