ವಿಜಯಸಾಕ್ಷಿ ಸುದ್ದಿ, ಗದಗ: ಸ್ಥಳೀಯ ಜಗದ್ಗುರು ತೋಂಟದಾರ್ಯ ವಿದ್ಯಾಪೀಠದ ಬಸವೇಶ್ವರ ಕಲಾ, ವಾಣಿಜ್ಯ ಹಾಗೂ ವಿಜ್ಞಾನ ಮಹಾವಿದ್ಯಾಲಯದ ಪ್ರಾ ಎಂ.ಎಂ. ಬುರಡಿಯವರ ಸಹಕಾರದಿಂದ ಕನ್ನಡ ವಿಭಾಗದ ವಿದ್ಯಾರ್ಥಿಗಳಿಂದ ಸಂಶೋಧನಾ ಕಾರ್ಯ ವೀಕ್ಷಣೆಗಾಗಿ ಐತಿಹಾಸಿಕ ಸ್ಥಳ ಲಕ್ಕುಂಡಿ ಗ್ರಾಮದ ಜೈನ ಬಸದಿ ಬ್ರಹ್ಮ ಜಿನಾಲಯ, ಹಾಲಗುಂಡಿ ಬಸವೇಶ್ವರ ದೇವಾಲಯ, ಕಾಶಿ ವಿಶ್ವೇಶ್ವರ, ಸೂರ್ಯ ದೇವಾಲಯ, ನಾನೇಶ್ವರ ದೇವಾಲಯ ಹಾಗೂ ಮಣಿಕೇಶ್ವರ ದೇವಾಲಯಗಳಿಗೆ ಭೇಟಿ ನೀಡಿ ಶಾಸನಗಳು, ಲಿಪಿಗಳು ಹಾಗೂ ಆಕರ ಸಾಮಗ್ರಿಗಳ ವೀಕ್ಷಣೆ ಮಾಡಿ ಐತಿಹಾಸಿಕ ವಿಷಯಗಳ ಕುರಿತು ಮಾರ್ಗದರ್ಶಕರಾದ ಪಾಪಳೆ ಅವರಿಂದ ಮಾಹಿತಿ ಸಂಗ್ರಹಿಸಿದರು.
ಈ ಸಂದರ್ಭದಲ್ಲಿ ಪ್ರೊ. ಕೆ.ಪಿ. ಹಂಡಿಯವರ, ಪ್ರೊ. ಕೆ.ಎಸ್. ಅಜನಾಳ, ಪ್ರೊ. ಕೆ.ಎಸ್. ಮಲ್ಲಾಪೂರ, ಲಕ್ಕುಂಡಿ ಗ್ರಾ.ಪಂ ಅಧ್ಯಕ್ಷ ಕೆ.ಎಸ್. ಪೂಜಾರ, ಉಪಾಧ್ಯಕ್ಷರಾದ ಶ್ರೇಯಾ ಕಟ್ಟಿಗಾರ, ಸದಸ್ಯರಾದ ಚಂದ್ರು ಕಟ್ಟಿಗಾರ, ಜವಳಿ ಉತ್ಪಾದಕರಾದ ವಿ.ಪಿ. ಅಜನಾಳ ಹಾಗೂ ಮಹಾವಿದ್ಯಾಲಯದ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.