HomeGadag Newsಸಂಸ್ಥೆಯ ಕಾರ್ಯ ಬಡವರಿಗೆ ವರದಾನ

ಸಂಸ್ಥೆಯ ಕಾರ್ಯ ಬಡವರಿಗೆ ವರದಾನ

For Dai;y Updates Join Our whatsapp Group

Spread the love

ವಿಜಯಸಾಕ್ಷಿ ಸುದ್ದಿ, ಗದಗ: ರೋಟರಿ ಕ್ಲಬ್ ಗದಗ-ಬೆಟಗೇರಿ, ಜಿಲ್ಲಾ ಕಾರ್ಯಕ್ರಮ ವ್ಯವಸ್ಥಾಪಕರು, ಅಂಧತ್ವ ನಿವಾರಣಾ ವಿಭಾಗ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೊಸೈಟಿ ಗದಗ ಇವರ ಸಹಯೋಗದೊಂದಿಗೆ ರೋಟರಿ ಕ್ಲಬ್ ಗದಗ-ಬೆಟಗೇರಿ ವೆಲ್‌ಫೇರ್ ಸೊಸೈಟಿಯಲ್ಲಿ (ಜಿಲ್ಲಾ ಸ್ಟೇಡಿಯಂ ಹತ್ತಿರ) ನೇತ್ರ ತಪಾಸಣೆ ಹಾಗೂ ಕಣ್ಣಿನಲ್ಲಿ ಮಸೂರ ಅಳವಡಿಸುವ ಈ ಶಸ್ತ್ರ ಚಿಕಿತ್ಸಾ ಶಿಬಿರವನ್ನು ಏರ್ಪಡಿಸಲಾಗಿತ್ತು.

ಈ ಶಸ್ತ್ರ ಚಿಕಿತ್ಸಾ ಶಿಬಿರವನ್ನು ಲಿಂ. ಮಹಾಂತಪ್ಪ ಬಸಪ್ಪ ಬಡ್ನಿ ಇವರ ಸ್ಮರಣಾರ್ಥ ಪುಷ್ಪಲತಾ ಮಹಾಂತಪ್ಪ ಬಡ್ನಿ ಹಾಗೂ ಮಕ್ಕಳು ಗದಗ ಹಾಗೂ ಡಾ. ಶಿವಪುತ್ರಯ್ಯಾ ನಾಲತ್ವಾಡವಠ ಹಾಗೂ ಗಿರಿಜಾ ನಾಲತ್ವಾಡಮಠ ಗದಗ ವಹಿಸಿದ್ದರು. ಸುಮಾರು 65 ಜನ ರೋಗಿಗಳನ್ನು ತಪಾಸಣೆ ಮಾಡಿ ಶಸ್ತç ಚಿಕಿತ್ಸೆ ಅವಶ್ಯವಿದ್ದ ಹಾಗೂ ಯೋಗ್ಯರಾದ 29 ಜನರಿಗೆ ನೇತ್ರ ಶಸ್ತ್ರ ಚಿಕಿತ್ಸೆಯನ್ನು ಕೈಗೊಳ್ಳಲಾಯಿತು.

ಅಧ್ಯಕ್ಷತೆಯನ್ನು ರೋಟರಿ ಕ್ಲಬ್ ಗದಗ-ಬೆಟಗೇರಿ ವೆಲ್‌ಫೇರ್ ಸೊಸೈಟಿಯ ಅಧ್ಯಕ್ಷರಾದ ಶ್ರೀಧರ ಸುಲ್ತಾನಪೂರ ವಹಿಸಿ ಸಂಸ್ಥೆಯ ಕಾರ್ಯಕ್ರಮ ಕುರಿತು ಮಾಹಿತಿ ನೀಡಿದರು. ಲಿಂಗೈಕ್ಯ ಮಹಾಂತಪ್ಪ ಬಡ್ನಯವರ ಸಾಮಾಜಿಕ ಕಾರ್ಯಗಳನ್ನು ಸಂಸ್ಥೆಯ ಮಾಜಿ ಅಧ್ಯಕ್ಷರಾದ ಮಹಾಂತೇಶ ಬಾತಾಖಾನಿಯವರು ಸ್ಮರಿಸಿ ನುಡಿನಮನ ಸಲ್ಲಿಸಿದರು. ರೋಟರಿ ಸಂಸ್ಥೆಯ ಹಿರಿಯ ಸದಸ್ಯರಾದ ಡಾ. ಶಿವಪುತ್ರಯ್ಯಾ ನಾಲತ್ವಾಡವಠ ಹಾಗೂ ಗಿರಿಜಾ ನಾಲತ್ವಾಡಮಠ, ಪುಷ್ಪಲತಾ ಬಡ್ನಿ ಹಾಗೂ ಮುರಗೇಶ ಬಡ್ನಿಯವರು ವೇದಿಕೆಯ ಮೇಲೆ ಉಪಸ್ಥಿತರಿದ್ದರು.

