ಮನೋರಮಾ ಕಾಲೇಜಿಗೆ ಉತ್ತಮ ಫಲಿತಾಂಶ

0
Spread the love

ವಿಜಯಸಾಕ್ಷಿ ಸುದ್ದಿ, ಗದಗ: ಇಲ್ಲಿನ ಮನೋರಮಾ ಮಹಾವಿದ್ಯಾಲಯದ ಶೈಕ್ಷಣಿಕ ಸಾಲಿನ ಬಿಕಾಂ ಕೋರ್ಸಿನ 5ನೇ ಸೆಮಿಸ್ಟರ್ ಪರೀಕ್ಷೆಯಲ್ಲಿ ವಿದ್ಯಾರ್ಥಿಗಳು ಉತ್ತಮ ಫಲಿತಾಂಶ ಸಾಧಿಸಿದ್ದಾರೆ.

Advertisement

ವಿದ್ಯಾರ್ಥಿಗಳಾದ ತೌಸಿಫ ಮುಲ್ಲಾ ಶೇ. 91.57 ಅಂಕ ಪಡೆದು ಪ್ರಥಮ ಹಾಗೂ ಕಾಸ್ಟ್ ಅಕೌಂಟಿಂಗ್ ವಿಷಯದಲ್ಲಿ 100ಕ್ಕೆ 100 ಅಂಕ ಪಡೆದಿದ್ದಾನೆ. ತೇಜಸ್ವಿನಿ ಮೆಣಸಿನಕಾಯಿ ಶೇ.86.85 ಅಂಕ ಪಡೆದು ದ್ವೀತಿಯ, ಹರಿಹರನ್ ಚಂದ್ರಶೇಖರ್ ಶೇ. 85.28 ಅಂಕ ಪಡೆದು ತೃತಿಯ ಸ್ಥಾನ, ಆಶಾ ಮಣ್ಣನ್ನವರ ಶೇ. 78.42 ಅಂಕ ಪಡೆದು 4ನೇ ಸ್ಥಾನ, ವಿಜಯಲಕ್ಷ್ಮೀ ಕಾಗಿ ಶೇ. 78 ಅಂಕ ಪಡೆದು 5ನೇ ಸ್ಥಾನ ಪಡೆದಿದ್ದಾರೆ.

ಮಹಾವಿದ್ಯಾಲಯಕ್ಕೆ ಕೀರ್ತಿ ತಂದ ವಿದ್ಯಾರ್ಥಿಗಳ ಸಾಧನೆಯನ್ನು ಸಂಸ್ಥೆಯ ಚೇರಮನ್ ಎನ್.ಎಮ್. ಕುಡತರಕರ, ಪ್ರಾಚಾರ್ಯ ಬಿ.ಎಸ್. ಹಿರೇಮಠ, ಸಂಸ್ಥೆಯ ಕಾರ್ಯದರ್ಶಿ ಮಂಜುನಾಥ ಕುಡತರಕರ, ಆಡಳಿತಾಧಿಕಾರಿ ಕಿಶೋರ ಮುದಗಲ್ಲ, ಸಂಸ್ಥೆಯ ನಿರ್ದೇಶಕರಾದ ಸಂಜಯ ಕುಡತರಕರ, ಚೇತನ ಕುಡತರಕರ, ಬಿಕಾಂ ವಿಭಾಗದ ಸಂಯೋಜಕರಾದ ಪ್ರೊ. ಅಲ್ವಿನಾ ಡಿ ಹಾಗೂ ಸಿಬ್ಬಂದಿ ವರ್ಗದವರು ಶ್ಲಾಘಿಸಿದ್ದಾರೆ.


Spread the love

LEAVE A REPLY

Please enter your comment!
Please enter your name here