ಅನಾರೋಗ್ಯದಿಂದ ಬಳಲುತ್ತಿದ್ದ ಟಾಲಿವುಡ್ ನ ಖ್ಯಾತ ನಿರ್ದೇಶಕ ಎಎಸ್ ರವಿಕುಮಾರ್ ವಿಧಿವಶರಾಗಿದ್ದಾರೆ. ರವಿಕುಮಾರ್ ಅವರು ಕಳೆದ ಕೆಲ ತಿಂಗಳಿನಿಂದಲೂ ಅನಾರೋಗ್ಯದಿಂದ ಬಳಲುತ್ತಿದ್ದರು, ನಿನ್ನೆ ತಡರಾತ್ರಿ ಹೃದಯಾಘಾತದಿಂದ ನಿಧನ ಹೊಂದಿದ್ದಾರೆ ಎಂದು ಕುಟುಂಬದ ಮೂಲಗಳು ತಿಳಿಸಿದೆ.
ಎಎಸ್ ರವಿಕುಮಾರ್ ಅವರು ಟಾಲಿವುಡ್ನಲ್ಲಿ ಸ್ಟಾರ್ ನಟರ ಜೊತೆಗೆ ಕೆಲಸ ಮಾಡಿದ್ದರು. ಸಾಕಷ್ಟು ಸೂಪರ್ ಹಿಟ್ ಸಿನಿಮಾಗಳನ್ನು ನೀಡಿರುವ ನಿರ್ದೇಶಕ ಎಎಸ್ ರವಿಕುಮಾರ್ ನಿಧನರಾಗಿದ್ದಾರೆ. ಇವರಿಗೆ ಸುಮಾರು 70 ವರ್ಷ ವಯಸ್ಸಾಗಿತ್ತು. ರವಿಕುಮಾರ್ ಅವರಿಗೆ ಪತ್ನಿ ಮತ್ತು ಮಕ್ಕಳಿದ್ದರೂ ಸಹ ಕೆಲ ವರ್ಷಗಳಿಂದ ಅವರು ಒಬ್ಬರೇ ಜೀವನ ಸಾಗಿಸುತ್ತಿದ್ದರು ಎಂದು ತಿಳಿದು ಬಂದಿದೆ.
ಎಎಸ್ ರವಿಕುಮಾರ್ ಅವರು, ನಂದಮೂರಿ ಬಾಲಕೃಷ್ಣ, ಗೋಪಿಚಂದ್, ನಿತಿನ್ ಇನ್ನೂ ಕೆಲವು ತೆಲುಗಿನ ಸ್ಟಾರ್ ನಟರೊಂದಿಗೆ ಕೆಲಸ ಮಾಡಿದ್ದಾರೆ. ವಿಲನ್ ಪಾತ್ರಗಳಲ್ಲಿ ನಟಿಸುತ್ತಿದ್ದ ಗೋಪಿಚಂದ್ ಅವರನ್ನು ‘ಯಜ್ಞಂ’ ಸಿನಿಮಾ ಮೂಲಕ ನಾಯಕ ನಟನನ್ನಾಗಿ ಮಾಡಿದ್ದು ಎಎಸ್ ರವಿಕುಮಾರ್. ಆ ನಂತರ ಮೆಗಾಸ್ಟಾರ್ ಕುಟುಂಬದ ಸಾಯಿ ದುರ್ಗ ತೇಜ್ ಅವರ ಮೊದಲ ಸಿನಿಮಾ ‘ಪಿಲ್ಲಾ ನೂವು ಲೇನಿ ಜೀವತಂ’ ಅನ್ನು ರವಿಕುಮಾರ್ ನಿರ್ದೇಶನ ಮಾಡಿದ್ದರು.