HomeAgricultureಪ್ಲಾಸ್ಟಿಕ್ ಮಾಲಿನ್ಯಕ್ಕೆ ಅಂತ್ಯ ಹಾಡೋಣ

ಪ್ಲಾಸ್ಟಿಕ್ ಮಾಲಿನ್ಯಕ್ಕೆ ಅಂತ್ಯ ಹಾಡೋಣ

For Dai;y Updates Join Our whatsapp Group

Spread the love

ಪ್ರತಿ ವರ್ಷ ಜೂನ್ 5 ರಂದು, ವಿಶ್ವ ಪರಿಸರ ದಿನಕ್ಕಾಗಿ ಜಗತ್ತು ಒಂದಾಗುತ್ತದೆ. 150ಕ್ಕೂ ಹೆಚ್ಚು ದೇಶಗಳಲ್ಲಿ ಆಚರಿಸಲಾಗುವ ಇದು, ಪರಿಸರ ಜಾಗೃತಿ ಮೂಡಿಸಲು ಮತ್ತು ಕ್ರಮ ಕೈಗೊಳ್ಳಲು ಮೀಸಲಾಗಿರುವ ಅತಿದೊಡ್ಡ ಅಂತಾರಾಷ್ಟ್ರೀಯ ವೇದಿಕೆಯಾಗಿದೆ.

ಪರಿಸರ ಸಮಸ್ಯೆಗಳ ಬಗ್ಗೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲು ಕಚೇರಿಗಳು, ಶಾಲೆಗಳು ಮತ್ತು ಸ್ಥಳೀಯ ಸಂಸ್ಥೆಗಳು ವಿಶ್ವ ಪರಿಸರ ದಿನದಂದು ಕಾರ್ಯಕ್ರಮಗಳನ್ನು ಆಯೋಜಿಸುತ್ತವೆ. ಈ ವರ್ಷ, ಪ್ಲಾಸ್ಟಿಕ್ ಮಾಲಿನ್ಯದ ಮೇಲೆ ಗಮನ ಕೇಂದ್ರೀಕರಿಸಲಾಗಿದ್ದು, ಈ ಹೆಚ್ಚುತ್ತಿರುವ ಬಿಕ್ಕಟ್ಟನ್ನು ಎದುರಿಸಲು ಮತ್ತು ಭವಿಷ್ಯದ ಪೀಳಿಗೆಗೆ ಗ್ರಹವನ್ನು ರಕ್ಷಿಸಲು ಸಾಮೂಹಿಕ ಕ್ರಮ ಕೈಗೊಳ್ಳಲು ಸಮುದಾಯಗಳನ್ನು ಒತ್ತಾಯಿಸುತ್ತದೆ.

ವಿಶ್ವ ಪರಿಸರ ದಿನದಂದು, ತುರ್ತು ಪರಿಸರ ಸಮಸ್ಯೆಗಳನ್ನು ಬೆಳಕಿಗೆ ತರಲಾಗುತ್ತದೆ. ಪ್ರತಿ ವರ್ಷ ಅರಣ್ಯನಾಶ, ಜಾಗತಿಕ ತಾಪಮಾನ ಏರಿಕೆ ಮತ್ತು ಹವಾಮಾನ ಬದಲಾವಣೆಯಂತಹ ವಿಷಯಗಳನ್ನು ಉದ್ದೇಶಿಸಿ ವಿಭಿನ್ನ ಥೀಮ್ ಅನ್ನು ಆಯ್ಕೆ ಮಾಡಲಾಗುತ್ತದೆ. `ಪ್ಲಾಸ್ಟಿಕ್ ಮಾಲಿನ್ಯಕ್ಕೆ ಅಂತ್ಯ ಹಾಡುವುದು’ ವಿಶ್ವ ಪರಿಸರ ದಿನದ ಥೀಮ್ ಆಗಿದೆ. ಈ ವರ್ಷ, ವಿಶ್ವ ಪರಿಸರ ದಿನವು ಜಗತ್ತಿನಾದ್ಯಂತ ಸಮುದಾಯಗಳು ಸುಸ್ಥಿರ ಪರಿಹಾರಗಳನ್ನು ಅಳವಡಿಸಿಕೊಳ್ಳಲು ಮತ್ತು ಉತ್ತೇಜಿಸಲು ಪ್ರೋತ್ಸಾಹಿಸುವ ಅಭಿಯಾನಕ್ಕೆ ಪೂರಕವಾಗಿದೆ.

