HomeGadag Newsಸದಸ್ಯರಾಗಿ ವೀಣಾ ಕಟ್ನಳ್ಳಿ ನೇಮಕ

ಸದಸ್ಯರಾಗಿ ವೀಣಾ ಕಟ್ನಳ್ಳಿ ನೇಮಕ

For Dai;y Updates Join Our whatsapp Group

Spread the love

ವಿಜಯಸಾಕ್ಷಿ ಸುದ್ದಿ, ಗದಗ: ಬಾಲನ್ಯಾಯ (ಮಕ್ಕಳ ಪಾಲನೆ ಮತ್ತು ಪೋಷಣೆ) ಕಾಯ್ದೆ 2015 ಹಾಗೂ ಬಾಲನ್ಯಾಯ ಮಾದರಿ ನಿಯಮಗಳ 2016ರ ಅನ್ವಯ ಜಿಲ್ಲಾ ಮಟ್ಟದ ತನಿಖಾ ಸಮಿತಿಯ ಸದಸ್ಯರನ್ನಾಗಿ ವೀಣಾ ಕಟ್ನಳ್ಳಿ ಅವರನ್ನು ನೇಮಕ ಮಾಡಿ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಮಕ್ಕಳ ರಕ್ಷಣಾ ಸಮಿತಿ ಅಧ್ಯಕ್ಷ ಸಿ.ಎನ್. ಶ್ರೀಧರ್ ಆದೇಶಿದ್ದಾರೆ.

ರಾಜ್ಯದಲ್ಲಿ ಮಕ್ಕಳ ಪಾಲನಾ ಸಂಸ್ಥೆಗಳು ಬಾಲನ್ಯಾಯ ಕಾಯ್ದೆಯನ್ವಯ ಮಿಷನ್ ವಾತ್ಸಲ್ಯ ಯೋಜನೆಯಡಿ ಕಾರ್ಯನಿರ್ವಹಿಸುತ್ತಿವೆ. ಸಂಕಷ್ಟ ಪರಿಸ್ಥಿತಿಯಲ್ಲಿರುವ ಮಕ್ಕಳ ಪಾಲನೆ, ಸಂರಕ್ಷಣೆ ಹಾಗೂ ಪುನರ್ವಸತಿ ಕಲ್ಪಿಸುವುದು ಇಲಾಖೆಯ ಉದ್ದೇಶವಾಗಿದೆ. ಆದ್ದರಿಂದ ಬಾಲನಾಯ ಮಾದರಿ ನಿಯಮಗಳು 2016 ತಿದ್ದುಪಡಿ 2022ರ ನಿಯಮ 41(1) ಮತ್ತು (8)ರಲ್ಲಿ ಜಿಲ್ಲಾ ಮಟ್ಟದ ತನಿಖಾ ಸಮಿತಿಯನ್ನು ರಚಿಸಲಾಗಿದೆ.

ಅಪರ ಜಿಲ್ಲಾಧಿಕಾರಿಗಳನ್ನು ಅಧ್ಯಕ್ಷರನ್ನಾಗಿ, ಮಕ್ಕಳ ಕಲ್ಯಾಣ ಸಮಿತಿ ಅಧ್ಯಕ್ಷೆ ಜಯಶ್ರೀ ಕವಲೂರು ಅವರನ್ನು ಸಮಿತಿ ಸದಸ್ಯರನ್ನಾಗಿ, ಜಿಲ್ಲಾ ಮಕ್ಕಳ ರಕ್ಞಣಾಧಿಕಾರಿಯನ್ನು ಸದಸ್ಯ ಕಾರ್ಯದರ್ಶಿಯನ್ನಾಗಿ, ಚಂದ್ರಕಾಂತ ಚವ್ಹಾಣ, ಮಾನಸಿಕ ಆರೋಗ್ಯ ತಜ್ಞೆ ಡಾ. ವರ್ಷಾ ಅಂಘಡಿ ಅವರನ್ನು ಸದಸ್ಯರನ್ನಾಗಿ ಹಾಗೂ ವೀಣಾ ಕಟ್ನಳ್ಳಿ ಅವರನ್ನು ಸದಸ್ಯರನ್ನಾಗಿ ನೇಮಕ ಮಾಡಲಾಗಿದೆ.

