ಹಾಸನ:- ಹಾಸನದ ಮೂರು ಖಾಸಗಿ ಶಾಲೆಗಳಿಗೆ ಬಾಂಬ್ ಸ್ಫೋಟಿಸುವುದಾಗಿ ಕಿಡಿಗೇಡಿ ಓರ್ವ ಬೆದರಿಕೆ ಸಂದೇಶವುಳ್ಳ ಇ-ಮೇಲ್ ಕಳುಹಿಸಿದ್ದಾನೆ.
Advertisement
ಹಾಸನದ ವಿಜಯನಗರ ಇಂಡಸ್ಟ್ರಿಯಲ್ ಏರಿಯಾ, ಕೆಆರ್ ಪುರಂದಲ್ಲಿರುವ ವಿದ್ಯಾಸೌಧ ಪಬ್ಲಿಕ್ ಶಾಲೆ, ವಿದ್ಯಾಸೌಧ ಕಿಡ್ಸ್ ಶಾಲೆಗೆ ಇ-ಮೇಲ್ ಬಂದಿದೆ. 1 ಗಂಟೆಗೆ ಕಟ್ಟಡ ಸ್ಫೋಟಿಸುವುದಾಗಿ ದುಷ್ಕರ್ಮಿ ಸಂದೇಶ ಕಳುಹಿಸಿದ್ದಾನೆ.
ಸದ್ಯ ಈ ಬಗ್ಗೆ ಹಾಸನ ನಗರ, ಗ್ರಾಮಾಂತರ ಠಾಣೆಗೆ ಪ್ರಾಂಶುಪಾಲರು ದೂರು ನೀಡಿದ್ದಾರೆ. ತಡರಾತ್ರಿಯೇ ಸ್ಥಳಕ್ಕೆ ಧಾವಿಸಿರುವ ಪೊಲೀಸರು ಪರಿಶೀಲನೆ ನಡೆಸಿದ್ದಾರೆ. ಇನ್ನೂ ವಿದ್ಯಾಸೌಧ ಶಾಲೆ ಹಾಗೂ ಕಿಡ್ಸ್ ಶಾಲೆ ಮಂಜೇಗೌಡ ಎಂಬುವವರಿಗೆ ಸೇರಿದ್ದಾಗಿದೆ ಎಂದು ತಿಳಿದು ಬಂದಿದೆ.