1972ರಲ್ಲಿ ಸ್ಟಾಕ್‌ಹೋಮ್‌ನಲ್ಲಿ ನಡೆದ ಮಾನವ ಪರಿಸರದ ಕುರಿತಾದ ವಿಶ್ವಸಂಸ್ಥೆಯ ಸಮ್ಮೇಳನದ ಸಮಯದಲ್ಲಿ ವಿಶ್ವ ಪರಿಸರ ದಿನವನ್ನು ಸ್ಥಾಪಿಸಲಾಯಿತು. ಆ ವರ್ಷದ ನಂತರ, ಯುಎನ್ ಜನರಲ್ ಅಸೆಂಬ್ಲಿ ಜೂನ್ 5ನ್ನು ವಿಶ್ವ ಪರಿಸರ ದಿನವೆಂದು ಅಧಿಕೃತವಾಗಿ ಘೋಷಿಸಿತು. ಮೊದಲ ಆಚರಣೆಯು 1973ರಲ್ಲಿ `ಓನ್ಲಿ ಒನ್ ಅರ್ಥ್’ ಎಂಬ ಥೀಮ್‌ನೊಂದಿಗೆ ನಡೆಯಿತು. ಇದು ಪರಿಸರ ಜಾಗೃತಿಗಾಗಿ ಅತಿದೊಡ್ಡ ಜಾಗತಿಕ ವೇದಿಕೆಯಾಗಲಿರುವ ಆರಂಭವನ್ನು ಗುರುತಿಸುತ್ತದೆ. ಅಂದಿನಿಂದ, ಪರಿಸರ ದಿನವು ವಿಶ್ವದ ಅತಿದೊಡ್ಡ ಪರಿಸರ ಜಾಗೃತಿ ಕಾರ್ಯಕ್ರಮವಾಗಿ ಬೆಳೆದಿದೆ.

ಮಾಲಿನ್ಯ, ಜೀವವೈವಿಧ್ಯ ನಷ್ಟ ಮತ್ತು ಹವಾಮಾನ ಬದಲಾವಣೆಯ ಮೂರು ಪಟ್ಟು ಬೆದರಿಕೆ ಪ್ಲಾಸ್ಟಿಕ್ ಮಾಲಿನ್ಯದಿಂದ ಇನ್ನಷ್ಟು ಹದಗೆಡುತ್ತಿದೆ. ವಾರ್ಷಿಕವಾಗಿ 11 ಮಿಲಿಯನ್ ಟನ್ ಪ್ಲಾಸ್ಟಿಕ್ ಕಸವನ್ನು ನೀರಿನ ಪರಿಸರಕ್ಕೆ ಸುರಿಯಲಾಗುತ್ತದೆ ಮತ್ತು ಭೂಕುಸಿತಗಳು ಮತ್ತು ಒಳಚರಂಡಿಗಳಿಂದ ಬರುವ ಮೈಕ್ರೋಪ್ಲಾಸ್ಟಿಕ್‌ಗಳು ಮಣ್ಣಿನಲ್ಲಿ ಸಂಗ್ರಹವಾಗುತ್ತವೆ. ಇದು ಪರಿಸರ ಹಾನಿಯನ್ನುಂಟುಮಾಡುತ್ತದೆ.

