ಧಾರವಾಡ:- ಮನೆ ಕಳ್ಳತನ ಮಾಡುವುದನ್ನೇ ಕಾಯಕ ಮಾಡಿಕೊಂಡಿದ್ದ ಆರು ಮನೆಗಳ್ಳರನ್ನು ಬಂಧಿಸುವಲ್ಲಿ ನವಲಗುಂದ ಪೊಲೀಸರು ಯಶಸ್ವಿಯಾಗಿದ್ದಾರೆ.
ಆರೋಪಿಗಳು, ಧಾರವಾಡ ಜಿಲ್ಲೆಯ ನವಲಗುಂದ, ಬೆಳಗಾವಿ ಜಿಲ್ಲೆಯ ಸವದತ್ತಿ ಸೇರಿ ಹಲವು ಕಡೆ ಕಳ್ಳತನ ಮಾಡಿದ್ದರು. ಇದರ ದೂರು ಆಧರಿಸಿ ತನಿಖೆ ಕೈಗೊಂಡ ನವಲಗುಂದ ಪೊಲೀಸರು ಇದೀಗ ಆರು ಆರೋಪಿಗಳನ್ನು ಬಂಧಿಸಿದ್ದಾರೆ. ಬಂಧಿತರಿಂದ ಒಟ್ಟು 26 ಲಕ್ಷ ಮೌಲ್ಯದ 267 ಗ್ರಾಂ ಚಿನ್ನ, 470 ಗ್ರಾಂ ಬೆಳ್ಳಿ ಹಾಗೂ 2 ಬೈಕ್ ವಶಕ್ಕೆ ಪಡೆಯಲಾಗಿದೆ.
ಬಂಧಿತರು ನವಲಗುಂದ ಹಾಗೂ ಸವದತ್ತಿ ಭಾಗದಲ್ಲೇ ಹೆಚ್ಚಾಗಿ ಕಳ್ಳತನ ಮಾಡುತ್ತಿದ್ದರು ಎಂದು ಪೊಲೀಸರ ಪ್ರಾಥಮಿಕ ತನಿಖೆಯಲ್ಲಿ ತಿಳಿದು ಬಂದಿದೆ. ನವಲಗುಂದ ಠಾಣೆಯ ಸಿಪಿಐ ರವಿ ಕಪ್ಪತನವರ್ ನೇತೃತ್ವದಲ್ಲಿ ಕಳ್ಳರನ್ನ ಬಂಧಿಸಿರುವ ಪೊಲೀಸರು ಆರೋಪಿಗಳನ್ನು ಜೈಲಿಗೆ ಅಟ್ಟಿದ್ದಾರೆ.



