ಗದಗ: ಕಾನೂನು ಉಲ್ಲಂಘಿಸಿದವರ ವಿರುದ್ಧ ಕಾನೂನಿನ ಪ್ರಕಾರ ಕ್ರಮ ಕೈಗೊಳ್ಳಲಾಗುವುದು ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ. ಲಕ್ಕುಂಡಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ರಾಜ್ಯದ ಕಾನೂನು ಸುವ್ಯವಸ್ಥೆಗೆ ಧಕ್ಕೆ ತರುವ ಯಾರೇ ಆದರೂ, ಎಷ್ಟೇ ಪ್ರಭಾವಿ ಆದರೂ ಅವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು. ಕಾನೂನು ಉಲ್ಲಂಘಿಸಿ ಕ್ರಿಮಿನಲ್ ಕೆಲಸ ಮಾಡೋದು ಬಳಿಕ ಧರ್ಮದ ಹೆಸರು ಹೇಳುವುದು ತಪ್ಪಲ್ಲವೇ ಎಂದು ಪ್ರಶ್ನಿಸಿದ್ದಾರೆ.
ಇನ್ನೂ ಲಕ್ಕುಂಡಿ ಚಾಲುಕ್ಯರ ರಾಜಧಾನಿ ಆಗಿತ್ತು. ಈಗ ಹೆಚ್.ಕೆ.ಪಾಟೀಲ ಆಸಕ್ತಿಯಿಂದಾಗಿ, ಲಕ್ಕುಂಡಿ ಅಭಿವೃದ್ಧಿ ಪ್ರಾಧಿಕಾರ ನಮ್ಮ ಸರ್ಕಾರದ ಅವಧಿಯಲ್ಲೇ ರಚನೆಯಾಗಿದೆ. ಚಾಲುಕ್ಯರ ಕಾಲದ ದೇವಸ್ಥಾನ, ಕೋಟೆ ಗಳನ್ನು ನಿರ್ಮಿಸಿದ್ದರು. ಇವುಗಳ ಅವಶೇಷಗಳ ಮೂಲಕ ಆ ಕಾಲದ ಶಿಲಾಶಾಸನಗಳ ಪರಿಚಯ ಮತ್ತು ರಾಜ್ಯಭಾರದ ಮಾಹಿತಿ ದೊರಕಿದೆ ಎಂದರು.
ಅದಲ್ಲದೆ ಕೊಪ್ಪಳ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಿದ್ದೆ ಆದ್ರೆ ರಾಜೀವಗಾಂಧಿ ಹತ್ಯೆ ಹಿನ್ನೆಲೆ ಆಗ ಸೋತಿದ್ದೆನು. ಲಕ್ಕುಂಡಿ ಆಗ ಕೊಪ್ಪಳ ಲೋಕಸಭಾ ಕ್ಷೇತ್ರಕ್ಕೆ ಸೇರಿತ್ತು. ಲಕ್ಕುಂಡಿಯ ಜನರು ಆಗ ನನಗೆ ಬೆಂಬಲಿಸಿದ್ದರು ಎಂದು ಹೇಳಿದ್ದರು.
ಇನ್ನೂ ಐಪಿಎಲ್ ಫೈನಲ್ನಲ್ಲಿ ಪಂಜಾಬ್ ತಂಡವನ್ನು ಎದುರಿಸುತ್ತಿರುವ ಆರ್ಸಿಬಿಗೆ ನನ್ನ ಬೆಂಬಲ ಎಂದು ಸಿಎಂ ಸಿದ್ದರಾಮಯ್ಯ ಹೇಳಿದರು. ಕ್ವಾಲಿಫೈಯರ್ 2 ನಲ್ಲಿ ಪ್ರಬಲ ಮುಂಬೈ ವಿರುದ್ಧ ಪಂಜಾಬ್ ಗೆದ್ದಿದೆ..ಆದ್ರೆ ಆರ್ ಸಿಬಿ ವಿರುದ್ಧ 101 ರನ್ ಗೆ ಆಲ್ ಔಟ್ ಆಗಿದ್ರು. ಆರ್ ಸಿಬಿ ಬೆಂಗಳೂರು ತಂಡ ಆಗಿರೋದ್ರಿಂದ ನನ್ನ ಬೆಂಬಲ ಆರ್ ಸಿಬಿಗೆನೇ, ಒಂದುವೇಳೆ ಪಂಜಾಬ್ ಗೆದ್ದರೂ ಅವರಿಗೂ ಶುಭಾಶಯ ಎಂದು ತಿಳಿಸಿದರು..