ಪರಿಸರ ದಿನವು ಸರ್ಕಾರಗಳು ಸಾರ್ವಜನಿಕರಿಗೆ ಶಿಕ್ಷಣ ನೀಡುವುದರ ಜೊತೆಗೆ ಗಣನೀಯ ನೀತಿ ಸುಧಾರಣೆಗಳನ್ನು ಜಾರಿಗೆ ತರಲು ಪ್ರೋತ್ಸಾಹಿಸುತ್ತದೆ. ನಮಗೆ ಅನೇಕ ಕಾಯಿಲೆಗಳು ಬರುತ್ತವೆ, ಅದರಲ್ಲಿ ಮಾರಣಾಂತಿಕ ಕ್ಯಾನ್ಸರ್ ಕೂಡ ಒಂದು. ಹಾಗಾಗಿ ಎಷ್ಟು ಸಾದ್ಯವೋ ಅಷ್ಟು ಪ್ಲಾಸ್ಟಿಕ್ ಬಳಕೆಯನ್ನು ನಿಲ್ಲಿಸೋಣ.

ಅನೇಕ ಕಾರಣಗಳಿಂದ ನಾವು ಪರಿಸರ ವಿನಾಶ ಮಾಡುತ್ತಿದ್ದೇವೆ. ಅದರಲ್ಲಿ ವಾಯು ಮಾಲಿನ್ಯವು ಇನ್ನೊಂದು. ನಾವು ಉಪಯೋಗಿಸುವ ವಾಹನಗಳಿಂದ, ಗೃಹಬಳಕೆ ಸಾದನಗಳಿಂದ ಹಾಗೂ ಕಾರ್ಖಾನೆಗಳಿಂದ ಹೊರಸೂಸುವ ವಿಷ ಅನಿಲವು ಬಹುಮುಖ್ಯ ಕಾರಣ. ವಾತಾವರಣದ ಶುದ್ಧ ಗಾಳಿಗೆ ನಮಗೆ ತಿಳಿದೇ ಈ ರೀತಿಯ ವಿಷಪ್ರಾಶನ ಮಾಡುತ್ತಿದ್ದೇವೆ. ಆ ಮೂಲಕ ನಾವೇ ವಿನಾಶದ ಅಂಚಿಗೆ ನಮ್ಮ ಪರಿಸರವನ್ನು ಕೊಂಡೊಯ್ಯುತ್ತಿದ್ದೇವೆ.

ಏಳಿಗೆಯ ಹೆಸರಿನಲ್ಲಿ ನದಿ, ಕಾಲುವೆ ಹಾಗೂ ಸಾಗರಗಳಿಗೆ ನಾವು ತ್ಯಾಜ್ಯವನ್ನು ಹಾಕುವುದರ ಮೂಲಕ ಜಲಮಾಲಿನ್ಯಕ್ಕೆ ಕಾರಣವಾಗುತ್ತಿದ್ದೇವೆ. ಅಲ್ಲದೇ ಕಾರ್ಖಾನೆಯ ಕೆಟ್ಟ ವಿಷಕಾರಕ ದ್ರವಗಳನ್ನು ನೀರಿನಲ್ಲಿ ಸೇರಿಸುತ್ತಿದ್ದೇವೆ, ಅತಿಯಾಗಿ ಪ್ಲಾಸ್ಟಿಕ್ ತ್ಯಾಜ್ಯವು ನೀರಿನಲ್ಲಿ ಸೇರುತ್ತಿದೆ. ಇದಲ್ಲದೆ ಕೊಳವೆ ಬಾವಿಗಳನ್ನು ಅತಿಯಾಗಿ ಉಪಯೋಗಿಸುವ ನಾವು ಭೂಮಿಯ ಅಂತರ್ಜಲವನ್ನು ಬರಿದು ಮಾಡುತ್ತಿದ್ದೇವೆ. ಇಂತಹ ಅನೇಕ ಕಾರಣಗಳಿಂದ ನಮ್ಮ ಜಲಮೂಲ ಕೂಡ ವಿಷಕಾರಿ ಆಗುತ್ತಿದೆ.

