ಚಿತ್ರದುರ್ಗ:-ಚಿತ್ರದುರ್ಗ ನಗರದ ಕೊಳಗೋಟೆಯಲ್ಲಿ ಕಟ್ಟಡ ಮೇಲಿದ್ದ ಟವರ್ ಜೋರು ಗಾಳಿಗೆ ನೆಲಕ್ಕುರುಳಿದ ಘಟನೆ ಜರುಗಿದೆ. ಟವರ್ ಬಿದ್ದ ಪರಿಣಾಮ ಮನೆಗೆ ಹಾನಿ ಆಗಿದ್ದು, ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ.
ಇನ್ನೂ ಮರ್ಚೆಂಟ್ ಬ್ಯಾಂಕ್ ಕಟ್ಟಡದ ಮೇಲ್ಚಾವಣಿಯಲ್ಲಿ ನಿರ್ಮಿಸಲಾಗಿದ್ದ ಟವರ್ ಬಿದ್ದ ರಭಸಕ್ಕೆ ಮಾಯಪ್ಪ ಎಂಬುವವರ ಮನೆಯ ಶೀಟ್ ಗಳು ಪುಡಿಪಡಿ ಆಗಿ ಮನೆಯೊಳಗಿದ್ದ ವಸ್ತುಗಳಿಗೆ ಹಾನಿ ಆಗಿದೆ. ಕೂಡಲೇ ಮರ್ಚೆಂಟ್ ಬ್ಯಾಂಕ್ ಸಿಬ್ಬಂದಿಗಳು ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ. ಬಡಾವಣೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ಜರುಗಿದೆ.



