HomeKarnataka NewsRCB, KSCA ಒತ್ತಡ ಹಾಕಿದ್ರೆ ಒಪ್ಕೋಬಿಡ್ತಾರಾ.? ಇವರು ಸರ್ಕಾರಕ್ಕಿಂತ ದೊಡ್ಡವ್ರಾ.?: ನಿಖಿಲ್ ಕುಮಾರಸ್ವಾಮಿ

RCB, KSCA ಒತ್ತಡ ಹಾಕಿದ್ರೆ ಒಪ್ಕೋಬಿಡ್ತಾರಾ.? ಇವರು ಸರ್ಕಾರಕ್ಕಿಂತ ದೊಡ್ಡವ್ರಾ.?: ನಿಖಿಲ್ ಕುಮಾರಸ್ವಾಮಿ

For Dai;y Updates Join Our whatsapp Group

Spread the love

ಬೆಂಗಳೂರು: ಡಿ.ಕೆ ಶಿವಕುಮಾರ್ ಡಿಸಿಎಂ ಅಲ್ಲ, ರೀಲ್ಸ್ ಮಿನಿಸ್ಟರ್ ಅವರು. ಆರ್ಸಿಬಿ ಅಭಿಮಾನಿಗಳ ಸಾವಿನ ಸುದ್ದಿ ತಿಳಿದ ಮೇಲೂ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಕಫ್ ಗೆ ಮುತ್ತು ಕೊಟ್ಟು ಸಾವಿನಲ್ಲೂ ಸಂಭ್ರಮ ಮಾಡ್ತಾರೆ ಎಂದು ಡಿ.ಕೆ ಶಿವಕುಮಾರ್ ವಿರುದ್ಧ ನಿಖಿಲ್ ಕುಮಾರಸ್ವಾಮಿ ಕಿಡಿಕಾರಿದರು.

ಬೆಂಗಳೂರಿನಲ್ಲಿ ಮಾಧ್ಯಮಗಳ ಜತೆ ಮಾತನಾಡಿದ ಅವರು, ಸರ್ಕಾರ ತನ್ನ ತಪ್ಪನ್ನು ಮುಚ್ಚಿಕೊಳ್ಳಲು ಪೊಲೀಸರನ್ನು ಅಮಾನತು ಮಾಡಿದ್ದಾರೆ. ಖುದ್ದು ಪೊಲೀಸರೇ ಎರಡೆರಡು ಕಡೆ ಕಾರ್ಯಕ್ರಮ ಬೇಡ ಅಂದರು ಸಿಎಂ ಮತ್ತು ಡಿಸಿಎಂ ಕ್ರೆಡಿಟ್ ಪಡೆಯೋಕೆ ಈ ಕಾರ್ಯಕ್ರಮ ಮಾಡಿ ಅನಾಹುತಕ್ಕೆ ಕಾರಣರಾಗಿದ್ದಾರೆ ಎಂದು ಅವರು ವಾಗ್ದಾಳಿ ನಡೆಸಿದರು.

ಸಾವಿನ ವಿಷಯ ನನಗೆ ಗೊತ್ತಿರಲಿಲ್ಲ, ಅಲ್ಲಿ ನೆಟ್ವರ್ಕ್ ಇರ್ಲಿಲ್ಲ , ನಾನು ಮಾಧ್ಯಮಗಳ ಮೂಲಕ ವಿಷಯ ತಿಳಿದುಕೊಂಡೆ ಅಂತ ಹೇಳಿದ್ರು, ಅಲ್ಲಿ ಜಾಮಾರ್ ಹಾಕಿದ್ರೆ ವಿಷಯವನ್ನ ನೀವು ಹೇಗೆ ತಿಳಿದುಕೊಂಡರಿ ಇದಕ್ಕೆ ಡಿಸಿಎಂ ಅವರೇ ಉತ್ತರಿಸಬೇಕು ಎಂದು ಅವರು ಪ್ರಶ್ನಿಸಿದರು.

ಇವರುಗಳು ಕ್ರೆಡಿಟ್ ಪಡೆದುಕೊಳ್ಳಲು ಹೋಗಿ ಅಮಾಯಕರ ಜೀವಗಳನ್ನ ಬಲಿ ಪಡೆದಿದ್ದಾರೆ. ಸ್ವತಃ ಸಿಎಂ ಸಿದ್ದರಾಮಯ್ಯ ಅವರೇ ಟ್ವೀಟ್ ಮಾಡಿ ಜನರಿಗೆ ಅಭಿಮಾನಿಗಳಿಗೆ ಈ ಕಾರ್ಯಕ್ರಮಕ್ಕೆ ಎಲ್ಲರೂ ಆಗಮಿಸಬೇಕೆಂದು ಹೇಳಿದ್ರು. ಈಗ ಪೊಲೀಸರನ್ನ ಅಮಾನತು ಮಾಡಿರುವುದು ಕೋತಿ ತಾನು ಮೊಸರು ತಿಂದು ಮೇಕೆ ಬಾಯಿಗೆ ಒರೆಸಿದಂತಾಗಿದೆ ಎಂದು ವಾಗ್ದಾಳಿ ನಡೆಸಿದರು.

