HomeGadag Newsಮೃತ ಮಾಜಿ ಸೈನಿಕನಿಗೆ ಗೌರವ ನಮನ

ಮೃತ ಮಾಜಿ ಸೈನಿಕನಿಗೆ ಗೌರವ ನಮನ

For Dai;y Updates Join Our whatsapp Group

Spread the love

ವಿಜಯಸಾಕ್ಷಿ ಸುದ್ದಿ, ಗದಗ: ಸಮೀಪದ ಹರ್ಲಾಪೂರ ಗ್ರಾಮದ ಹೆಮ್ಮೆಯ ಸುಪುತ್ರ, ಮಾಜಿ ವೀರಯೋಧ ಹಾಗೂ ಗದಗ ಪಿಐಡಿ ಬ್ಯಾಂಕ್ ಮಾಜಿ ಅಧ್ಯಕ್ಷ ಮಾರುತಿರಡ್ಡಿ ಕೊಣ್ಣೂರ ಅವರು ತಮ್ಮ 61ನೇ ವಯಸ್ಸಿನಲ್ಲಿ ಶನಿವಾರ ಮಧ್ಯಾಹ್ನ ನಿಧನರಾದರು.

ಅವರು ಬಿಎಸ್‌ಎಫ್‌ನಲ್ಲಿ ಸುದೀರ್ಘ 35 ವರ್ಷಗಳ ಕಾಲ ಸೇವೆಯನ್ನು ಸಲ್ಲಿಸಿದ್ದಾರೆ. ಗದಗ ಜಿಲ್ಲಾ ಮಾಜಿ ಸೈನಿಕರ ಸಂಘ ಹಾಗೂ ಬೆಳಗಾವಿ ಜಿಲ್ಲಾ ಮುಂಡರಗಿ ಡಂಬಳ ಮಾಜಿ ಸೈನಿಕರ ಸಂಘದ ಸಹಯೋಗದಲ್ಲಿ ಮಾರುತಿರಡ್ಡಿ ಕೊಣ್ಣೂರ ಅವರ ಪಾರ್ಥಿವ ಶರೀರಕ್ಕೆ ಪುಷ್ಪ ನಮನ ಸಲ್ಲಿಸುವುದರ ಮೂಲಕ ರಾಷ್ಟ್ರಧ್ವಜದೊಂದಿಗೆ ಗೌರವ ಸಮರ್ಪಿಸಲಾಯಿತು. ಗದಗ ಜಿಲ್ಲಾ ಮಾಜಿ ಸೈನಿಕರ ಸಂಘದ ಅಧ್ಯಕ್ಷ ಬಸವಲಿಂಗಪ್ಪ ಮುಂಡರಗಿ ಹಾಗೂ ಬೆಳಗಾವಿ ಜಿಲ್ಲಾ ಅಧ್ಯಕ್ಷರು, ಸೈನಿಕರು ಗೌರವ ವಂದನೆ ಸಲ್ಲಿಸಿ ಮೃತರ ಪತ್ನಿ ನೇತ್ರಾವತಿ ಕೊಣ್ಣೂರರಿಗೆ ರಾಷ್ಟ್ರಧ್ವಜವನ್ನು ಹಸ್ತಾಂತರಿಸಿದರು.

ಈ ಸಂದರ್ಭದಲ್ಲಿ ಮಾಜಿ ಸೈನಿಕರಾದ ವೀರಪ್ಪ ಬಿಂಗಿ, ವಿಜಯಕುಮಾರ ಬಡಿಗೇರ, ಬಾಲಪ್ಪ ಲಕ್ಕುಂಡಿ, ತಿಪ್ಪರಡ್ಡಿ ಕೊಣ್ಣೂರ, ಶಿವಾನಂದ ಯಾಳವಾಡ, ಶರಣಪ್ಪಗೌಡ ಪಾಟೀಲ್, ಶಿವಾನಂದ ಕೊಣ್ಣೂರ, ರೈತ ಸಂಘದ ರಾಜ್ಯ ಉಪಾಧ್ಯಕ್ಷ ಅಂದಪ್ಪ ಹುರುಳಿ, ಗದಗ ಜಿಲ್ಲಾ ರೈತ ಸಂಘದ ಅಧ್ಯಕ್ಷ ಯಲ್ಲಪ್ಪ ಬಾಬರಿ, ವೆಂಕರಡ್ಡಿ ಚುಕುಂಕಲ್ಲ, ವಜ್ರಸಾಬ್ ತಳಕಲ್, ಶರಣಪ್ಪ ಜೋಗಿನ, ಮಲ್ಲಿಕಾರ್ಜುನ್ ಇದ್ಲಿ ಮುಂತಾದವರಿದ್ದರು.


Spread the love
Vijaya Sakshi
Vijaya Sakshi
Vijayasakshi is a Kannada Daily News Paper Publishing From Gadag. Get Latest Gadag District News Live Updates Online In Vijayasakshi.Com Vijayasakshi Kannada Daily Newspaper Provide News On Gadag District Including Karnataka, India News In Kannada. Contact-9448326533/9019256545 E-mail-vijayasakshidaily@gmail.com

LEAVE A REPLY

Please enter your comment!
Please enter your name here

E-Paper

E-paper

Must Read

spot_img
error: Content is protected !!