ವಿಜಯಸಾಕ್ಷಿ ಸುದ್ದಿ, ಮಂಗಳೂರು
ಜಿಲ್ಲೆಯಲ್ಲಿನ ಒಂದೇ ಆಶ್ರಮದ 210 ಜನರಲ್ಲಿ ಸೋಂಕು ಕಾಣಿಸಿಕೊಂಡಿದ್ದು, ಆತಂಕ ಹೆಚ್ಚಾಗುತ್ತಿದೆ. ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ನೆರಿಯ ಗ್ರಾಪಂ ವ್ಯಾಪ್ತಿಯ ಗಂಡಿಬಾಗಿಲು ಪ್ರದೇಶದಲ್ಲಿರುವ ಸಿಯೋನ್ ಎಂಬ ಅನಾಥಾಶ್ರಮದಲ್ಲಿನ ಬರೋಬ್ಬರಿ 210 ಜನರಿಗೆ ಸೋಂಕು ಆವರಿಸಿದೆ.
ಈ ಆಶ್ರಮದಲ್ಲಿ 270 ಜನರಿದ್ದಾರೆ. ಆದರೆ, ಈ ಪೈಕಿ ಈಗಾಗಲೇ 210 ಜನರಲ್ಲಿ ಸೋಂಕು ಕಾಣಿಸಿಕೊಂಡಿದೆ. ಈ ಆಶ್ರಮದಲ್ಲಿ ಆರೋಗ್ಯ ಇಲಾಖೆ ಅಧಿಕಾರಿಗಳು ಸಾಮೂಹಿಕ ಪರೀಕ್ಷೆ ನಡೆಸಿದ್ದರು. ಈ ಸಂದರ್ಭದಲ್ಲಿ ಆಶ್ರಮದಲ್ಲಿನ ಬಹುತೇಕರು ಸೋಂಕಿಗೆ ಒಳಗಾಗಿರುವುದು ಬೆಳಕಿಗೆ ಬಂದಿದೆ.
ಕೆಲವು ದಿನಗಳ ಹಿಂದೆ ಈ ಆಶ್ರಮದ ಕೆಲವು ವ್ಯಕ್ತಿಗಳಲ್ಲಿ ಸೋಂಕಿನ ಲಕ್ಷಣಗಳು ಕಂಡು ಬಂದಿದ್ದವು. ಹೀಗಾಗಿ ಆರೋಗ್ಯ ಅಧಿಕಾರಿಗಳು ಆಶ್ರಮದಲ್ಲಿನ ಎಲ್ಲರನ್ನೂ ಪರೀಕ್ಷೆಗೆ ಒಳಪಡಿಸಿದ್ದರು. ಆದರೆ, ಬಹುತೇಕರಲ್ಲಿ ಸೋಂಕು ಇರುವುದು ಖಚಿತವಾಗಿದೆ.
ಈ ಆಶ್ರಮದಲ್ಲಿ ವೃದ್ಧರು ಮತ್ತು ಮನೋರೋಗಿಗಳೇ ಇದ್ದಾರೆ. ಸದ್ಯ ಅವರಿಗೆಲ್ಲ ಸೋಂಕು ಆವರಿಸಿದೆ. ಹೀಗಾಗಿ ಬೆಳ್ತಂಗಡಿ ಶಾಸಕ ಹರೀಶ್ ಅವರು ಇವರನ್ನೆಲ್ಲ ಕೋವಿಡ್ ಕೇರ್ ಸೆಂಟರ್ ಗೆ ದಾಖಲಿಸಲು ಮುಂದಾಗಿದ್ದಾರೆ. ಹೀಗಾಗಿ 10ಕ್ಕೂ ಹೆಚ್ಚು ಆಂಬುಲೆನ್ಸ್ ಗಳನ್ನು ಬಳಕೆ ಮಾಡಿಕೊಳ್ಳಲಾಗುತ್ತಿದೆ. ಈ ಸೋಂಕಿತರು ಸದ್ಯ ಧರ್ಮಸ್ಥಳದ ರಜತಾದ್ರಿ ವಸತಿ ಗೃಹಕ್ಕೆ ಸ್ಥಳಾಂತರವಾಗಲಿದ್ದಾರೆ.

