ಗುವಾಹಟಿ: 45 ಕೋಟಿ ಮೌಲ್ಯದ ಮಾದಕ ವಸ್ತು ಸೀಜ್ ಮಾಡಿ ನಾಲ್ವರನ್ನು ಅರೆಸ್ಟ್ ಮಾಡುವಲ್ಲಿ ಅಸ್ಸಾಂ ಪೊಲೀಸರು ಯಶಸ್ವಿಯಾಗಿದ್ದಾರೆ. ಈ ಕುರಿತು ಅಸ್ಸಾಂ ಸಿಎಂ ಹಿಮಂತ ಬಿಸ್ವಾ ಶರ್ಮಾ X ಮೂಲಕ ಸ್ಪಷ್ಟನೆ ಕೊಟ್ಟಿದ್ದಾರೆ.
Advertisement
ಖಚಿತ ಮಾಹಿತಿಯ ಮೇರೆಗೆ ಕಚಾರ್ ಜಿಲ್ಲೆಯ ಎರಡು ಕಡೆ ದಾಳಿ ನಡೆಸಿ 45 ಕೋಟಿ ಮೌಲ್ಯದ 1.5 ಲಕ್ಷ ಯಾಬಾ ಮಾತ್ರೆಗಳನ್ನು ವಶಪಡಿಸಿಕೊಳ್ಳಲಾಗಿದೆ. ಅಲ್ಲದೇ ಮಾದಕ ವಸ್ತು ಮಾರಾಟ ಮಾಡುತ್ತಿದ್ದ ನಾಲ್ವರನ್ನು ಬಂಧಿಸಲಾಗಿದೆ ಎಂದು ಪೊಲೀಸರ ಕಾರ್ಯಾಚರಣೆಯನ್ನು ಶ್ಲಾಘಿಸಿದ್ದಾರೆ.
ಮಾದಕವಸ್ತು ವ್ಯಾಪಾರವು ಯುವಜನರು ಮತ್ತು ಸಮುದಾಯದ ಸುರಕ್ಷತೆಗೆ ಗಂಭೀರ ಪರಿಣಾಮ ಬೀರುತ್ತದೆ. ಈ ಹಿನ್ನೆಲೆ ನಮ್ಮ ಯುವಕರನ್ನು ರಕ್ಷಿಸುವಲ್ಲಿ ಅಸ್ಸಾಂ ಪೊಲೀಸರು ದೃಢವಾಗಿ ನಿಂತಿದ್ದಾರೆ. ಆರೋಪಿಗಳ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಹಿಮಂತ ಬಿಸ್ವಾ ಶರ್ಮಾ ಹೇಳಿದ್ದಾರೆ.