ಶಿವರಾಜ್‌ ಕುಮಾರ್ ಸಿನಿ ಜರ್ನಿಗೆ 40 ವರ್ಷ: ಕನ್ನಡದಲ್ಲೇ ಶುಭ ಹಾರೈಸಿದ ಕಮಲ್ ಹಾಸನ್

0
Spread the love

ಹ್ಯಾಟ್ರಿಕ್ ಹೀರೋ ಶಿವರಾಜ್‌ ಕುಮಾರ್‌ ಚಿತ್ರರಂಗಕ್ಕೆ ಎಂಟ್ರಿಕೊಟ್ಟು 40 ವರ್ಷ ಕಳೆದಿದೆ, ಶ್ರೀಶ್ರೀನಿವಾಸ ಕಲ್ಯಾಣ ಸಿನಿಮಾದ ಮೂಲಕ ಬಾಲನಟನಾಗಿ ಚಿತ್ರರಂಗಕ್ಕೆ ಎಂಟ್ರಿಕೊಟ್ಟ ಶಿವರಾಜ್‌ ಕುಮಾರ್‌ ಆನಂದ್‌ ಸಿನಿಮಾದ ಮೂಲಕ ನಾಯಕನಾಗಿ ಸೈ ಎನಿಸಿಕೊಂಡರು.

Advertisement

ವಯಸ್ಸು 60 ಆದ್ರೂ ಸದಾ ಚಿರ ಯುವಕರು ನಾಚುವಂತಿರೋ ಶಿವರಾಜ್‌ ಕುಮಾರ್‌ ಬಯೋಪಿಕ್ ರಿಲೀಸ್ ಗಾಗಿ ಸದ್ಯ ಅಮೆರಿಕಾಗೆ ತೆರಳಿದ್ದಾರೆ. ಶಿವರಾಜ್‌ ಕುಮಾರ್‌ ಅವರ ಜೀವನ ಚರಿತ್ರೆಯ ಶ್ರೀಮುತ್ತು ಪುಸಕ್ತ ಅಮೆರಿಕಾದ ಸ್ಯಾನ್ ಫ್ರಾನ್ಸಿಸ್ಕೋನಲ್ಲಿ ಶಿವಣ್ಣ ದಂಪತಿ ಸಮ್ಮುಖದಲ್ಲಿ ಪುಸ್ತಕ ರಿಲೀಸ್ ಆಗಿದೆ.

ಶಿವರಾಜ್‌ ಕುಮಾರ್‌ ಅವರ 40 ವರ್ಷದ ಸಿನಿ ಜರ್ನಿಗೆ ನಟ ಕಮಲ್‌ ಹಾಸನ್‌ ಕನ್ನಡದಲ್ಲೇ ಶುಭ ಹಾರೈಸಿದ್ದಾರೆ. ಶಿವಣ್ಣ ಚೆನ್ನಾಗಿದ್ದೀರಾ..? ಎಂದು ಕನ್ನಡದಲ್ಲೇ ಕೇಳಿರುವ ನಟ ಕಮಲ್‌ ಹಾಸನ್‌ ʻನಿಮ್ಮ 50 ವರ್ಷದ ವಾರ್ಷಿಕೋತ್ಸವಕ್ಕೆ ಇಬ್ಬರೂ ಕೂತು ಮತ್ತೆ ಮಾತನಾಡೋಣʼ ಎಂದಿದ್ದಾರೆ. ಮುಂದುವರೆದು ಯಾವಾಗಲೂ ಹೀಗೆ ನಗುತಲಿರಿ. ಇನ್ನೂ ಹೆಚ್ಚೆಚ್ಚು ಸಿನಿಮಾಗಳನ್ನು ಮಾಡಿ. ನಮ್ಮ ಪ್ರೀತಿ ಹೀಗೆ ಮುಂದುವರೆಯಲಿದೆ ಎಂದು ಕಮಲ್‌ ಹಾಸನ್‌ ಶುಭ ಹಾರೈಸಿದ್ದಾರೆ.

ಜೊತೆಗೆ ಶಿವಣ್ಣನಿಗೆ ತೆಲುಗು ಸ್ಟಾರ್​ ನಟರಾದ ಅಕ್ಕಿನೇನಿ ನಾಗಾರ್ಜುನ.. ವಿಜಯ್​ ದೇವರಕೊಂಡ ಶುಭ ಹಾರೈಸಿದ್ದಾರೆ. 40 ವರ್ಷ ಪೂರೈಸೋದು ಸುಲಭದ ಮಾತಲ್ಲ ಅಂತಾ ಎಂದು ಹೊಗಳಿದ್ದಾರೆ.


Spread the love

LEAVE A REPLY

Please enter your comment!
Please enter your name here