HomeGadag Newsಉತ್ತಮ ಸಂಸ್ಕಾರ ಜೀವನದ ಗುರಿಯಾಗಲಿ

ಉತ್ತಮ ಸಂಸ್ಕಾರ ಜೀವನದ ಗುರಿಯಾಗಲಿ

For Dai;y Updates Join Our whatsapp Group

Spread the love

ವಿಜಯಸಾಕ್ಷಿ ಸುದ್ದಿ, ನರೇಗಲ್ಲ: ನಿಮ್ಮ ಸುಂದರ ಭವಿಷ್ಯಕ್ಕಾಗಿ ನೀವು ಓದಬೇಕು, ಮೊಬೈಲ್ ನಿಷೇಧ ಮಾಡಬೇಕು ಮತ್ತು ಗುರು-ಹಿರಿಯರನ್ನು ಕಂಡರೆ ಬಾಗಿ ನಮಸ್ಕರಿಸುವಂತಹ ಸಂಸ್ಕಾರವನ್ನು ನೀವು ಬೆಳೆಸಿಕೊಳ್ಳಬೇಕು. ಇವುಗಳೇ ನಿಮ್ಮನ್ನು ಜೀವನದಲ್ಲಿ ಎತ್ತರಕ್ಕೇರಿಸುತ್ತವೆ ಎಂದು ಡಾ. ಕೃಷ್ಣ ಜಿ.ಕಾಳೆ ಹೇಳಿದರು.

ಪಟ್ಟಣದ ಹಿರೇಮಠದ ಸಭಾಭವನದಲ್ಲಿ ಬೀಚಿ ಬಳಗದವರು ಏರ್ಪಡಿಸಿದ್ದ ಪ್ರತಿಭಾ ಪುರಸ್ಕಾರವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಬೀಚಿ ಬಳಗದವರು ಎಸ್‌ಎಸ್‌ಎಲ್‌ಸಿ ಅಥವಾ ಪಿಯುಸಿ ವಿದ್ಯಾರ್ಥಿಗಳಿಗೇನಾದರೂ ವಿಶೇಷ ಕೋಚಿಂಗ್ ವ್ಯವಸ್ಥೆಯನ್ನು ಮಾಡಲು ಮುಂದಾದರೆ ಅದಕ್ಕೆ ಸಕಲ ರೀತಿಯಿಂದಲೂ ತಾವು ಸಹಾಯ-ಸಹಕಾರ ನೀಡುವುದಾಗಿ ಡಾ. ಕಾಳೆ ಹೇಳಿದರು.

ದೊಡ್ಡಯ್ಯ ಅರವಟಗಿಮಠ ಮಾತನಾಡಿ, ಇಂದು ಸನ್ಮಾನಗೊಂಡ ವಿದ್ಯಾರ್ಥಿಗಳು ತಮ್ಮ ಮುಂದಿನ ಜೀವನದ ಗುರಿಯನ್ನು ಇಂದೇ ನಿರ್ಧರಿಸಿಕೊಳ್ಳಬೇಕು. ಆ ಗುರಿಯನ್ನು ಸಾಧಿಸುವತ್ತ ಪ್ರಯತ್ನಪಡಬೇಕು. ನೀವು ಮನಸ್ಸು ಮಾಡಿದರೆ ಏನೆಲ್ಲವನ್ನೂ ಸಾಧಿಸಲು ಸಾಧ್ಯವಿದೆ. ನಿಮ್ಮ ಜೀವನ ಸುಖಮಯವಾಗಲಿ, ನಿಮ್ಮ ಭವಿಷ್ಯ ಉಜ್ವಲವಾಗಲಿ ಎಂದೇ ಬೀಚಿ ಬಳಗ ಇಂದು ನಿಮಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಿದೆ. ಇದಕ್ಕೊಂದು ಬೆಲೆ ಬರಬೇಕಾದರೆ ಉತ್ತಮ ಅಭ್ಯಾಸ ಮಾಡಿ ಉನ್ನತ ಸ್ಥಾನ ಗಳಿಸಬೇಕೆಂದರು.

ಡಾ. ಸಪ್ನಾ ಕಾಳೆ ಮಾತನಾಡಿ, ಬೀಚಿ ಬಳಗದ ಕಾರ್ಯಗಳನ್ನು ಶ್ಲಾಘಿಸಿದರು. ಸಮಾರಂಭದಲ್ಲಿ ಎಸ್‌ಎಸ್‌ಎಲ್‌ಸಿ ಮತ್ತು ಪಿಯುಸಿಯಲ್ಲಿ ಶೇ. 90 ಮತ್ತು ಅಧಿಕ ಅಂಕಗಳನ್ನು ಪಡೆದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ಸನ್ಮಾನ ಸ್ವೀಕರಿಸಿದವರ ಪರವಾಗಿ ಅನುಶ್ರೀ ಕಳಕಣ್ಣವರ, ಗ್ಯಾನ ಕಾಳೆ, ಕಾವ್ಯಾ ಕುಷ್ಟಗಿ, ಪಾಲಕರ ಪರವಾಗಿ ಸೀಮಾ ಕೊಂಡಿ, ಚನ್ನಬಸಪ್ಪ ಕುಷ್ಟಗಿ ಮತ್ತು ಸಂತೋಷ ಕಿರಟಗೇರಿ ಮಾತನಾಡಿದರು.