ಸಮಿತಿ ಸದಸ್ಯರು ಜಿಲ್ಲಾ ತನಿಖಾ ಸಮಿತಿಯು ಜಿಲ್ಲೆಯಲ್ಲಿನ ಮಕ್ಕಳ ಪಾಲನಾ ಸಂಸ್ಥೆಗಳಿಗೆ ಭೇಟಿ ನೀಡಿ ನಮೂನೆ-46ರಲ್ಲಿ ವರದಿ ಸಲ್ಲಿಸುವುದು, ಖಾಸಗಿ ಮತ್ತು ಸರ್ಕಾರಿ ಪಾಲನಾ ಸಂಸ್ಥೆಗಳನ್ನು ಒಳಗೊಂಡAತೆ ಪ್ರವಾಸದ ವೇಳಾಪಟ್ಟಿಯನ್ನು ಯೋಜಿಸಿ ಗರಿಷ್ಠ 3 ತಿಂಗಳಲ್ಲಿ ಜಿಲ್ಲೆಯ ಎಲ್ಲಾ ಮಕ್ಕಳ ಪಾಲನಾ ಸಂಸ್ಥೆಗಳ ಪರಿಶೀಲನೆ ನಡೆಸುವುದು, ಜಿಲ್ಲಾ ತನಿಖಾ ಸಮಿತಿಯು ಬಾಲನ್ಯಾಯ (ಮಕ್ಕಳ ಪಾಲನೆ ಮತ್ತು ರಕ್ಷಣೆ) ಕಾಯ್ದೆ 2015 ತಿದ್ದುಪಡಿ 2021, ಮಾದರಿ ನಿಯಮಗಳು 2016 ತಿದ್ದುಪಡಿ 2022 ರನ್ವಯ ಮಕ್ಕಳ ಪಾಲನಾ ಸಂಸ್ಥೆಗಳಿಗೆ ಭೇಟಿ ನೀಡಿದ ಸಮಯದಲ್ಲಿ ಗಮನಿಸಿದ ಅಂಶಗಳು ಹಾಗೂ ಅದನ್ನು ಉತ್ತಮಪಡಿಸಲು ಸಲಹೆಗಳನ್ನು ಜಿಲ್ಲಾಧಿಕಾರಿಗಳಿಗೆ ಮತ್ತು ನಿರ್ದೇಶನಾಲಯಕ್ಕೆ ವರದಿ ಮಾಡುವುದು, ಜಿಲ್ಲಾ ತನಿಖಾ ಸಮಿತಿಯು ಮಕ್ಕಳ ಪಾಲನಾ ಸಂಸ್ಥೆಗಳಿಗೆ ಭೇಟಿ ನೀಡಿದ ಸಮಯದಲ್ಲಿ ಮಕ್ಕಳೊಂದಿಗೆ ಅವರ ಯೋಗ ಕ್ಷೇಮದ ಬಗ್ಗೆ ಸಂವಹನ ನಡೆಸಿ ಅವರ ಪ್ರತಿಕ್ರಿಯೆಯನ್ನು ನಮೂದಿಸುವುದು ಹಾಗೂ ಜಿಲ್ಲಾ ವ್ಯಾಪ್ತಿಯಲ್ಲಿ ಮಕ್ಕಳ ಪಾಲನಾ ಸಂಸ್ಥೆಗಳ ಕಾರ್ಯನಿರ್ವಣೆ ಹಾಗೂ ಸುಧಾರಣೆಗೆ ತೆಗೆದುಕೊಂಡಿರುವ ಕ್ರಮದ ಕುರಿತು ವರದಿಯನ್ನು ಈ ಕಾರ್ಯಾಲಯ ಮೂಲಕ ರಾಜ್ಯ ಸರ್ಕಾರಕ್ಕೆ ಪ್ರತಿ ವರ್ಷವೂ ಸಲ್ಲಿಸುವುದಾಗಿದೆ.


Spread the love
Vijaya Sakshi
Vijaya Sakshi
Vijayasakshi is a Kannada Daily News Paper Publishing From Gadag. Get Latest Gadag District News Live Updates Online In Vijayasakshi.Com Vijayasakshi Kannada Daily Newspaper Provide News On Gadag District Including Karnataka, India News In Kannada. Contact-9448326533/9019256545 E-mail-vijayasakshidaily@gmail.com

LEAVE A REPLY

Please enter your comment!
Please enter your name here

E-Paper

E-paper

Must Read

spot_img
error: Content is protected !!