ಪೊಲೀಸರ ಮೇಲೆ ಗೂಬೆ ಕೂರಿಸುವ ಕೆಲಸ ಮಾಡ್ತಿದ್ದಾರೆ

ಐಎಎಸ್,ಐಪಿಎಸ್ ಅಧಿಕಾರಿಗಳನ್ನ ಮುಂದೆ ಇಡ್ಕೊಂಡು ನಿಮಗೆ ಬೇಕಾದ ತೀರ್ಮಾನ ತೆಗೆದುಕೊಂಡು. ಕೊನೆಗೆ ಪೊಲೀಸರ ಮೇಲೆ ಗೂಬೆ ಕೂರಿಸುವ ಕೆಲಸ ಮಾಡ್ತಿದ್ದಾರೆ. ಸರ್ಕಾರ ಏನೇ ತಪ್ಪುಮಾಡಿದ್ರು ನಿಮ್ಮ ಮೇಲೆಯೇ ಗೂಬೆ ಕೂರಿಸುತ್ತದೆ. ಈ ಹಿನ್ನೆಲೆಯಲ್ಲಿ ನಿಷ್ಠಾವಂತ ಅಧಿಕಾರಿಗಳಿಗೆ ಕೈಮುಗಿದು ಮನವಿ ಮಾಡುತ್ತೇನೆ. ಇನ್ನಾದರು ಎಚ್ಚೆತ್ತುಕೊಳ್ಳಿ ಎಂದು ಹೇಳಿದರು.

ಸರ್ಕಾರದ ಒತ್ತಡಕ್ಕೆ ಮಣಿದು ಪೊಲೀಸ್ ಅಧಿಕಾರಿಗಳಿಗೆ ತಲೆದಂಡ 

18 ವರ್ಷದಿಂದ ಐಪಿಎಲ್ ನಡೆಯುತ್ತಿದೆ. ಪೊಲೀಸ್ ಅಧಿಕಾರಿಗಳು ಯಾವುದೇ ಅಹಿತಕರ ಘಟನೆಗೆ ಆಸ್ಪದ ಕೊಟ್ಟಿದೆ, ಬಹಳ ಚೆನ್ನಾಗಿ ನಡೆಸಿಕೊಂಡು ಬಂದ್ದಿದ್ದಾರೆ. ಆದರೆ ಇಲ್ಲಿ ಸರ್ಕಾರದ ಒತ್ತಡಕ್ಕೆ ಮಣಿದು ಪೊಲೀಸ್ ಅಧಿಕಾರಿಗಳನ್ನು ಸಂಧಿಗ್ದ ಪರಿಸ್ಥಿತಿಗೆ ದುಡಿದವರು ಯಾರು.? ಇದಕ್ಕೆ ರಾಜ್ಯದ ಮುಖ್ಯಮಂತ್ರಿಗಳೇ ಉತ್ತರ ನೀಡಬೇಕು ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.

-ಕೋತಿ ತಾನು ತಿಂದು ಮೇಕೆ ಮೂತಿಗೆ ಒರೆಸಿದಂತಿದೆ.!

ಗೃಹ ಸಚಿವ ಪರಮೇಶ್ವರ್ ಗೆ ಬೇರೆ ಇಲಾಖೆ ಕೊಡೋದು ಒಳ್ಳೇದು. ಈ ಅವಾಂತರಕ್ಕೆ ಕಾರಣವಾದ ರೀಲ್ಸ್ ಮಿನಿಸ್ಟರ್ ಡಿಕೆ ಶಿವಕುಮಾರ್ ನ ಮೊದಲು ಸಸ್ಪೆಂಡ್ ಮಾಡ್ಬೇಕು. ಪೊಲೀಸ್ ಅಧಿಕಾರಿಗಳನ್ನು ಬಲಿಪಶು ಮಾಡಿ “ಕೋತಿ ತಾನು ತಿಂದು ಮೇಕೆ ಮೂತಿಗೆ ಒರೆಸಿದಂತೆ” ಗಾದೆ ಇದೆ ಇದರಲ್ಲಿ ಕೋತಿ ಯಾರು.? ಮೇಕೆ ಯಾರು ಅಂತ ರಾಜ್ಯದ ಜನ ತೀರ್ಮಾನ ಮಾಡಬೇಕಿದೆ ಎಂದು ವ್ಯಂಗ್ಯ ವಾಡಿದರು.

ಈ ಸಾವಿನ ಘಟನೆ ಮಧ್ಯಾಹ್ನವೇ ನಡೆದಿದ್ದರೂ ಡಿಸಿಎಂ ಡಿ.ಕೆ ಶಿವಕುಮಾರ್ ಅವರು ನನಗೆ ಮಾಹಿತಿಯೇ ಇಲ್ಲ ಅಂದ್ರು, ಆ ಬಳಿಕ ಚಿನ್ನಸ್ವಾಮಿ ಸ್ಟೇಡಿಯಂಗೆ ಹೋಗಿ ಕಪ್ಪುಗೆ ಮುತ್ತು ಕೊಟ್ಟರು, ಇದು ಸರ್ಕಾರದ ವೈಫಲ್ಯ ಮೊದಲು ಪರಮೇಶ್ವರ್, ಡಿಸಿಎಂ ಅವರ ರಾಜೀನಾಮೆಯನ್ನು ಸಿಎಂ ಅವರು ಪಡೆಯಬೇಕು. ಇದು ಸರ್ಕಾರದ ವೈಫಲ್ಯ ಎಂದು ನಿಖಿಲ್ ಕುಮಾರಸ್ವಾಮಿ ಅವರು ಕಿಡಿಕಾರಿದ್ದಾರೆ.


Spread the love
Vijaya Sakshi
Vijaya Sakshi
Vijayasakshi is a Kannada Daily News Paper Publishing From Gadag. Get Latest Gadag District News Live Updates Online In Vijayasakshi.Com Vijayasakshi Kannada Daily Newspaper Provide News On Gadag District Including Karnataka, India News In Kannada. Contact-9448326533/9019256545 E-mail-vijayasakshidaily@gmail.com

LEAVE A REPLY

Please enter your comment!
Please enter your name here

E-Paper

E-paper

Must Read

spot_img
error: Content is protected !!