ಪರಿಸಕ್ಕೆ ನಾವು ಮಾಡುತ್ತಿರುವ ಹಲವು ಬಗೆಯ ಮಾಲಿನ್ಯ ಮತ್ತು ಕೆಡುಕುಗಳನ್ನು ತಡೆಗಟ್ಟಲು ಏನು ಮಾಡಬೇಕು ಎಂದರೆ, ಮೊದಲಿಗೆ ನಮಗೆ ಪರಿಸರ ಸಂರಕ್ಷಣೆಯ ಕುರಿತು ಜ್ಞಾನ ಪಡೆಯಬೇಕು. ಮರಗಳನ್ನು ಬೇಕಾಬಿಟ್ಟಿ ಕಡಿಯುವುದನ್ನು ನಿಲ್ಲಿಸಬೇಕು, ಜಲಮಾಲಿನ್ಯ ಮಾಡದಂತೆ ತಡೆಯಬೇಕು, ವಾಯುವಿಗೆ ವಿಶಾನಿಲ ಸೇರದಂತೆ ಎಚ್ಚರ ವಹಿಸಬೇಕು. ನಮ್ಮ ಸುತ್ತ-ಮುತ್ತ ಗಿಡಮರಗಳನ್ನು ಬೆಳೆಸಬೇಕು. ಈ ಕುರಿತು ಬಾಲ್ಯದಲ್ಲೇ ಮಕ್ಕಳಿಗೆ ಶಿಕ್ಶಣ ನೀಡಬೇಕು. ಪರಿಸರದ ಕುರಿತು ಜಾಗೃತಿ ಮೂಡಿಸಬೇಕು.

ನಾವು ಪದ್ಮಶ್ರೀ ಪ್ರಶಸ್ತಿ ಪುರಸ್ಕೃತರಾದ ತುಳಸಿ ಗೌಡ, ಸುಂದರ್ ಲಾಲ್ ಬಹುಗುಣ, ಸಾಲುಮರದ ತಿಮ್ಮಕ್ಕ ಹಾಗೂ ಜಾದವ್ ಪಯೆಂಗ್ ಎಂಬ ಸ್ಪೂರ್ತಿಯ ಕಿಡಿಗಳನ್ನು ಮನಸ್ಸಿನಲ್ಲಿ ಇಟ್ಟುಕೊಂಡು ಪರಿಸರದ ಬಗ್ಗೆ ಕಾಳಜಿ ವಹಿಸಬೇಕಿದೆ. ಅಂತಹ ಮಹನೀಯರಿಂದ ಕಲಿಯುವುದು ಬಹಳಷ್ಟಿದೆ. ನಿಮ್ಮ ಸುತ್ತಮುತ್ತಲಿನ ವಾತಾವರಣವನ್ನು ಹಚ್ಚ ಹಸುರಿನ ತಾಣವನ್ನಾಗಿಸಲು ಇಂತಹ ಮಹನೀಯರ ಪ್ರೇರಣೆ ಪಡೆಯಬೇಕು. ಸಮಾಜಕ್ಕೆ ಪರಿಸರದ ಕುರಿತು ಇನ್ನೂ ಹೆಚ್ಚಿನ ಅರಿವು ಮೂಡಿಸಬೇಕು. ಆ ಮೂಲಕ ನಮ್ಮ ಪರಿಸರವನ್ನು ಮುಂದಿನ ಪೀಳಿಗೆಗೆ ಉಳಿಸಿ-ಬೆಳೆಸಬೇಕಿದೆ.

 ಎಂ.ಎಚ್. ಸವದತ್ತಿ.

ವಿಜ್ಞಾನ ಶಿಕ್ಷಕರು, ಗದಗ.


Spread the love
Vijaya Sakshi
Vijaya Sakshi
Vijayasakshi is a Kannada Daily News Paper Publishing From Gadag. Get Latest Gadag District News Live Updates Online In Vijayasakshi.Com Vijayasakshi Kannada Daily Newspaper Provide News On Gadag District Including Karnataka, India News In Kannada. Contact-9448326533/9019256545 E-mail-vijayasakshidaily@gmail.com

LEAVE A REPLY

Please enter your comment!
Please enter your name here

E-Paper

E-paper

Must Read

spot_img
error: Content is protected !!