ವಿಜಯಸಾಕ್ಷಿ ಸುದ್ದಿ, ಮುಳಗುಂದ: ಹೆತ್ತು ಹೊತ್ತು, ಸಾಕಿ ಸಲುಹಿದ ತಂದೆ, ತಾಯಿ ಹಾಗೂ ಸಮಾಜದ ಸೇವೆಯನ್ನು ನಿತ್ಯವೂ ಮಾಡಬೇಕು ಎಂದು ಶರಣಪ್ಪ ಬಾಳಿಕಾಯಿ ಹೇಳಿದರು.
ಅವರು ಪಟ್ಟಣದ ಮೇಲ್ಮಠದಲ್ಲಿ ಅವ್ವ ಸೇವಾ ಪ್ರತಿಷ್ಠಾನದಿಂದ ಮಠದ ಆವರಣ ಸ್ವಚ್ಛತಾ ಕಾರ್ಯದಲ್ಲಿ ಭಾಗವಹಿಸಿ ಮಾತನಾಡಿ, ಭಾರತಿಯ ಸಂಸ್ಕೃತಿಯಲ್ಲಿ ಹೆತ್ತ ತಂದೆ-ತಾಯಿಗಳಿಗೆ ಅಗ್ರವಾದ ಸ್ಥಾನಮಾನವಿದೆ. ತಾಯಿ ಜನ್ಮ ನೀಡಿದರೆ ತಂದೆ ಜೀವನ ನೀಡುವರು. ಸಮಾಜ ನಮ್ಮ ಬದುಕಿಗೆ ಸಹಾಯ ಮಾಡುತ್ತದೆ. ಸಮಾಜದ ಋಣ ತಿರಿಸಲೆಂದೇ ಶಿಕ್ಷಕ ಮಂಜುನಾಥ ಮಟ್ಟಿ ಅವರು ತಮ್ಮ ತಾಯಿಯವರ ಸ್ಮರಣಾರ್ಥ ತಂದೆ-ತಾಯಿ ಹಾಗೂ ಸಮಾಜದ ಋಣ ತಿರಿಸುವ ಕಾರ್ಯ ಮಾಡುತ್ತಿರುವುದು ಶ್ಲಾಘನೀಯ ಎಂದರು.
ಈ ಸಂದರ್ಭದಲ್ಲಿ ಮಾಹಾಂತಯ್ಯ ನಪೂರಿಮಠ, ಶಿವಾನಂದ ಆಪ್ತಗೇರಿ, ಅಶೋಕ ಗಡಾದ, ಜಗದೀಶ ಕೊಲ್ಲಾರಿ, ಪ್ರಭು ಬಳಿಗೇರ, ವಿ.ಡಿ. ಸಿದ್ದನಗೌಡರ, ಮಾಹಾಂತೇಶ ಕಣವಿ ಇದ್ದರು.



