ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ: ಸಮೀಪದ ಬಸವನಕೊಪ್ಪ ಗ್ರಾಮದ ಶ್ರೀ ಹಳವೀರ ಬಸವೇಶ್ವರ ಜಾತ್ರಾ ಮಹೋತ್ಸವ ಹಾಗೂ ನೂತನ ರಥದ ಲೋಕಾರ್ಪಣೆ ನಿಮಿತ್ತ ಜೂ.2ರಂದು ಬೆಳಿಗ್ಗೆ ಶ್ರೀ ಬಸವೇಶ್ವರ ಸ್ವಾಮಿಗೆ ಪ್ರಾತಃಕಾಲ ರುದ್ರಾಭಿಷೇಕ, ಬೆಳಿಗ್ಗೆ 8 ಗಂಟೆಗೆ ಕುಂಭೋತ್ಸವ ಮೆರವಣಿಗೆ, ಸಂಜೆ ಸಂಜೆ 5ಕ್ಕೆ ಶಿರಹಟ್ಟಿಯ ಜಗದ್ಗುರು ಫಕೀರ ಸಿದ್ದರಾಮ ಮಹಾಸ್ವಾಮಿಗಳ ಸಾನ್ನಿಧ್ಯದಲ್ಲಿ ನೂತನ ರಥದ ಲೋಕಾರ್ಪಣೆ ಮತ್ತು ರಥೋತ್ಸವ, ಬಳಿಕ ಧರ್ಮಸಭೆ ಜರುಗುವುದು.
ಹತ್ತಿಮತ್ತೂರಿನ ಶ್ರೀ ನಿಜಗುಣ ಮಹಾಸ್ವಾಮಿಗಳು, ಹೂವಿನಶಿಗ್ಲಿಯ ಶ್ರೀ ಚನ್ನವೀರ ಮಹಾಸ್ವಾಮಿಗಳು, ಗಂಜಿಗಟ್ಟಿಯ ಶ್ರೀ ವೈಜನಾಥ ಶಿವಲಿಂಗ ಶಿವಾಚಾರ್ಯರು, ಬಸವನಕೊಪ್ಪದ ಮುರಗಯ್ಯ ಹಿರೇಮಠ, ಗಿರಿಮಲ್ಲಯ್ಯ ಹಿರೇಮಠ ಸ್ವಾಮಿಗಳು ಸಾನ್ನಿಧ್ಯ ವಹಿಸುವರು. ಗ್ರಾಮದ ಗುರು-ಹಿರಿಯರು, ಗಣ್ಯರು, ಜನಪ್ರತಿನಿಧಿಗಳು ಉಪಸ್ಥಿತರಿರುವರು. ಜೂ.3ರ ಸಂಜೆ ಕಡುಬಿನೋತ್ಸವ ಜರುಗುವುದು ಎಂದು ದೇವಸ್ಥಾನ ಸಮಿತಿ ಪ್ರಕಟಣೆಯಲ್ಲಿ ತಿಳಿಸಿದೆ.