ನೇತ್ರ ಸಹಾಯಕರಾದ ರುದ್ರೇಶ ಶಸ್ತç ಚಿಕಿತ್ಸೆಗೆ ಒಳಗಾದ ರೋಗಿಗಳು ತಮ್ಮ ಕಣ್ಣಿನ ಆರೋಗ್ಯವನ್ನು ಯಾವ ರೀತಿ ಕಾಳಜಿವಹಿಸಬೇಕೆಂದು ತಿಳಿಸಿದರು. ರೋಟರಿ ಸಂಸ್ಥೆಯ ಅಧ್ಯಕ್ಷರಾದ ರೊ. ಆರ್.ಬಿ. ಉಪ್ಪಿನ ಸ್ವಾಗತಿಸಿದರು. ಅಸಿಸ್ಟಂಟ್ ಗವರ್ನರ್ ಶಿವಾಚಾರ್ಯ ಎಸ್. ಹೊಸಳ್ಳಿಮಠ ಕಾರ್ಯಕ್ರಮ ನಿರೂಪಿಸಿದರು. ಖಜಾಂಚಿ ರೊ. ಚನ್ನವೀರಪ್ಪ ಹುಣಶಿಕಟ್ಟಿ ವಂದಿಸಿದರು.

ರೋಟರಿ ಸಂಸ್ಥೆಯ ಸದಸ್ಯರಾದ, ರೊ. ಶ್ರೀಧರಗೌಡ ಧರ್ಮಾಯತ, ರೊ. ಮಹೇಶ ಹಿಂಡಿ, ರೊ. ಡಾ. ರಾಜೇಂದ್ರ ಗಚ್ಛಿನಮಠ, ರೊ. ಡಾ. ಪ್ರದೀಪ ಉಗಲಾಟ, ರೊ. ಡಾ. ಕಮಲಾಕ್ಷಿ ಅಂಗಡಿ, ರೊ. ಅಕ್ಷಯ ವ್ಹಿ.ಶೆಟ್ಟಿ, ರೊ. ವಿಶ್ವನಾಥ ಯಳಮಲಿ, ಡಾ. ವಿನಯ್ ಟಿಕಾರೆ, ಪ್ರತಿಭಾ ಬಡ್ನಿ ಮುಂತಾದವರು ಉಪಸ್ಥಿತರಿದ್ದರು. ಶಿಬಿರದಲ್ಲಿ ರುದ್ರೇಶ, ನೇತ್ರಾ, ಜ್ಯೋತಿ ದೊಡ್ಡಮನಿ, ದೀಪಾ, ಆನಂದ ಸಿಂಗ್ರಿ ನೇತ್ರ ಶಸ್ತç ಚಿಕಿತ್ಸೆ ನಡೆಸಲು ಸಹಕಾರ ನೀಡಿದರು.

ಕಾರ್ಯಕ್ರಮವನ್ನು ಉದ್ಘಾಟಿಸಿದ ಶ್ರೀಮದ್ ಘನಲಿಂಗ ಚಕ್ರವರ್ತಿ ಅಭಿನವ ಪಂಚಾಕ್ಷರ ಶಿವಾಚಾರ್ಯ ಮಹಾಸ್ವಾಮಿಗಳು ಮಾತನಾಡಿ, ರೋಟರಿ ಸಂಸ್ಥೆಯು ಕೈಗೊಳ್ಳುತ್ತಿರುವ ನಿರಂತರ ನೇತ್ರ ತಪಾಸಣೆ ಹಾಗೂ ಶಸ್ತç ಚಿಕಿತ್ಸಾ ಶಿಬಿರವು ಬಡವರಿಗೆ ವರವಾಗಿದ್ದು ಅವರ ದೃಷ್ಟಿಯನ್ನು ಮರಳಿ ಪಡೆಯಲು ನೆರವಾಗಿದೆ. ದಾನಿಗಳಿಂದ ನಡೆಯುತ್ತಿರುವ ಈ ಸಂಸ್ಥೆಯು ಕಾರ್ಯ ಉತ್ತಮವಾಗಿದ್ದು ಪ್ರತಿಯೊಬ್ಬರೂ ಇಂತಹ ಸಂಸ್ಥೆಗೆ ಕೈಲಾದಷ್ಟು ದಾನ ನೀಡಬೇಕು ಎಂದರು.


Spread the love
Vijaya Sakshi
Vijaya Sakshi
Vijayasakshi is a Kannada Daily News Paper Publishing From Gadag. Get Latest Gadag District News Live Updates Online In Vijayasakshi.Com Vijayasakshi Kannada Daily Newspaper Provide News On Gadag District Including Karnataka, India News In Kannada. Contact-9448326533/9019256545 E-mail-vijayasakshidaily@gmail.com

LEAVE A REPLY

Please enter your comment!
Please enter your name here

E-Paper

E-paper

Must Read

spot_img
error: Content is protected !!