Gold Price: ಚಿನ್ನಾಭರಣ ಪ್ರಿಯರಿಗೆ ಶಾಕ್ ಕೊಟ್ಟ ಬಂಗಾರ: ಇಂದಿನ ಚಿನ್ನ-ಬೆಳ್ಳಿ ಬೆಲೆ ಇಲ್ಲಿದೆ

0
Spread the love

ಬೆಂಗಳೂರು: ಅಬ್ಬಾ ಈಗಂತೂ ಬಂಗಾರ ಎಂದರೆ ಮಧ್ಯಮ ವರ್ಗದವರಿಗೆ ತಲೆ ತಿರುಗಿದಂತೆಯೇ ಆಗುತ್ತದೆ, ಹಲವು ತಿಂಗಳುಗಳ ಹಿಂದೆ ಏಳು-ಎಂಟರ ಗಡಿಯಲ್ಲೇ ಕುಣಿಯುತ್ತಿದ್ದ ಬೆಲೆ ಕಳೆದ ಒಂದು ತಿಂಗಳಿನಲ್ಲಿ ಊಹಿಸಲಾಗದಷ್ಟು ಏರಿಕೆ ಕಂಡಿದೆ.

Advertisement

ಸದ್ಯ ಬಂಗಾರದ ದರ ಹಿಂದೆಂದೂ ಊಹಿಸದಂತೆ ಸಖತ್ ಏರಿಕೆಯಾಗಿದೆ. ಬೇಸಿಗೆ ಕಾಲವು ಸಾಮಾನ್ಯವಾಗಿ ಮದುವೆ ಸೀಸನ್ ಆಗಿದ್ದು ಅನೇಕರು ಬಂಗಾರದ ಆಭರಣಕೊಳ್ಳಬಯಸುತ್ತಿರುತ್ತಾರೆ. ಇಂತಹ ಸಂದರ್ಭದಲ್ಲಿ ಗಗನಮುಖಿಯಾಗಿರುವ ಬಂಗಾರದ ದರ ಆಭರಣಕೊಳ್ಳಬಯಸುವವರಿಗಂತೂ ಹೈರಾಣಾಗುವಂತೆ ಮಾಡಿದೆ.

ಇಂದು ಒಂದೇ ದಿನ ಬೆಳ್ಳಿ ಬೆಲೆ ದಾಖಲೆ ಮಟ್ಟಕ್ಕೆ ಏರಿದೆ. ಇಂದು ಶುಕ್ರವಾರ ಬೆಳ್ಳಿ ಬೆಲೆ ಗ್ರಾಮ್​​ಗೆ 3 ರೂಗಳಷ್ಟು ಹೈಜಂಪ್ ಮಾಡಿದೆ. ನಿನ್ನೆ ಮತ್ತು ಮೊನ್ನೆ ಎರಡೂ ದಿನ ಎರಡೆರಡು ರೂನಷ್ಟು ಹೆಚ್ಚಳವಾಗಿತ್ತು. ಮೂರು ದಿನದಲ್ಲಿ ಬರೋಬ್ಬರಿ 7 ರೂಗಳಷ್ಟು ಏರಿಕೆಯಾಗಿದೆ ಬೆಳ್ಳಿ ಬೆಲೆ. ಇತಿಹಾಸದಲ್ಲಿ ಬೆಳ್ಳಿ ಬೆಲೆ ಇಷ್ಟು ಕ್ಷಿಪ್ರವಾಗಿ ತೀಕ್ಷ್ಣ ಏರಿಕೆ ಆಗಿರುವುದು ಇದೇ ಮೊದಲಿರಬೇಕು.