ಅಧ್ಯಕ್ಷತೆ ವಹಿಸಿದ್ದ ಬಳಗದ ಅಧ್ಯಕ್ಷ ಕೆ.ಎಸ್. ಕಳಕಣ್ಣವರ ಮಾತನಾಡಿ, ನರೇಗಲ್ಲ ಪಟ್ಟಣದಲ್ಲಿ ಬೀಚಿ ಬಳಗ ತನ್ನ ವಿಧಾಯಕ ಕಾರ್ಯಕ್ರಮಗಳ ಮೂಲಕ ಜನಮಾನಸವನ್ನು ಗೆದ್ದಿದೆ. ಇಂದು ಸನ್ಮಾನಗೊಂಡ ವಿದ್ಯಾರ್ಥಿಗಳು ಬೀಗದೆ ಬಾಗಿ ನಡೆದು ಜೀವನದಲ್ಲಿ ಯಶಸ್ಸು ಕಾಣಬೇಕೆಂದರು.

ವೇದಿಕೆಯ ಮೇಲೆ ಬಳಗದ ಸಂಚಾಲಕ ಈಶ್ವರ ಬೆಟಗೇರಿ ಉಪಸ್ಥಿತರಿದ್ದರು. ಸೀಮಾ ಕೊಂಡಿ ಪ್ರಾರ್ಥಿಸಿದರು. ಶಿಕ್ಷಕ ಸುರೇಶ ಹಳ್ಳಿಕೇರಿ ಸ್ವಾಗತಿಸಿದರು. ಮುಖ್ಯ ಶಿಕ್ಷಕ ಬಿ.ಬಿ. ಕುರಿ ನಿರೂಪಿಸಿದರು. ಅರುಣ ಕುಲಕರ್ಣಿ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಶಿಕ್ಷಕ ಬಿ.ಟಿ. ತಾಳಿ ವಂದಿಸಿದರು. ಕಾರ್ಯಕ್ರಮದಲ್ಲಿ ಪಟ್ಟಣದ ಗಣ್ಯರು, ಪಾಲಕರು ಉಪಸ್ಥಿತರಿದ್ದರು.

ಜೀವನದಲ್ಲಿ ಸೋಲು-ಗೆಲುವುಗಳು ಇದ್ದೇ ಇರುತ್ತವೆ. ಗೆದ್ದಾಗ ಬೀಗದೆ, ಸೋತಾಗ ಕುಗ್ಗದೆ ಅಥವಾ ಹೆದರಿಕೊಂಡು ಆತ್ಮಹತ್ಯೆ ಮಾಡಿಕೊಳ್ಳುವಂತಹ ಮನಸ್ಥಿತಿಯನ್ನು ನೀವು ಬೆಳೆಸಿಕೊಳ್ಳಬಾರದು. ನಿಮ್ಮಲ್ಲಿ ಮಾನಸಿಕ ಗಟ್ಟಿತನವನ್ನು ಬೆಳೆಸಿಕೊಂಡು ಜೀವನದಲ್ಲಿ ಏನೇ ಬರಲಿ, ಅದನ್ನು ಧೃಢ ಮನಸ್ಸಿನಿಂದ ಎದುರಿಸಬೇಕು. ಅಂದಾಗ ಜೀವನದಲ್ಲಿ ಅತ್ಯಂತ ಎತ್ತರದ ಸ್ಥಾನ ತಲುಪಲು ಸಾಧ್ಯ ಎಂದು ಡಾ. ಕೃಷ್ಣ ಜಿ.ಕಾಳೆ ಕಿವಿಮಾತು ಹೇಳಿದರು.


Spread the love
Vijaya Sakshi
Vijaya Sakshi
Vijayasakshi is a Kannada Daily News Paper Publishing From Gadag. Get Latest Gadag District News Live Updates Online In Vijayasakshi.Com Vijayasakshi Kannada Daily Newspaper Provide News On Gadag District Including Karnataka, India News In Kannada. Contact-9448326533/9019256545 E-mail-vijayasakshidaily@gmail.com

LEAVE A REPLY

Please enter your comment!
Please enter your name here

E-Paper

E-paper

Must Read

spot_img
error: Content is protected !!