ಶ್ರೀನಿವಾಸಪುರ: ರಾಜ್ಯವೇ ಬೆಚ್ಚಿ ಬೀಳುವಂತಹ ಭೀಕರ ಅತ್ಯಾಚಾರ ಪ್ರಕರಣವೊಂದು ಬೆಳಕಿಗೆ ಬಂದಿದೆ. ವೃದ್ಧೆಯ ಮೇಲೆ ಅತ್ಯಾಚಾರ ಮಾಡಿ ಕೊಲೆ ಮಾಡಲಾಗಿದೆ ಎಂಬ ದೂರು ದಾಖಲಾಗಿದೆ.
Advertisement
ಹೌದು ವೃದ್ಧೆಯನ್ನು ಹೊತ್ತೊಯ್ದು ಅತ್ಯಾಚಾರ ಮಾಡಿ ಕೊಲೆ ಮಾಡಿರುವ ಶಂಕೆ ಕೋಲಾರದ ಶ್ರೀನಿವಾಸಪುರದ ಸಂತೆ ಮೈದಾನದ ಬಳಿ ನಡೆದಿದೆ.
ಗಫರ್ ಖಾನ್ ಮೊಹಲ್ಲಾದ ಬಾಬಾ ಬಂಧಿತ ಆರೋಪಿಯಾಗಿದ್ದು, 2 ದಿನದ ಹಿಂದೆ ನಾಪತ್ತೆಯಾಗಿದ್ದ ವೃದ್ಧೆ ಶವವಾಗಿ ಪತ್ತೆಯಾಗಿದ್ದಾರೆ. ಮೃತ ವೃದ್ಧೆಯನ್ನು ಹೆಚ್.ಜಿ. ಹೊಸೂರಿನ ಲಕ್ಷ್ಮೀದೇವಮ್ಮ ಎಂದು ಗುರುತಿಸಲಾಗಿದೆ. ವೃದ್ಧೆಯನ್ನು ಹೊತ್ತೊಯ್ದ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.