ಬಸ್ ನಿಲ್ಲಿಸದ್ದಕ್ಕೆ ಬಿಎಂಟಿಸಿ ಚಾಲಕನಿಗೆ ಚಪ್ಪಲಿಯಿಂದ ಹಲ್ಲೆ ನಡೆಸಿದ ಮಹಿಳೆ..!

0
Spread the love

ಬೆಂಗಳೂರು: ಬಸ್ ನಿಲ್ಲಿಸದ್ದಕ್ಕೆ ಬಿಎಂಟಿಸಿ ಚಾಲಕನಿಗೆ ಮಹಿಳಾ ಪ್ರಯಾಣಿಕರೊಬ್ಬರು ಚಪ್ಪಲಿಯಿಂದ ಹಲ್ಲೆ ನಡೆಸಿದ ಘಟನೆ ಸರ್ಜಾಪುರ ರಸ್ತೆಯ ಕೈಕೊಂಡರಹಳ್ಳಿಯಲ್ಲಿ ನಡೆದಿದೆ. ಟಿನ್ ಫ್ಯಾಕ್ಟರಿಯಿಂದ ಎಲೆಕ್ಟ್ರಾನಿಕ್ ಸಿಟಿಗೆ ಸಂಚರಿಸುತ್ತಿದ್ದ ಬಿಎಂಟಿಸಿ ಬಸ್‌ನ ಚಾಲಕ 42 ವರ್ಷದ ಅತಹರ್ ಹುಸೇನ್ ಮೇಲೆ ಕಾವ್ಯ ಎಂಬ 30 ವರ್ಷದ ಸಾಫ್ಟ್‌ವೇರ್ ಇಂಜಿನಿಯರ್ ಹಲ್ಲೆ ನಡೆಸಿದ್ದಾರೆ ಎನ್ನಲಾಗಿದೆ.

Advertisement

ಕೈಕೊಂಡರಹಳ್ಳಿ ಬಸ್‌ನಿಲ್ದಾಣದಲ್ಲಿ ಟಿಕೆಟ್ ತೆಗೆದುಕೊಂಡ ಕಾವ್ಯ, ತನ್ನ ಕಚೇರಿಯ ಮುಂದೆ ಬಸ್ ನಿಲ್ಲಿಸುವಂತೆ ಚಾಲಕನಿಗೆ ಒತ್ತಾಯಿಸಿದ್ದಾಳೆ. ಆದರೆ, ಸಂಚಾರ ದಟ್ಟಣೆ ಮತ್ತು ನಿಯಮಗಳ ಕಾರಣದಿಂದ ಅತಹರ್ ಅವರು ಹೇಳಿದಂತೆ ನಿಲ್ಲಿಸಿಲ್ಲ. ನಂತರ  ಆ ಮಹಿಳೆ ಹೊಟ್ಟೆನೋವಿನಿಂದ ಕಿರುಚಿಕೊಂಡು ಬಸ್ ನಿಲ್ಲಿಸುವಂತೆ ಒತ್ತಾಯಿಸಿದ್ದಾಳೆ.

ಇದಕ್ಕೆ ಸ್ಪಂದಿಸಿದ ಚಾಲಕ, ಬಲಕ್ಕೆ ತಿರುವು ತೆಗೆದುಕೊಂಡು ಬಸ್‌ನಿಲ್ಲಿಸಿದ್ದಾರೆ. ಈ ವೇಳೆ ಕಾವ್ಯ ತನ್ನ ಚಪ್ಪಲಿಯನ್ನು ತೆಗೆದುಕೊಂಡು ಅತಹರ್ ಮೇಲೆ ಹಲ್ಲೆ ನಡೆಸಿದ್ದಾಳೆ ಎಂಬ ಆರೋಪ ಕೇಳಿಬಂದಿದೆ. ಈ ಘಟನೆಯಿಂದ ಆಘಾತಗೊಂಡ ಚಾಲಕ, ಬೆಳ್ಳಂದೂರು ಪೊಲೀಸ್ ಠಾಣೆಯಲ್ಲಿ ಕಾವ್ಯ ವಿರುದ್ಧ ದೂರು ದಾಖಲಿಸಿದ್ದಾರೆ. ಭಾರತೀಯ ದಂಡ ಸಂಹಿತೆಯ ಸೆಕ್ಷನ್ 121, 131, 132 ಮತ್ತು 352ರ ಅಡಿಯಲ್ಲಿ ಪ್ರಕರಣ ದಾಖಲಾಗಿದೆ.


Spread the love

LEAVE A REPLY

Please enter your comment!
Please enter your name here