HomeGadag Newsಸಂಪರ್ಕ ರಸ್ತೆಗೆ ಶೀಘ್ರವೇ ಜಾಗ ಖರೀದಿ

ಸಂಪರ್ಕ ರಸ್ತೆಗೆ ಶೀಘ್ರವೇ ಜಾಗ ಖರೀದಿ

For Dai;y Updates Join Our whatsapp Group

Spread the love

ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ: ಪಟ್ಟಣದಲ್ಲಿ ನಿವೇಶನ ರಹಿತರಿಗಾಗಿ ಗುರುತಿಸಲಾದ ಜಮೀನಿಗೆ ಸಂಪರ್ಕ ಕಲ್ಪಿಸುವ ರಸ್ತೆಗೆ ಜಾಗೆಯನ್ನು ಶೀಘ್ರದಲ್ಲಿ ಖರೀದಿಸಿ, ಆದಷ್ಟು ಶೀಘ್ರ ನಿವೇಶನ ಹಂಚಿಕೆಯನ್ನು ಮಾಡಲಾಗುವದು ಎಂದು ಪುರಸಭೆ ಹಿರಿಯ ಸದಸ್ಯ ರಾಜೀವ ಕುಂಬಿ ತಿಳಿಸಿದ್ದಾರೆ.

ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, ಪಟ್ಟಣದ ತಮ್ಮಾ ತಿಮ್ಮಿ ಗುಡ್ಡದಲ್ಲಿ ಖರೀದಿಸಲಾದ 16 ಎಕರೆ 16 ಗುಂಟೆ ಜಮೀನಿಗೆ ಸಂಪರ್ಕ ರಸ್ತೆಗೆ ಬೇಕಾದ 9 ಗುಂಟೆ ಜಾಗವನ್ನು ಆದಷ್ಟು ಶೀಘ್ರ ಪುರಸಭೆಯಿಂದ ಖರೀದಿ ಮಾಡಲಾಗುವುದು. ತಮ್ಮಾ ತಿಮ್ಮಿ ಜಮೀನಿಗೆ ಸಂಪರ್ಕಕ್ಕೆ ಅವಶ್ಯವಿರುವ ರಸ್ತೆಗೆ 9 ಗುಂಟೆ ಜಾಗವನ್ನು ಜಮೀನು ಖರೀದಿ ವೇಳೆ ಹತ್ತಿರದ ಜಮೀನಿನವರು ಜಾಗವನ್ನು ಕೊಡುತ್ತೇವೆ ಅಂದ ಮೇಲೆ ಖರೀದಿ ಮಾಡಿಕೊಳ್ಳಲಾಗಿತ್ತು. ಅನಿವಾರ್ಯ ಕಾರಣಗಳಿಂದ, ಕೆಲ ಕಾನೂನು ತೊಡಕುಗಳಿಂದ, 9 ಗುಂಟೆ ಜಾಗ ಖರೀದಿ ಆಗಿರಲಿಲ್ಲ. ಇದೀಗ ಈ 9 ಗುಂಟೆ ಜಮೀನು ಖರೀದಿಸಿ ಫಲಾನುಭವಿಗಳಿಗೆ ನಿವೇಶನಕ್ಕೆ ಸಂಪರ್ಕ ಕಲ್ಪಿಸಲಾಗುವದು ಎಂದು ಹೇಳಿದ್ದಾರೆ.


Spread the love
Vijaya Sakshi
Vijaya Sakshi
Vijayasakshi is a Kannada Daily News Paper Publishing From Gadag. Get Latest Gadag District News Live Updates Online In Vijayasakshi.Com Vijayasakshi Kannada Daily Newspaper Provide News On Gadag District Including Karnataka, India News In Kannada. Contact-9448326533/9019256545 E-mail-vijayasakshidaily@gmail.com

LEAVE A REPLY

Please enter your comment!
Please enter your name here

E-Paper

E-paper

Must Read

spot_img
error: Content is protected !!