HomeGadag Newsನನ್ನ ಸಾವು ಬಯಸುವವರಿಗೆ ನನ್ನ ಆಯುಷ್ಯ, ಸರ್ವಸ್ವ ಸಿಗಲಿ: ಅನಿಲ ಮೆಣಸಿನಕಾಯಿ

ನನ್ನ ಸಾವು ಬಯಸುವವರಿಗೆ ನನ್ನ ಆಯುಷ್ಯ, ಸರ್ವಸ್ವ ಸಿಗಲಿ: ಅನಿಲ ಮೆಣಸಿನಕಾಯಿ

For Dai;y Updates Join Our whatsapp Group

Spread the love

ವಿಜಯಸಾಕ್ಷಿ ಸುದ್ದಿ, ಗದಗ

ಸಾಮಾಜಿಕ ಜಾಲತಾಣಗಳಲ್ಲಿ ತಮ್ಮ ವಿರುದ್ಧ ಹರಿದಾಡುತ್ತಿರುವ ಟೀಕೆಗಳಿಗೆ ಬಿಜೆಪಿ ಯುವ ಮುಖಂಡ ಅನಿಲ ಮೆಣಸಿನಕಾಯಿ ತಾಳ್ಮೆಯಿಂದಲೆ ತಿರುಗೇಟು ನೀಡಿದ್ದಾರೆ. ಈ ಕುರಿತು ಗದಗ ಜನತೆಗೆ ಬಹಿರಂಗ ಪತ್ರ ಬರೆದಿದ್ದು, ಪತ್ರದ ಪೂರ್ಣ ವಿವರ ಇಲ್ಲಿದೆ.

ಆತ್ಮೀಯ ಬಂಧು ಬಾಂಧವರೆ, ನನ್ನ ಅನಾರೋಗ್ಯದ ಕಾರಣವನ್ನು ಮುಂದಿಟ್ಟು, ಸ್ವಹಿತಾಸಕ್ತಿ ಮತ್ತು ಲಾಭಕ್ಕಾಗಿ ಈ ಸಮಯನ್ನೇ ದುರ್ಬಳಕೆ ಮಾಡಿಕೊಳ್ಳುತ್ತಿರುವ ಮನಸ್ಥಿತಿಗಳು ಬೇರೂರುತ್ತಿವೆ. ನನ್ನ ಸಾವನ್ನು ಬಯಸುತ್ತಿರುವ ಅಂತವರಿಗೆ ನನ್ನ ಆಯಸ್ಸು ಮತ್ತು ಸರ್ವಸ್ವವನ್ನೂ ನೀಡಲಿ ಎಂದು ಪುಟ್ಟರಾಜಕವಿ ಗವಾಯಿಗಳು ಹಾಗೂ ತೋಂಟದಾರ್ಯ ಶ್ರೀಗಳಿಗೆ ನಮಸ್ಕರಿಸಿ ಬೇಡಿಕೊಳ್ಳುತ್ತೇನೆ. ಸಮಾಜಿಕ ಜಾಲತಾಣಗಳಲ್ಲಿ ನನ್ನ ಬಗ್ಗೆ ಆಧಾರ ರಹಿತ ಮಾಹಿತಿ ಹರಿದಾಡುತ್ತಿರುವುದು ನನ್ನ ಗಮನಕ್ಕೆ ಬಂದಿದೆ. ಕೊರೊನಾ ಸೋಂಕಿಗೆ ಒಳಗಾಗಿರುವ ಚಿಕಿತ್ಸೆ ಪಡೆಯುತ್ತಿದ್ದೇನೆ.

ರಾಜಕೀಯ ಹೊರತಾಗಿಯೂ ನನ್ನನ್ನು ನೀವು ಸ್ವೀಕರಿಸುತ್ತಿರಿ. ಮೊದಲ ಕೊರೊನಾ ಅಲೆಯಲ್ಲಿ ‘ಮನು ಕುಲಕ್ಕಾಗಿ ಭಿಕ್ಷೆ’ ಹೊರಟ ಸಂದರ್ಭದಲ್ಲಿ ಮನುಕುಲದ ಆಸರೆಯಾಗಿ ಸಾವಿರಾರು ಜನರು, ರೈತರು ಬೆಂಬಲ ನೀಡಿದ್ದು, ಅಚ್ಚಳಿಯದೆ ಉಳಿದಿದೆ. ನಿಮ್ಮ ಬೆಂಬಲದಿಂದ ಬಡ, ನಿರ್ಗತಿಕರಿಗೆ ಕಳೆದ ಬಾರಿ 15000 ಕಿಟ್ ವಿತರಣೆ ಮಾಡಿದ್ದೇವೆ. ಎರಡನೇ ಕೊರೊನಾ ಅಲೆಯಲ್ಲಿ ಎರೆಡು ಬಾರಿ ಕೊರೊನಾ ಸೋಂಕಿಗೆ ಒಳಪಟ್ಟು ಆರೋಗ್ಯದಲ್ಲಿ ತೀವ್ರ ಏರುಪೇರಾಗಿತ್ತು. ನಿಮ್ಮೆಲ್ಲರ ಆಶೀರ್ವಾದ ಮತ್ತು ಹಾರೈಕೆಯಿಂದ ಸುದಾರಿಸಿಕೊಳ್ಳುತ್ತಿದ್ದೆನೆ.

ಸಂಕಷ್ಟದ ಸ್ಥಿತಿಯಲ್ಲಿ ನನ್ನ ಬೆಂಬಲಕ್ಕೆ ನಿಂತಿದ್ದಿರಿ. ಗುಣಮುಖನಾಗಿ ಬಂದು ನಿಮ್ನ ಸೇವೆಗೆ ಅಣಿಯಾಗುವ ಹಂಬಲ ಇನ್ನೂ ಕೈಬಿಟ್ಟಿಲ್ಲ. ದ್ವೇಷಿಗಳನ್ನು ಹಿತೈಷಿಗಳೆಂದು ನಂಬಿ ಬದುಕುವ ಹಂಬಲ ನನ್ನದು.

ಇಂತಿ ನಿಮ್ಮ

  • ಅನಿಲ ಮೆಣಸಿನಕಾಯಿ

Spread the love
Vijaya Sakshi
Vijaya Sakshi
Vijayasakshi is a Kannada Daily News Paper Publishing From Gadag. Get Latest Gadag District News Live Updates Online In Vijayasakshi.Com Vijayasakshi Kannada Daily Newspaper Provide News On Gadag District Including Karnataka, India News In Kannada. Contact-9448326533/9019256545 E-mail-vijayasakshidaily@gmail.com

LEAVE A REPLY

Please enter your comment!
Please enter your name here

E-Paper

E-paper

Must Read

spot_img
error: Content is protected !!