ವಿಜಯಸಾಕ್ಷಿ ಸುದ್ದಿ, ಹುಬ್ಬಳ್ಳಿ/ಗದಗ
Advertisement
ಸರ್ಕಾರ ಕೋವಿಡ್ ಲಾಕ್ಡೌನ್ನಿಂದ ಸಂಕಷ್ಟಕ್ಕೀಡಾದ ವಿವಿಧ ವರ್ಗಗಳಿಗೆ ವಿಶೇಷ ಆರ್ಥಿಕ ಪ್ಯಾಕೇಜ್ ಘೋಷಿಸಿದೆ. ಕಾರ್ಮಿಕ ಇಲಾಖೆಯಲ್ಲಿ ನೋಂದಾಯಿತವಾದ ಕಟ್ಟಡ ಕಾರ್ಮಿಕರಿಗೆ 3000 ಹಾಗೂ ಅಸಂಘಟಿತ ಕಾರ್ಮಿಕರಿಗೆ 2000 ರೂಪಾಯಿಗಳನ್ನು ಸರ್ಕಾರದ ನಿರ್ದೇಶನದಂತೆ ನೇರವಾಗಿ ಖಾತೆ ಜಮಾ ಮಾಡಲಾಗುವುದು.
ನೊಂದಾಯಿತ ಕಾರ್ಮಿಕರು ಯಾವುದೇ ಅರ್ಜಿಯನ್ನು ಸಲ್ಲಿಸುವ ಅವಶ್ಯಕತೆಯಿಲ್ಲ. ಕಾರ್ಮಿಕರು ಮಧ್ಯವರ್ತಿಗಳ ಬಳಿ ಅರ್ಜಿಸಲ್ಲಿಸಲು ಹೋಗಬಾರದು ಎಂದು ಕಾರ್ಮಿಕ ಅಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.