ಚಿನ್ನದ ಬೆಲೆ ಭಾರತದಲ್ಲಿ ಇಂದು ಬದಲಾಗದೇ ಹೋದರೂ ಹಲವು ದೇಶಗಳಲ್ಲಿ ಬೆಲೆ ಸ್ವಲ್ಪ ಮಟ್ಟಿಗೆ ಇಳಿದಿದೆ. ಭಾರತದಲ್ಲಿ ಸದ್ಯ 10 ಗ್ರಾಮ್​ನ 22 ಕ್ಯಾರಟ್ ಚಿನ್ನದ ಬೆಲೆ 91,300 ರುಪಾಯಿ ಇದೆ. 24 ಕ್ಯಾರಟ್​ನ ಅಪರಂಜಿ ಚಿನ್ನದ ಬೆಲೆ 99,600 ರುಪಾಯಿ ಆಗಿದೆ. 100 ಗ್ರಾಮ್ ಬೆಳ್ಳಿ ಬೆಲೆ 10,700 ರುಪಾಯಿ ಇದೆ. ಬೆಂಗಳೂರಿನಲ್ಲಿ ಚಿನ್ನದ ಬೆಲೆ 10 ಗ್ರಾಮ್​ಗೆ 91,300 ರುಪಾಯಿ ಆಗಿದೆ, ಬೆಳ್ಳಿ ಬೆಲೆ 100 ಗ್ರಾಮ್​ಗೆ 10,700 ರುಪಾಯಿಯಲ್ಲಿ ಇದೆ.

ಭಾರತದಲ್ಲಿರುವ ಚಿನ್ನ ಮತ್ತು ಬೆಳ್ಳಿ ಬೆಲೆ (ಜೂನ್ 6ಕ್ಕೆ)

  • 22 ಕ್ಯಾರಟ್​ನ 10 ಗ್ರಾಂ ಚಿನ್ನದ ಬೆಲೆ: 91,300 ರೂ
  • 24 ಕ್ಯಾರಟ್​ನ 10 ಗ್ರಾಂ ಚಿನ್ನದ ಬೆಲೆ: 99,600 ರೂ
  • 18 ಕ್ಯಾರಟ್​ನ 10 ಗ್ರಾಂ ಚಿನ್ನದ ಬೆಲೆ: 74,700 ರೂ
  • ಬೆಳ್ಳಿ ಬೆಲೆ 10 ಗ್ರಾಂಗೆ: 1,070 ರೂ

ಬೆಂಗಳೂರಿನಲ್ಲಿ ಚಿನ್ನ, ಬೆಳ್ಳಿ ಬೆಲೆ

  • 22 ಕ್ಯಾರಟ್​ನ 10 ಗ್ರಾಂ ಚಿನ್ನದ ಬೆಲೆ: 91,300 ರೂ
  • 24 ಕ್ಯಾರಟ್​ನ 10 ಗ್ರಾಂ ಚಿನ್ನದ ಬೆಲೆ: 99,600 ರೂ
  • ಬೆಳ್ಳಿ ಬೆಲೆ 10 ಗ್ರಾಂಗೆ: 1,070 ರೂ

ವಿವಿಧ ನಗರಗಳಲ್ಲಿರುವ 22 ಕ್ಯಾರಟ್ ಚಿನ್ನದ ಬೆಲೆ (10 ಗ್ರಾಮ್​ಗೆ)

  • ಬೆಂಗಳೂರು: 91,300 ರೂ
  • ಚೆನ್ನೈ: 91,300 ರೂ
  • ಮುಂಬೈ: 91,300 ರೂ
  • ದೆಹಲಿ: 91,450 ರೂ
  • ಕೋಲ್ಕತಾ: 91,300 ರೂ
  • ಕೇರಳ: 91,300 ರೂ
  • ಅಹ್ಮದಾಬಾದ್: 91,350 ರೂ
  • ಜೈಪುರ್: 91,450 ರೂ
  • ಲಕ್ನೋ: 91,450 ರೂ
  • ಭುವನೇಶ್ವರ್: 91,300 ರೂ

Spread the love

LEAVE A REPLY

Please enter your comment!
Please enter your name here