Home Crime News Mandya Breaking: ರೈಲಿಗೆ ತಲೆಕೊಟ್ಟು 24 ವರ್ಷದ ಯುವಕ ಸೂಸೈಡ್!

Mandya Breaking: ರೈಲಿಗೆ ತಲೆಕೊಟ್ಟು 24 ವರ್ಷದ ಯುವಕ ಸೂಸೈಡ್!

0
Mandya Breaking: ರೈಲಿಗೆ ತಲೆಕೊಟ್ಟು 24 ವರ್ಷದ ಯುವಕ ಸೂಸೈಡ್!
Spread the love

ಮಂಡ್ಯ: 24 ವರ್ಷದ ಯುವಕನೋರ್ವ ರೈಲಿಗೆ ತಲೆ ಕೊಟ್ಟು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಜಿಲ್ಲೆಯ ಶ್ರೀರಂಗಪಟ್ಟಣ ತಾಲೂಕಿನ ಪಶ್ಚಿಮ ವಾಹಿನಿಯ ಬಳಿ ಜರುಗಿದೆ. ಮೈಸೂರಿನ ಖಾಸಗಿ ಸಂಸ್ಥೆಯಲ್ಲಿ ಕೆಲಸ ಮಾಡಿಕೊಂಡಿದ್ದ 24 ವರ್ಷದ ಆಕಾಶ್ ಮೃತ ಯುವಕ. ಈತ ಶ್ರೀರಂಗಪಟ್ಟಣ ತಾಲೂಕಿನ ಅರಕೆರೆ ಗ್ರಾಮದ ನಿವಾಸಿ.

ರೈಲು ಹರಿದ ರಭಸಕ್ಕೆ ರುಂಡ ಮತ್ತು ಮುಂಡ ಬೇರ್ಪಟ್ಟಿವೆ. ಆತ್ಮಹತ್ಯೆಗೆ ನಿಖರ ಕಾರಣ ತಿಳಿದು ಬಂದಿಲ್ಲ. ಸದ್ಯ ಘಟನಾ ಸ್ಥಳಕ್ಕೆ ಮೈಸೂರು ರೈಲ್ವೇ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿಕೊಂಡಿದ್ದಾರೆ.


Spread the love

LEAVE A REPLY

Please enter your comment!
Please enter your name here