ದೊಡ್ಡಬಳ್ಳಾಪುರ: ರೈತನ ಮೇಲೆ ಕರಡಿ ದಾಳಿ ಮಾಡಿ ಗಂಭೀರ ಗಾಯಗೊಳಿಸಿದ ಘಟನೆ ದೊಡ್ಡಬಳ್ಳಾಪುರದ ಕುಕ್ಕಲಹಳ್ಳಿ ಗ್ರಾಮದಲ್ಲಿ ನಡೆದಿದೆ. ಲಕ್ಷ್ಮಿನರಸಪ್ಪ ( 58) ಗಾಯಗೊಂಡ ರೈತನಾಗಿದ್ದು, ತಲೆಗೆ ಗಂಭೀರ ಗಾಯವಾಗಿದೆ.
Advertisement
ಮಳೆಯ ಹಿನ್ನಲೆ ಹೊಲದ ಕಡೆ ಮೇಕೆ ಮೇಯಿಸಲು ಹೋಗಿದ್ದರು. ಈ ವೇಳೆ ಪೊದೆಯಿಂದ ಹೊರಬಂದು ಏಕಾಏಕಿ ರೈತನ ಮೇಲೆ ದಾಳಿ ಮಾಡಿದೆ. ಮುಖ ಮತ್ತು ಕೈ ಭಾಗಕ್ಕೆ ಗಾಯಗಳಾಗಿದ್ದು,
ಗಾಯಾಳನ್ನು ಹೊಸಹಳ್ಳಿ ಪ್ರಾಥಮಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಸ್ಥಳಕ್ಕೆ ಅರಣ್ಯ ಇಲಾಖೆ ಅಧಿಕಾರಿಗಳು ಭೇಟಿ ಪರಿಶೀಲನೆ ನಡೆಸಿದ್ದಾರೆ. ಹೊಸಹಳ್ಳಿ ಪೋಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.