ಎಂಥಾ ಮೋಸ: ಬ್ರ್ಯಾಂಡ್ ಎಂದು ಬಟ್ಟೆ ಖರೀದಿಸೋ ಮಧ್ಯಮವರ್ಗದವರು ನೋಡಲೇಬೇಕಾದ ಸುದ್ದಿ!

0
Spread the love

ಬೆಂಗಳೂರು:- ನಗರದ ಸಿದ್ಧಾಪುರ ಪೊಲೀಸರು ಕಾರ್ಯಾಚರಣೆ ನಡೆಸಿ ಬ್ರ್ಯಾಂಡ್ ಎಂದು ನಕಲಿ ಬಟ್ಟೆ ಸೇಲ್ ಮಾಡಿ ಜನರಿಗೆ ಮೋಸ ಮಾಡುತ್ತಿದ್ದ ಗೋಡೌನ್ ಮೇಲೆ ದಾಳಿ ಮಾಡಿದ್ದಾರೆ. ಸಿದ್ದಾಪುರದ ಭೈರಸಂದ್ರದಲ್ಲಿ ಅವಿನಾಶ್ ಎಂಬುವವರಿಗೆ ಸೇರಿದ್ದ ಗೋಡೌನ್ ಮೇಲೆ ದಾಳಿ ನಡೆಸಿದಾಗ ಬ್ರ್ಯಾಂಡ್ ಹೆಸರಲ್ಲಿ ನಕಲಿ ಬಟ್ಟೆಗಳು ಪತ್ತೆಯಾಗಿದೆ. ಪ್ರತಿಷ್ಟಿತ ನೈಕಿ, ಪೂಮಾ ಹೆಸರಲ್ಲಿ ನಕಲು ಮಾಡಿ ಎಂಟು ಸಾವಿರ ಬೆಲೆಯ ಬ್ರಾಂಡೆಡ್ ಬಟ್ಟೆ ಎರಡು ಸಾವಿರಕ್ಕೆ ಸೇಲ್ ಮಾಡುತ್ತಿದ್ದರು. ಶರ್ಟ್ ಪ್ಯಾಂಟ್ ಮಾತ್ರವಲ್ಲ ಒಳ ಉಡುಪು ಕೂಡ ನಕಲಿ ಮಾಡಿ ಮಾರಾಟ ಮಾಡುತ್ತಿದ್ದರು.

Advertisement

ಕೂಡಲೇ ಮಾಹಿತಿ ಆಧರಿಸಿ ಸಿದ್ದಾಪುರ ಪೊಲೀಸರು ದಾಳಿ ಮಾಡಿ ಲಕ್ಷಾಂತರ ಮೌಲ್ಯದ ನಕಲಿ ಬಟ್ಟೆಯನ್ನು ಸೀಜ್ ಮಾಡಿದ್ದಾರೆ. ಆರೋಪಿ ಅವಿನಾಶ್, ದೆಹಲಿಯಿಂದ ನಕಲಿ ಬ್ರಾಂಡೆಂಡ್ ಬಟ್ಟೆ ತರಿಸಿ ಬೆಂಗಳೂರಿಗೆ ಸರಬರಾಜು ಮಾಡ್ತಿದ್ದ. ನೈಕಿ ಪೂಮಾ ಸಂಸ್ಥೆ ಪ್ರತಿನಿಧಿ ಶ್ರೀಜಿತ್ ಎಂಬುವವರು ನೀಡಿದ ದೂರಿನನ್ವಯ ಪೊಲೀಸರು ದಾಳಿ ಮಾಡಿದ್ದಾರೆ. ದಾಳಿ ವೇಳೆ ಲಕ್ಷಾಂತರ ಮೌಲ್ಯದ ಪೂಮಾ, ನೈಕಿ ಬ್ರಾಂಡ್ ನ ನಕಲಿ ಸ್ಫೊರ್ಟ್ಸ್ ವೇರ್, ಟ್ರಾಕ್ ಪ್ಯಾಂಟ್, ಟೀ ಶರ್ಟ್ಸ್, ಒಳ ಉಡುಪು ಪತ್ತೆಯಾಗಿದೆ. ಸಿದ್ದಾಪುರ ಪೊಲೀಸ್ ಠಾಣೆಯಲ್ಲಿ ಕಾಫಿ ರೈಟ್ಸ್ ಆಕ್ಟ್ ಅಡಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.


Spread the love

LEAVE A REPLY

Please enter your comment!
Please enter your name here