ಧಾರವಾಡ: ನಕಲಿ ನೋಟು ಕೊಟ್ಟು ಮಾಜಿ ಯೋಧನಿಗೆ ಪಂಗನಾಮ!

0
Spread the love

ಧಾರವಾಡ:– ಧಾರವಾಡ ಉಪ ನೋಂದಣಿ ಕಚೇರಿ ಆವರಣದಲ್ಲಿ ಹಣ ಎಂದು ಪೇಪರ್ ಬಂಡಲ್ ಕೊಟ್ಟು ಮಾಜಿ ಯೋಧನಿಗೆ ವಂಚಿಸಿರುವ ಘಟನೆ ಜರುಗಿದೆ. ವಂಚನೆಗೆ ಒಳಗಾದವರನ್ನು ಮಾಜಿ ಯೋಧ ಸುರೇಶ ತಡಕೋಡ, ಧರ್ಮೇಂದ್ರ ರಾಯನಗೌಡರ ಹಾಗೂ ಸುರೇಶ ಬಳಗೇರ ಎಂದು ಗುರುತಿಸಲಾಗಿದೆ. ಇವರು ಧಾರವಾಡ ತಾಲೂಕಿನ ಶಿವಳ್ಳಿಯ ಸುವರ್ಣಾ ಮುದ್ದಿ ಎಂಬುವವರಿಂದ 6 ಎಕರೆ ಜಮೀನು ಖರೀದಿಗೆ ಮುಂದಾಗಿ, 2023ರಲ್ಲಿ ಇದಕ್ಕೆ ಸಂಬಂಧಿಸಿದಂತೆ ಖರೀದಿ ಒಪ್ಪಂದ ಕೂಡ ಮಾಡಿಕೊಂಡು 24 ಲಕ್ಷ ರೂಪಾಯಿ ಕೊಟ್ಟಿದ್ದರು. ಆದರೆ, ಜಮೀನು ದರ ಹೆಚ್ಚಾಗಿದ್ದರಿಂದ ಸುವರ್ಣಾ ಮುದ್ದಿ ಜಮೀನು ಮಾರಲು ಹಿಂದೇಟು ಹಾಕಿದ್ದು, ಖರೀದಿ ಒಪ್ಪಂದ ರದ್ದು ಮಾಡಿಕೊಳ್ಳೋಣ ಎಂದಿದ್ದರು.

Advertisement

ಹೀಗಾಗಿ, ಐದು ಲಕ್ಷ ರೂಪಾಯಿ ಸಹ ಮರಳಿ ಕೊಟ್ಟು, ಉಳಿದ 19 ಲಕ್ಷ ರೂಪಾಯಿ ಒಪ್ಪಂದ ರದ್ದತಿಗೆ ಸಹಿಯಾದ ಬಳಿಕ ಕೊಡುವ ಮಾತಾಗಿತ್ತು. ಅದರಂತೆ ಇವತ್ತು ಸುವರ್ಣಾ ಮುದ್ದಿ, ಮಗಳು ದಾನೇಶ್ವರಿ ಧಾರವಾಡ ಉಪನೋಂದಣಿ ಕಚೇರಿಗೆ ಬಂದಿದ್ದರು. ಈ ವೇಳೆ ಇವರಿಗೆ ಹಣ ತೋರಿಸಿ, ಸಹಿ ಮಾಡಿದ ಮೇಲೆ ಹಣದ ಬಂಡಲ್ ಕೊಡುವುದಾಗಿ ಹೇಳಿದ್ದಾರೆ. ಅದರಂತೆ ಸಹಿ ಮಾಡಿ ಹೊರಗೆ ಬಂದಾಗ, ಹಣದ ಬಂಡಲ್ ಸಹ ಕೊಟ್ಟಿದ್ದಾರೆ. ಆದರೆ ಕಾರಿನಲ್ಲಿ ಬಂದು ಹಣದ ಬಂಡಲ್ ತೆಗೆದು ನೋಡಿದಾಗ ಶಾಕ್ ಆಗಿದೆ. ಏಕೆಂದರೆ 1 ಲಕ್ಷ 20 ಸಾವಿರ ಹಣ ಮಾತ್ರ ಕರೆನ್ಸಿ ಇದ್ದರೇ ಉಳಿದೆಲ್ಲವೂ ಹಾಳೆಗಳನ್ನು ನೋಟಿನಂತೆ ಕಟ್ ಮಾಡಿ ಬಂಡಲ್ ನೀಡಿ ಮೋಸ ಮಾಡಿದ್ದಾರೆ ಎಂಬುವುದು ಸುರೇಶ ತಡಕೋಡ ಮತ್ತು ತಂಡದ ಆರೋಪವಾಗಿದೆ.

ಸದ್ಯ ಹಣದ ಬಂಡಲ್ ಎಂದು ನಂಬಿ ಮೋಸ ಹೋಗಿರುವ ಈ ಮೂವರೂ ಈಗ ಧಾರವಾಡ ಉಪನಗರ ಠಾಣೆ ಪೊಲೀಸರಿಗೆ ಮಾಹಿತಿ ನೀಡಿದ್ದು, ಸ್ಥಳಕ್ಕೆ ಬಂದ ಪೊಲೀಸರು ಕಾರಿನಲ್ಲಿರುವ ಪೇಪರ್ ಹಾಳೆಯ ಬಂಡಲ್​ಗಳನ್ನು ಪರಿಶೀಲನೆ ಸಹ ಮಾಡಿದ್ದಾರೆ.


Spread the love

LEAVE A REPLY

Please enter your comment!
Please enter your name here