ರಾಯಲ್ ಚಾಲೆಂಜರ್ಸ್ ಬೆಂಗಳೂರು, ಪಂಜಾಬ್ ವಿರುದ್ಧ ಜಯಭೇರಿ ಬಾರಿಸುತ್ತಿದ್ದಂತೆ ಕರ್ನಾಟಕ ಸೇರಿದಂತೆ ವಿಶ್ವದೆಲ್ಲೆಡೆ ಸೆಲೆಬ್ರೆಷನಲ್ ಮಾಡಲಾಗಿದೆ. ಸುದೀರ್ಘ ಕಾಲದ ಕನಸೊಂದಕ್ಕೆ ರಜತ್ ನೇತೃತ್ವದ ತಂಡ ಬಿಗ್ ಬ್ರೇಕ್ ಹಾಕಿದೆ.
ಇನ್ನೂ ನಿನ್ನೆ ಇದೇ ಫೈನಲ್ ಪಂದ್ಯ ನೋಡಲು ಕೋಟ್ಯಾಂತರ ಅಭಿಮಾನಿಗಳು ಸಜ್ಜಾಗಿದ್ದರು. ಈ ವೇಳೆ ಎಣ್ಣೆಗೆ ಸಿಕ್ಕಾಪಟ್ಟೆ ಡಿಮ್ಯಾಂಡ್ ಹೆಚ್ಚಾಗಿತ್ತು ಎಂದು ವರದಿಯಾಗಿದೆ. ಅಂಕಿ ಅಂಶಗಳ ಸಮೇತ ಮದ್ಯ ಮಾರಾಟದ ದಾಖಲೆ ಬಿಡುಗಡೆ ಮಾಡಲಾಗಿದೆ.
ನಿನ್ನೆ ಒಂದೇ ದಿನ ರಾಜ್ಯದಲ್ಲಿ ದಾಖಲೆ ಮಟ್ಟದಲ್ಲಿ ಲಿಕ್ಕರ್ ಸೇಲ್ ಆಗಿದೆ. ಬರೋಬ್ಬರಿ 30 ಕೋಟಿ 66 ಲಕ್ಷ ಬೆಲೆಯ ಬಿಯರ್ ಮಾರಾಟ ಮಾಡಲಾಗಿದೆ. 127 ಕೋಟಿ 88 ಲಕ್ಷ ಮೌಲ್ಯದ 1.28 ಲಕ್ಷ ಬಾಕ್ಸ್ ಲಿಕ್ಕರ್ ಮಾರಾಟವಾಗಿದೆ. ಈ ಅಂಕಿ ಅಂಶ ರಾಜ್ಯದ ಜನರನ್ನು ಬೆಚ್ಚಿ ಬೀಳಿಸಿದೆ. ಒಂದೇ ದಿನ ಇಷ್ಟು ಮದ್ಯ ಸೇಲ್ ಆಗೋದಕ್ಕೆ ಸಾಧ್ಯವಾ? ಎಂದು ಅಚ್ಚರಿ ಮೂಡಿಸಿದೆ.
ಕಳೆದ ವರ್ಷ ಇದೇ ಜೂನ್ 3 ರಂದು 0.36 ಲಕ್ಷ ಬಾಕ್ಸ್ ಬಿಯರ್ ಸೇಲ್ ಆಗಿತ್ತು. ಬಿಯರ್ ನಿಂದ 6.29 ಕೋಟಿ ಆದಾಯ ಮಾತ್ರ ಬಂದಿತ್ತು. ಕಳೆದ ವರ್ಷ ಜೂನ್ 3ರಂದು 19.41 ಕೋಟಿ ಲಿಕ್ಕರ್ ಮಾರಾಟವಾಗಿತ್ತು. ಒಂದೆ ದಿನಕ್ಕೆ 157.94 ಕೋಟಿ ಆದಾಯ ಬಂದಿತ್ತು. ಕಳೆದ ವರ್ಷ ಇದೇ ಜೂನ್ 3 ರಂದು 25 ಕೋಟಿ ಮಾತ್ರ ಆದಾಯ ಬಂದಿತ್ತು. ಇದೀಗ 132.24 ಕೋಟಿ ಹೆಚ್ಚುವರಿ ಆದಾಯ ಬಂದಿದೆ.