ಟ್ರೋಫಿ ಗೆದ್ದುಕೊಂಡು ತವರಿಗೆ ಬನ್ನಿ: RCB ಹುಡುಗರಿಗೆ ಶುಭ ಕೋರಿದ DCM ಡಿಕೆಶಿ!

0
Spread the love

ಬೆಂಗಳೂರು:- ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಪಂಜಾಬ್ ಕಿಂಗ್ಸ್ ನಡುವೆ ಇಂದು IPL ಫೈನಲ್ ಫೈಟ್ ನಡೆಯಲಿದೆ. ಹೀಗಾಗಿ ಜರ್ಸಿ ಧರಿಸಿ ಶುಭಕೋರಿರುವ DCM ಡಿಕೆ ಶಿವಕುಮಾರ್, ಆರ್​ಸಿಬಿ ಹುಡುಗರೇ ಟ್ರೋಫಿ ಗೆದ್ದುಕೊಂಡು ತವರಿಗೆ ಬನ್ನಿ ಎಂದು ಹಾರೈಸಿದ್ದಾರೆ.

Advertisement

ಇಂತಹ ಅದ್ಭುತ ದಿನಕ್ಕಾಗಿ ಕಳೆದ 18 ವರ್ಷಗಳಿಂದ ಕಾತುರದಿಂದ ಕಾಯುತ್ತಿದ್ದೇವೆ. ಟ್ರೋಫಿಗಾಗಿ ಸಾಕಷ್ಟು ಶ್ರಮ ಪಟ್ಟು ಆರ್​ಸಿಬಿ ಕೊನೆಗೆ ಐಪಿಎಲ್​ನಲ್ಲಿ ಫೈನಲ್​ ತಲುಪಿದೆ. ಇಂದು ಪಂಜಾಬ್ ಕಿಂಗ್ಸ್​ ವಿರುದ್ಧ ರಾಯಲ್ ಚಾಲೆಂಜರ್ಸ್​ ಬೆಂಗಳೂರು ಅಖಾಡಕ್ಕೆ ಇಳಿಯುತ್ತಿದೆ. ಇಡೀ ರಾಜ್ಯವೆಲ್ಲಾ ಟ್ರೋಫಿ ಗೆದ್ದು ಬರಲಿ ಎಂದು ಆರ್​ಸಿಬಿ ತಂಡದ ಹಿಂದೆ ನಿಂತಿದೆ. ಆ ಅದ್ಭುತ ಕ್ಷಣವನ್ನು ಸಾಧಿಸಿ ತೋರಿಸಿ ಎಂದು ಡಿಸಿಎಂ ಡಿ.ಕೆ ಶಿವಕುಮಾರ್ ಅವರು ಹೇಳಿದ್ದಾರೆ.

ಆರ್​ಸಿಬಿ ಕೇವಲ ಜೆರ್ಸಿ ಅಲ್ಲ, ಅದರ ಮೇಲೆ ಮಿಲಿಯನ್, ಮಿಲಿಯನ್ ಡ್ರೀಮ್​ಗಳು ಇವೆ. ನಾವು ನಿಮ್ಮೊಂದಿಗೆ ಇದ್ದೇವೆ. ಕರ್ನಾಟಕ ಹಾಗೂ ಇಲ್ಲಿನ ಸರ್ಕಾರವೆಲ್ಲಾ ನಿಮ್ಮೊಂದಿಗೆ ನಿಂತಿದೆ. ಆರ್​ಸಿಬಿ ಹುಡುಗರೇ ತವರಿಗೆ ಕಪ್​ ಗೆದ್ದುಕೊಂಡು ಬನ್ನಿ. ಟ್ರೋಫಿಗಾಗಿ ಕರ್ನಾಟಕದ ಕೋಟಿ ಕೋಟಿ ಜನರು ಹಾಗೂ ನಾನು ಕಾಯುತ್ತಿದ್ದೇನೆ. ಎಲ್ಲರಿಗೂ ಆಲ್​ ದೀ ಬೆಸ್ಟ್​ ಎಂದು ಡಿ.ಕೆ ಶಿವಕುಮಾರ್ ಅವರು ಶುಭ ಹಾರೈಸಿದ್ದಾರೆ.


Spread the love

LEAVE A REPLY

Please enter your comment!
Please enter your name here